ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆಬಾಗಲೇ ಬೇಕು, ಈ ಮೂರು ವಿಶಿಷ್ಟ ರಾಶಿಗಳು ಯಾವುದು. ಇಲ್ಲಿದೆ ನೋಡಿ !!!

Women astrology : ಹೆಣ್ಣು ಇಂದು ಗಂಡಿನಂತೆ ಸರಿಸಮಾನಳು. ಹೆಣ್ಣು ಸಮಾಜದಲ್ಲಿ ಇಂದು ತನ್ನದೇ ಸ್ಥಾನಮಾನವನ್ನು ಸೃಷ್ಟಿಸಿಕೊಂಡು ಮನೆ ಮಕ್ಕಳು, ಕುಟುಂಬ ಹಾಗೂ ಉದ್ಯೋಗವೆಂದು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ಇಷ್ಟೆಲ್ಲಾ ಬದಲಾವಣೆಗಳು ಆಗಿದ್ದರೂ ಕೂಡ ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ಇಂದಿಗೂ ಪುರುಷರಿಗೆ ಸಾಧ್ಯವಾಗಿಲ್ಲ.

ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿರುವುದು ವಿಪರ್ಯಾಸ. ಹೌದು, ಈ ಕಾರಣದಿಂದಲೇ ಹಿರಿಯರು ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲವೆಂದು ಹೇಳಿರುವುದು ಇರಬಹುದು. ಆದರೆ ಹೆಣ್ಣು ಕೆಲವೊಮ್ಮೆ ತನ್ನ ಅನಿಸಿಕೆಯನ್ನು ಯರ ಬಳಿ ಹೇಳಿಕೊಳ್ಳುವುದಿಲ್ಲ.

ಈ ಮೂರು ರಾಶಿಯ ಹೆಣ್ಣು ಮಕ್ಕಳ ಮುಂದೆ ತಲೆಬಾಗಲೇ ಬೇಕು, ಈ ಮೂರು ರಾಶಿಗಳು ಯಾವುದು ಗೊತ್ತಾ? Women astrology

ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಕೂಡ ಕಷ್ಟಕರ. ಹೀಗಾಗಿ ಪುರುಷರು ಆಕೆಯನ್ನು ಸೃಷ್ಟಿಸಿದ ಬ್ರಹ್ಮನಿಂದ ಸಹ ಸಾಧ್ಯವಿಲ್ಲ ಎಂದು ಇಂದಿಗೂ ಹೇಳುವುದಿದೆ. ಆದರೆ ಗಂಡು ಈ ಮೂರು ರಾಶಿಯ ಹೆಣ್ಣು ಮಕ್ಕಳಿಗೆ ತಲೆಬಾಗಬೇಕು. ಈ ಮೂರು ರಾಶಿಯ ಮಹಿಳೆಯರು ವಿಭಿನ್ನವಾಗಿಯೇ ಇರುತ್ತಾರೆ. ಈ ಮೂರು ರಾಶಿಯವರು ಯಾವುದೇ ಕಾರಣಕ್ಕೂ ಯಾರ ಮುಂದೆಯೂ ತಲೆ ಬಾಗುವುದಿಲ್ಲ.

ದೃಢ ನಿರ್ಧಾರ, ದೃಢ ಸಂಕಲ್ಪ ಹಾಗೂ ಮಾನಸಿಕ ಬಲವನ್ನು ಹೊಂದಿದ್ದು, ಹೀಗಾಗಿ ಈ ಮೂರು ರಾಶಿಯವರ ಮುಂದೆ ಗಂಡಸರು ಕೂಡ ತಲೆ ಬಾಗಿ ನಡೆಯಬೇಕಾಗುತ್ತದೆ. ಈ ಮೂರು ರಾಶಿ ಸ್ತ್ರೀಯರ ಜೊತೆಗೆ ವ್ಯವಹಾರ ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ವಾದ ವಿವಾದಗಳಿಂದ ಎದುರಿನ ವ್ಯಕ್ತಿಗಳನ್ನು ಬಾಗಿಸುತ್ತಾರೆ.

ಇಂತಹ ಮೂರು ರಾಶಿಗಳಲ್ಲಿ ಮೊದಲನೇಯ ರಾಶಿ ಮೇಷ ರಾಶಿ. ಮೇಷ ರಾಶಿಯ ಮಹಿಳೆಯರು ಬಹಳ ಆತ್ಮವಿಶ್ವಾಸವುಳ್ಳವರು ಆಗಿರುತ್ತಾರೆ. ಕೋಪಿಷ್ಠರಾಗಿದ್ದರೂ ಅನೇಕರ ಮೇಲೆ ಪ್ರಭಾವ ಬಿರುತ್ತಾರೆ. ನಾಯಕತ್ವ ಗುಣ ಹೆಚ್ಚಾಗಿದ್ದು, ಮಾತಿನಲ್ಲಿಯೇ ಕೋಪವನ್ನು ಕಾಣಬಹುದು. ಅಧಿಪತಿಕುಜವಾಗಿದ್ದು, ಕೋಪ ಮಾತ್ರ ಹೆಚ್ಚು ಇರುವುದಿಲ್ಲ.

ಎರಡನೇಯದಾಗಿ ಮಕರ ರಾಶಿ. ಈ ರಾಶಿಯ ಮಹಿಳೆಯರು ಗಂಭೀರವಾಗಿರುತ್ತಾರೆ. ಶಾಂತ ಸ್ವಭಾವದವರ ಇವರು ಕಡಿಮೆ ಮಾತನಾಡುತ್ತಾರೆ. ಈ ಕಾರಣದಿಂದಾಗಿ ಇವರುಗಳಿಗೆ ಸ್ನೇಹಿತರು ಬಹಳ ಕಡಿಮೆ ಇರುತ್ತಾರೆ. ಮೂರನೇಯದಾಗಿ ವೃಶ್ಚಿಕ ರಾಶಿ. ಈ ರಾಶಿಯವರು ಬಹಳ ಭಿನ್ನವಾಗಿ ಯೋಚಿಸುತ್ತಾರೆ. ಇವರ ಎದುರಿಗಿರುವ ವ್ಯಕ್ತಿ ಸುಳ್ಳು ಹೇಳುತ್ತಿದ್ದರೆ, ಅಂತಹವರನ್ನು ಬೇಗನೇ ಕಂಡು ಹಿಡಿಯುತ್ತಾರೆ.

ಅದರ ಜೊತೆಗೆ ಎಲ್ಲವನ್ನು ಅರ್ಥ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯುವ ಸಾಮರ್ಥ್ಯ ಇವರಲ್ಲಿದೆ. ತುಂಬಾ ಬುದ್ಧಿವಂತರಾಗಿರುವ ಇವರು ಅಷ್ಟು ಸುಲಭವಾಗಿ ಯಾರ ಮುಂದೆಯೂ ಸೋಲುವುದಿಲ್ಲ, ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಕೂಡ. ಎಲ್ಲಾ ವಿಚಾರದಲ್ಲಿಯೂ ಯೋಚನೆ ಮಾಡಿ ಮುಂದೆ ಸಾಗುತ್ತಾರೆ.

Leave a Reply

Your email address will not be published. Required fields are marked *