womens inner feelings : ಹೆಣ್ಣು ಸಮಾಜದಲ್ಲಿ ಇಂದು ತನ್ನದೇ ಸ್ಥಾನಮಾನವನ್ನು ಸೃಷ್ಟಿಸಿಕೊಂಡು ಮನೆ ಮಕ್ಕಳು, ಕುಟುಂಬ ಹಾಗೂ ಉದ್ಯೋಗವೆಂದು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಈ ಹೆಣ್ಣು ಅದ್ಭುತ ಸೃಷ್ಟಿ, ಈ ಸೃಷ್ಟಿಗೆ ಕಾರಣಿಕರ್ತಳು ಈ ಹೆಣ್ಣು. ಹೀಗಾಗಿ ಹೆಣ್ಣಿನಿಂದಲೇ ಸೃಷ್ಟಿ, ಹೆಣ್ಣಿನಿಂದಲೇ ಸರ್ವನಾಶ ಎನ್ನುವ ಮಾತಿದೆ. ಇಂದಿಗೂ ಹೆಣ್ಣಿಗೆ ಮಹತ್ತರ ಸ್ಥಾನಮಾನವನ್ನು ನೀಡಲಾಗಿದೆ. ಹೆಣ್ಣು ಅಭಿವೃದ್ಧಿ ಹೊಂದಿ ಸ್ವಾವಲಂಬಿಯಾಗಿದ್ದರೂ ಕೂಡ ಇಂದಿಗೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
ಈ ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗಿಲ್ಲ. ಇನ್ನು ಮನುಷ್ಯರು ಯಾವ ಲೆಕ್ಕ, ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ.
ಈ ಕಾರಣದಿಂದಲೇ ಹಿರಿಯರು ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಹಿಂದಿಗಿಂತಲೂ ದೊರೆತ ಸ್ವಾತಂತ್ಯ, ಮತ್ತು ಗಂಡಿಗೆ ಸಮನಾಗಿ ಸಮಾಜದಲ್ಲಿ ದುಡಿದು ಬಾಳುವ ಅವಕಾಶದಿಂದಾಗಿ ಸ್ವಲ್ಪ ಮಟ್ಟಿಗೆ ಮುಕ್ತವಾಗಿ ಮಾತನಾಡುವಂತಹಳಾಗಿದ್ದಾಳೆ.
ಹೌದು, ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಲು, ಯಾವುದೇ ಕಡ್ಡಾಯ ಬಂಧನಕ್ಕೆ ಒಳಗಾಗದೇ ಮುಕ್ತವಾಗಿ ಮಾತನಾಡುವ ಹಕ್ಕನ್ನು ನೀಡಿದೆ. ಅದೇನೇ ಇದ್ದರೂ ಕೂಡ ಕೆಲವೊಮ್ಮೆ, ಹೆಂಗಸರು ಭಾವನೆಗಳನ್ನು ವ್ಯಕ್ತಪಡಿಸಿದರು ಸಹ ಗಂಡಸರು ಅದನ್ನು ಗ್ರಹಿಸಲು ವಿಫಲರಾಗುತ್ತಾರೆ. ಹೆಂಗಸರ ಮನಸ್ಸಿನಲ್ಲಿ ಏನಿರುತ್ತದೆ ಎಂದು ತಿಳಿದುಕೊಳ್ಳಲು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದ ಸಹ ಸಾಧ್ಯವಿಲ್ಲ ಎಂದು ಇಂದಿಗೂ ಕೂಡ ಪುರುಷರು ಹೇಳುತ್ತಾರೆ.
ಆದರೆ ಹೆಣ್ಣು ತೋರ್ಪಡಿಸುವ ಕೆಲವು ಸನ್ನೆಗಳು ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಬಿಂಬಿಸುತ್ತದೆ. ಮೊದಲನೇಯದಾಗಿ ಹೆಣ್ಣು ಮನೆಯ ಮೂಲೆಯಲ್ಲಿ ನಿಂತು ಕೊಂಡರೆ ಆಕೆ ಮನೆಯಲ್ಲಿ ಧೋರಣೆಗೆ ಒಳಗಾಗಿದ್ದಾಳೆ. ಪುರುಷನನ್ನು ಕಂಡರೆ ಭಯಭೀತಳಾಗಿದ್ದು, ಗಂಡಿಗೆ ಹೆದರಿಕೊಂಡರೆ ಜೀವನ ನಡೆಸುತ್ತಾಳೆ ಎನ್ನುವುದನ್ನು ಸೂಚಿಸುತ್ತದೆ.

ಎರಡನೇಯದಾಗಿ ನೇರವಾಗಿ ಕುಳಿತು ಕೊಳ್ಳುವುದು ಹಾಗೂ ಕಾಲು ಅಗಲಿಸಿ ಭುಜ ನೇರ ಮಾಡಿ ಕುಳಿತು ಕೊಳ್ಳುವ ಹೆಣ್ಣು ತಾನು ಸ್ವಾಭಿಮಾನಿ, ಸ್ವಾವಲಂಬಿ ಹಾಗೂ ಅಧಿಕಾರವನ್ನು ಚಲಾಯಿಸುವ ಮನಸ್ಥಿತಿ ಹೊಂದಿದ್ದಾಳೆ ಎನ್ನುವುದರ ಸೂಚಕವಾಗಿದೆ. ಮೂರನೇಯದಾಗಿ ತನ್ನ ಎದುರಿಗೆ ಇರುವ ವ್ಯಕ್ತಿಯ ಜೊತೆಗೆ ಮಾತನಾಡುವಾಗ ಆಕೆಯು ತನ್ನ ಕೂದಲು, ಒಡವೆಯ ಮೇಲೆ ಕೈಯಾಡಿಸುತ್ತ ಮಾತನಾಡುತ್ತಿದ್ದರೆ ಆಕೆಯು ವೈಯಾರ ಮಾಡುತ್ತಾಳೆ ಎಂದು ಕೊಂಡುಬಿಡುತ್ತೇವೆ.
ಆದರೆ ನಿಜವಾಗಿಯೂ ಆಕೆಯೂ ಒತ್ತಡಕ್ಕೆ ಒಳಗಾಗಿದ್ದಾಳೆ ಎನ್ನುವುದು ಪ್ರತಿಬಿಂಬಿಸುತ್ತದೆ. ನಾಲ್ಕನೇಯದಾಗಿ ಆಕೆಯು ತನ್ನಷ್ಟಕ್ಕೆ ತಾನು ನಗುತ್ತಿದ್ದರೆ, ಸಮಯವಲ್ಲದ ಸಮಯದಲ್ಲಿ ನಗುತ್ತಿದ್ದರೆ ಆಕೆಯು ನರ್ವಸ್ ಆಗಿದ್ದಾಳೆ ಎಂದರ್ಥ. ಐದನೇಯದಾಗಿ ಪ್ರತಿ ಮಾತಿಗೂ ಆಕೆಯು ತಲೆಯಲ್ಲಾಡಿಸುತ್ತಿದ್ದಾಳೆ ಎಂದರೆ ಆಕೆಯು ನಿಮ್ಮ ಮಾತನ್ನು ಕೇಳಿಸಿಕೊಂಡು ಅದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಾಳೆ ಎನ್ನುವುದರ ಸೂಚಕ.
ಕೆಲ್ವಿನ್ ಕ್ಲೇನ್ ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡಲು ನಟಿ ದಿಶಾ ಪಟಾನಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ಅಬ್ಬಬ್ಬಾ ಇಷ್ಟೊಂದು
ಅದರ ಜೊತೆಗೆ ಮಾತನಾಡುವಾಗ ಕೈ ಬಳಸಿದರೆ ಆಕೆಯು ನಿಯಂತ್ರಣ ಕಳೆದುಕೊಂಡಿದ್ದಾರೆ. ಕೈ ಮಿಲಾಯಿಸಿಕೊಳ್ಳುವಾಗ ಬಲ ಇಲ್ಲದಂತೆ ಕಂಡು ಬಂದರೆ ನಾಚಿಕೆ ಸ್ವಭಾವ ಹೊಂದಿದ್ದಾಳೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲದೇ ಜೋರಾಗಿ ಕೈ ಮಿಲಾಯಿಸಿದರೆ ಅತೀ ಹೆಚ್ಚು ಆತ್ಮ ವಿಶ್ವಾಸ ಹೊಂದಿದ್ದಾಳೆ ಎಂದರ್ಥ. ಆರನೇಯದಾಗಿ ಹೆಣ್ಣು ಮಕ್ಕಳು ಕೆಳ ತುಟಿಯನ್ನು ಕಚ್ಚಿ ಕೊಂಡರೆ ಪುರುಷರನ್ನು ಆಕರ್ಷಿಸುತ್ತಾರೆ ಎಂಬ ಅರ್ಥ ಅಲ್ಲ, ಬದಲಾಗಿ ಹೆಣ್ಣು ಒತ್ತಡದಲ್ಲಿದ್ದಾಗ, ಚಿಂತಿಸುತ್ತಿದ್ದಾಗ ಈ ರೀತಿ ಹೆಣ್ಣು ಕೆಳ ತುಟಿ ಕಚ್ಚುತ್ತಾಳೆ. ಒಟ್ಟಿನಲ್ಲಿ ಹೆಣ್ಣಿನ ಸನ್ನೆಯಲ್ಲಿಯೂ ನಾನಾ ರೀತಿಯ ವಿಚಾರಗಳ ಅಡಗಿದೆ.