ಅಭಿಷೇಕ್ ಅಂಬರೀಷ್ ಮದುವೆಯಲ್ಲಿ ರಮ್ಯಾ ಕೃಷ್ಣನ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಚಿಂದಿ ಡಾನ್ಸ್!! ರಾಧಿಕಾ ಪಂಡಿತ್ ಸುಸ್ತೋ ಸುಸ್ತು!!

yash dance video with ramya krishnan : ಚಂದನವನದ ಮೇರು ನಟ ದಿ. ಅಂಬರೀಶ್ (Ambareesh) ಹಾಗೂ ಸಂಸದೆ ಸುಮಲತಾ (Sumalatha) ಅವರ ಪುತ್ರ ಅಭಿಷೇಕ್ ಅಂಬರೀಶ್ , ಅವಿವಾ ಕಳೆದ ವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಸುಮಲತಾ ಅಂಬರೀಶ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ನಟ ಅಭಿಷೇಕ್ ಅವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರವು ಅದ್ದೂರಿಯಾಗಿ ನಡೆದಿತ್ತು. ಮದುವೆ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಆರತಕ್ಷತೆಯ ಬಳಿಕ ಅದ್ಧೂರಿ ಸಂಗೀತ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಸಾದ್ ಬಿದ್ದಪ್ಪ (Prasad Biddappa) ಆಪ್ತರಿಗಾಗಿ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ದರ್ಶನ್ (Darshan), ಯಶ್ (Yash), ರಮ್ಯಾಕೃಷ್ಣ (Ramyakrishna), ಮಾಲಾಶ್ರೀ (Malashree), ಗುರುಕಿರಣ್ (Gurukiran), ಜಯಪ್ರದಾ (Jayapradaa) , ಶಿವರಾಜ್ ಕುಮಾರ್ (Shivaraj Kumar), ಪ್ರಭುದೇವಾ (Prabhudevaa) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಈ ಸಂಗೀತ್ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸುಮಲತಾ ಅಂಬರೀಶ್ (Sumalatha Ambarish) ಜೊತೆ ಸೇರಿ ಡಾನ್ಸ್ ಮಾಡಿದ್ದು ಹೈ ಲೈಟ್ ಆಗಿತ್ತು. ಅದರ ಜೊತೆಗೆ ಜೂನಿಯರ್, ಸೀನಿಯರ್ ಎಂದು ದರ್ಶನ್- ಅಭಿಷೇಕ್ ಅವರ ಡಾನ್ಸ್ ಎಲ್ಲರ ಗಮನ ಸೆಳೆದಿತ್ತು. ಅದಲ್ಲದೇ ರಾಕಿಂಗ್ ಸ್ಟಾರ್ ಯಶ್ ( Rocking Star Yash) ಹಾಗೂ ಬಾಹುಬಲಿ (Bahubali) ಚಿತ್ರದಲ್ಲಿ ಶಿವಗಾಮಿ (Shivagami) ಪಾತ್ರದಲ್ಲಿ ನಟಿಸಿದ ನಟಿ ರಮ್ಯಾ ಕೃಷ್ಣನ್ (Ramya Krishanan) ಡಾನ್ಸ್ ಅಲ್ಲಿದ್ದವರನ್ನು ಸೆಳೆದಿತ್ತು. ಸಂಗೀತ್ ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಗ ಗಾಲವ್ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟ ನಟ ಅವಿನಾಶ್, ತಂದೆ ಮಗನ ಅಪರೂಪದ ಫೋಟೋ ವೈರಲ್!!

ಇನ್ನು, ಜೂನ್‌ 16 ಶುಕ್ರವಾರ ಮಂಡ್ಯ (Mandya) ದಲ್ಲಿ ಗೌಡರ ಸಂಪ್ರದಾಯದ ಪ್ರಕಾರ ಬೀಗರ ಔತಣವನ್ನು ಏರ್ಪಡಿಸಲಾಗಿದೆ. ಬೀಗರ ಔತಣಕೂಟಕ್ಕೆ ಭರದಿಂದ ಸಿದ್ಧತೆಯೂ ಮಾಡಲಾಗಿದೆ. ಅಂಬರೀಶ್‌ ಕುಟುಂಬದ ಆಪ್ತ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಬೀಗರ ಔತಣಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಸದ್ಯಕ್ಕೆ ಬೀಗರೂಟದ ತಯಾರಿಯೂ ಜೋರಾಗಿಯೇ ನಡೆಯುತ್ತಿದೆ.

 

Leave a Reply

Your email address will not be published. Required fields are marked *