ಈ ರಾಶಿಯವರು ಅಪ್ಪಿತಪ್ಪಿಯು ಕಾಲಿಗೆ ಕಪ್ಪುದಾರವನ್ನು ಕಟ್ಟಬೇಡಿ? ಇದರಿಂದ ಕೆಟ್ಟ ಪರಿಣಾಮಗಳು ಪಕ್ಕಾ? ಇಲ್ಲಿದೆ ನೋಡಿ!!

ಸಾಮಾನ್ಯವಾಗಿ ಪ್ರತಿಯೊಬ್ಬರ ಕಾಲಿನಲ್ಲಿಯು ಕಪ್ಪುದಾರ (Black Thread) ವನ್ನು ನೋಡಿರಬಹುದು. ಕೆಲವೊಬ್ಬರು ಸ್ಟೈಲ್ (Style) ಗಾಗಿ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಇನ್ನು ಕೆಲವರು ಕೆಟ್ಟ ದೃಷ್ಟಿ ಅಥವಾ ವ್ಯಂಗ್ಯವನ್ನು ತಪ್ಪಿಸಲು ಕಪ್ಪು ದಾರವನ್ನು ಧರಿಸುತ್ತಾರೆ. ಆದರೆ ಹೆಚ್ಚಿನವರಿಗೆ ತಾವು ಯಾವ ಕಾರಣಕ್ಕಾಗಿ ಕಾಲಿಗೆ ಕಪ್ಪು ದಾರವನ್ನು ಕಟ್ಟಿದ್ದೇವೆ ಎನ್ನುವುದು ತಿಳಿದಿಲ್ಲ.

ಈ ಕಪ್ಪು ದಾರವನ್ನು ವಿಶೇಷವಾಗಿ ಪಾದಗಳು, ಗಂಟಲು, ಮಣಿಕಟ್ಟುಗಳು ಮತ್ತು ಸೊಂಟದ ಮೇಲೆ ಧರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಕಪ್ಪು ಬಣ್ಣವು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿ (Negative Energy) ಗಳಿಂದ ಮತ್ತು ವಿಶೇಷವಾಗಿ ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ ಎನ್ನಲಾಗುತ್ತದೆ.

ಆದರೆ ಈ ರಾಶಿಯವರು ಅಪ್ಪಿತಪ್ಪಿಯೂ ಕಾಲಿಗೆ ಕಪ್ಪುದಾರವನ್ನು ಕಟ್ಟಬಾರದು. ಹಾಗಾದ್ರೆ ಆ ರಾಶಿಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಜ್ಯೋತಿಷ್ಯದ ಪ್ರಕಾರವಾಗಿ , ಮೇಷ ಮತ್ತು ವೃಶ್ಚಿಕ ರಾಶಿಯ ಎರಡು ರಾಶಿಗಳ ಜನರು ಕಪ್ಪು ದಾರವನ್ನು ಧರಿಸಬಾರದು. ಈ ರಾಶಿಯವರು ಕಪ್ಪು ದಾರವನ್ನು ಕಟ್ಟಬಾರದು ಎನ್ನುವುದಕ್ಕೆ ಕಾರಣವು ಇವೆ.

ಮೇಷ ರಾಶಿ : ಮೇಷ ರಾಶಿಯ ಅಧಿಪತಿ ಮಂಗಳನಾಗಿದ್ದು, ಮಂಗಳನಿಗೆ ಕಪ್ಪು ಬಣ್ಣ ಬಹುದೂರ. ಹೀಗಾಗಿ ಈ ರಾಶಿಯವರು ಕಪ್ಪು ದಾರವನ್ನು ಧರಿಸಿದರೆ, ಜೀವನದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಕಪ್ಪು ದಾರವು ಮೇಷ ರಾಶಿಯ ಜನರ ಜೀವನದಲ್ಲಿ ಚಡಪಡಿಕೆ, ದುಃಖ ಮತ್ತು ವೈಫಲ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಈ ರಾಶಿಯವರು ಕಪ್ಪು ದಾರವನ್ನು ಕಟ್ಟುವಂತಿಲ್ಲ.

ವೃಶ್ಚಿಕ ರಾಶಿ : ಈ ರಾಶಿಯವರಿಗೂ ಅಧಿಪತಿಯೂ ಮಂಗಳ. ಹೀಗಾಗಿ ಈ ರಾಶಿಯ ಜನರು ಕಪ್ಪು ಬಣ್ಣವನ್ನು ಧರಿಸಬಾರದು. ಕಪ್ಪು ಬಣ್ಣವು ವೃಶ್ಚಿಕ ರಾಶಿಯವರ ಜೀವನದಲ್ಲಿ ತೊಂದರೆಗಳನ್ನು ತರಬಹುದು. ಕಪ್ಪು ದಾರವು ಮಂಗಳದ ಶುಭ ಪರಿಣಾಮವನ್ನು ನಿವಾರಿಸಿ, ಬಡತನಕ್ಕೆ ದಾರಿ ಮಾಡಿಕೊಡಬಹುದು. ಹೀಗಾಗಿ ಈ ಕಪ್ಪು ಬಣ್ಣದಿಂದ ಈ ರಾಶಿಯವರು ದೂರವಿರುವುದು ಉತ್ತಮ.

Leave a Reply

Your email address will not be published. Required fields are marked *