ಮಧ್ಯ ರಾತ್ರಿಯ ವೇಳೆ ಡೋರ್ ಬೆಲ್ ರಿಂಗ್ ಮಾಡುತ್ತಿರುವ ಯುವತಿಯರು, ಆದರೆ ಈ ಘಟನೆಯ ಹಿಂದಿನ ಅಸಲಿ ವಿಚಾರ ಬೇರೇನೇ ಇದೆ?

ಹೆಣ್ಣು ಮಕ್ಕಳು ತುಂಬಾ ಅಭಿವೃದ್ಧಿ ಹೊಂದುತ್ತಿದ್ದಂತೆ ಸಂಸ್ಕಾರ ಎನ್ನುವುದನ್ನು ಮರೆತು ವರ್ತಿಸುತ್ತಿದ್ದಾರೆ. ಒಂದು ಕಾಲದಲ್ಲಿ ಹೆಣ್ಣು ನಾಲ್ಕುಗೋಡೆಗಳ ನಡುವೆ ಇದ್ದ ಕಾಲವೊಂದಿತ್ತು. ಇದೀಗ ಕಾಲವು ಬದಲಾಗಿದ್ದು, ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡಿ ಹೆದರುವ ಕಾಲ ಬಂದಿದೆ ಎಂದರೆ ತಪ್ಪಿಲ್ಲ.

ಹೌದು, ರಾತ್ರಿ ಸುಂದರ ಯುವತಿಯರ ಕಿತಾಪತಿಯಿಂದ ನೆರೆಮನೆವಾಸಿಗಳ ನಿದ್ರೆಗೆ ಭಂಗ ಉಂಟಾಗುತ್ತಿರುವ ವಿಚಿತ್ರ ಘಟನೆ ಮುಂಬೈ (Mumbai) ನಲ್ಲಿ ನಡೆದಿದ್ದು ಇದೇನಪ್ಪಾ ಹೀಗೂ ಆಗಿದ್ಯಾ ಎಂದು ಅನಿಸಿದರೂ ನಿಜ.ತಡರಾತ್ರಿ ಯುವತಿಯರು ನೆರೆಮನೆಯ ಡೋರ್​ಬೆಲ್​ ರಿಂಗ್​ (Doorbell Ring) ಮಾಡಿ ತೊಂದರೆ ಕೊಡುತ್ತಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತಹ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಶ್ರೇಷ್ಠ್ ಪೊದ್ದಾರ್ (Shresta Poddar) ಎನ್ನುವವರು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೇ ಯುವತಿಯರ ಈ ವರ್ತನೆಯನ್ನು ಟೀಕಿಸಿದ್ದಾರೆ.ಈ ಘಟನೆಯೂ 2.30 ಕ್ಕೆ ನಡೆದಿದೆ ಎನ್ನಲಾಗಿದೆ. ಅದಲ್ಲದೇ,55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಹಿರಿಯರು ಮಾತ್ರ ವಾಸವಿರುವ ಕಟ್ಟಡದಲ್ಲಿ ಇಬ್ಬರು ವಿದ್ಯಾವಂತ ಹುಡುಗಿಯರು ಎಂಟ್ರಿ ಕೊಟ್ಟಿದ್ದಾರೆ.

ಅದಲ್ಲದೇ, ಮಧ್ಯರಾತ್ರಿಯಲ್ಲಿ ಡೋರ್​ಬಿಲ್​ ಬಾರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಳವಳ ವ್ಯಕ್ತಪಡಿಸುವ ಮೂಲಕ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ನೆಟ್ಟಿಗರೊಬ್ಬರು, ‘ಹೊರಗಡೆಯಿಂದ ಬಾಗಿಲುಗಳನ್ನು ಬಂದ್​ ಮಾಡುವುದು ಸ್ವೀಕಾರಾರ್ಹವಲ್ಲ, ವಿಶೇಷವಾಗಿ ಬೆಂಕಿಯ ಅವಘಡದಂತಹ ತುರ್ತು ಸಂದರ್ಭಗಳಲ್ಲಿ ಸಂಭವನೀಯ ಅಪಾಯಗಳನ್ನು ಪರಿಗಣಿಸಿ, ಯುವತಿಯರ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯವಿದೆ’ ಎಂದಿದ್ದಾರೆ.

ಆದರೆ ಈ ಯುವತಿಯರು ತಮಾಷೆಗಾಗಿ ಈ ರೀತಿ ಮಾಡಿರುವುದು ಎನ್ನುವುದು ತಿಳಿದು ಬಂದಿದೆ. ತಮಾಷೆಗಾಗಿ ಮಾಡಿದ್ದು ತಿಳಿಯುತ್ತಿದ್ದಂತೆ ಯುವತಿಯರ ವಿರುದ್ದ ದೂರು ದಾಖಲು ಮಾಡಿಲ್ಲ, ಬದಲಾಗಿ ಬುದ್ದಿವಾದ ಹೇಳಿ ಯುವತಿಯರನ್ನು ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *