ಮಾಲ್ಡೀವ್ಸ್ ಬೀಚ್ ನಲ್ಲಿ ಮಾಚು ಮರೆಯಿಲ್ಲದೇ ಎಂಜಾಯ್ ಮಾಡುತ್ತಿರುವ ಜಹೀರ್ ಖಾನ್ ಹಾಗೂ ಸಾಗರಿಕಾ

ಕ್ರಿಕೆಟ್ ಲೋಕದವರನ್ನು ಬಾಲಿವುಡ್ ನಟ ನಟಿಯರು ಪ್ರೀತಿಸಿ ಮದುವೆಯಾಗುವುದು ಹೊಸದೇನಲ್ಲ. ನಟಿಯರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಲಿಟ್ಟಿರುವ ಕ್ರಿಕೆಟಿಗರ ಉದಾಹರಣೆಗಳು ಸಾಕಷ್ಟಿವೆ. ಟೀಮ್​ ಇಂಡಿಯಾ ಮಾಜಿ ವೇಗಿ​ ಜಹೀರ್ ಖಾನ್​ (Jahir Khan) ಸದ್ಯಕ್ಕೆ ತನ್ನ ಪತ್ನಿಯೊಂದಿಗೆ ವಿದೇಶಕ್ಕೇ ಹಾರಿದ್ದಾರೆ. ಪತ್ನಿ ಜೊತೆಗೆ ಮಾಲ್ಡೀವ್ಸ್​ಗೆ ತೆರಳಿದ್ದು, ಅಲ್ಲಿ ಜೊತೆಯಾಗಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ.

ಜಹೀರ್ (Jahir) ಮತ್ತು ಸಾಗರಿಕಾ ಘಾಟ್ಗೆ (Sagarika Ghatge) ಜೋಡಿ ಪ್ರೀತಿಸಸಿ ಮದುವೆ ಮಾಡಿಕೊಂಡವರು. ಇವರಿಬ್ಬರೂ ಬೇರೆ ಬೇರೆ ಧರ್ಮಕ್ಕೇ ಸೇರಿದವರಾಗಿದ್ದ ಕಾರಣ, ತಮ್ಮ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟಿದ್ದರು. ಈ ಜೋಡಿ ಹೊಸ ಜೀವನಕ್ಕೆ ಕಾಲಿಡುವವರೆಗೂ ಇವರಿಬ್ಬರ ನಡುವೆ ಪ್ರೀತಿಯಿದೆ ಎನ್ನುವುದು ಯಾರಿಗೂ ಕೂಡ ತಿಳಿದಿರಲಿಲ್ಲ.

ಇದೀಗ ಈ ಜೋಡಿ ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದು ಪ್ರವಾಸದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ವೃತ್ತಿ ಜೀವನದಲ್ಲಿ ಬಿಡುವು ಮಾಡಿಕೊಂಡು, ಕ್ರಿಕೆಟ್ ಆಟಗಾರ ಜಹೀರ್, ಮಾಲ್ಡೀವ್ಸ್​ (Maldives) ಗೆ ತೆರಳಿದ್ದು, ಅಲ್ಲಿ ಬೀಚ್​​​ನಲ್ಲಿ ಸೆರೆ ಹಿಡಿದ ಹಾಟ್​ ಫೋಟೋಗಳನ್ನು ಸಾಗಾರಿಕ ಘಾಟ್ಗೆ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಹದಿಹರೆಯದ ಹುಡುಗಿಯಂತೆ ಕಾಣುವ ನಟಿಯ ಚಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆ ಬಾಲಿವುಡ್ ತುಂಬಾ ಮಿಸ್​​ ಮಾಡಿಕೊಳ್ಳುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಮಹಾರಾಷ್ಟ್ರ (Maharastra)ದ ರಾಜಮನೆತನಕ್ಕೆ ಸೇರಿದವರು ಈ ಸಾಗರಿಕಾ. ರಾಷ್ಟ್ರಮಟ್ಟದಲ್ಲಿ ಹಾಕಿ ಆಟಗಾರ್ತಿಯಾಗಿಯೂ ಮಿಂಚಿದ ಈ ಪ್ರತಿಭೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಗರಿಕಾರವರು ‘ಚಕ್ ದೇ ಇಂಡಿಯಾ’ (Check De India) ದಲ್ಲಿ ಸಿನಿಮಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಿನಿಮಾರಂಗದಲ್ಲಿ ಅವಕಾಶಗಳು ಬಂದು ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಅಷ್ಟೇನು ಯಶಸ್ಸು ಲಭಿಸಲಿಲ್ಲ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬಣ್ಣದ ಲೋಕದಿಂದ ಸ್ವಲ್ಪ ಮಟ್ಟಿಗೆ ದೂರ ಉಳಿದಿದ್ದರು. ಎರಡು ವರ್ಷಗಳ ಬಳಿಕ ಸಿನಿಮಾ ಕಿರುತೆರೆ ಹಾಗೂ ವೆಬ್ ಸೀರೀಸ್ ಎಂದು ಬ್ಯುಸಿಯಾದರು.

Leave a Reply

Your email address will not be published. Required fields are marked *