ಮದುವೆಯ ಬಗ್ಗೆ ಪ್ರತಿಯೊಬ್ಬರು ಕನಸು ಕಂಡಿರುತ್ತಾರೆ. ಮದುವೆ ಎಂದರೆ ಜೀವನದ ಅಧ್ಯಾಯ.. ಹೀಗಾಗಿ ಇಂತಹವರಿಗೆ ಇಂತಹವರೇ ಜೋಡಿ ಎಂದು ದೇವರು ಮೊದಲೇ ಬರೆದಿರುತ್ತಾರೆ. ಹೀಗಾಗಿ ಆ ಬರಹವನ್ನು ಬೇರೆ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ದೇವರು ಹಾಗೂ ಅಗ್ನಿಯ ಸಾಕ್ಷಿಯಾಗಿ ಹೆಣ್ಣು ಹಾಗೂ ಗಂಡು ಮದುವೆಯಾಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿಯೂ ದೇವರನ್ನೇ ಮದುವೆಯಾಗಿದ್ದಾಳೆ.
ಇದೇನಪ್ಪಾ ಹೀಗೆ ಎಂದೆನಿಸಬಹುದು. ದೇವರು ವಿಷ್ಣುವನ್ನೇ ಮದುವೆಯಾಗಿದ್ದು, ವಿಷ್ಣು ಪತ್ನಿ ಯಾರು ಎಂದು ಕೇಳಿದರೆ ನಾನೇ ಅಂತ ಹೇಳುತ್ತಿದ್ದಾಳೆ ರಾಜಸ್ಥಾನದ ಈ ಯುವತಿ. ಅಂದಹಾಗೆ, ರಾಜಸ್ಥಾನದಲ್ಲೊಂದು ಈ ವಿಚಿತ್ರವಾದ ಮದುವೆ ನಡೆದಿದೆ. ಪೂಜಾ ಸಿಂಗ್ ಎನ್ನುವ 30 ವರ್ಷದ ಯುವತಿಯೊಬ್ಬಳು ತನ್ನ ಗ್ರಾಮದ ವಿಷ್ಣು ದೇಗುಲದಲ್ಲಿ ದೇವರನ್ನೇ ಮದುವೆಯಾಗಿದ್ದಾಳೆ.
ದೇವಾಲಯದ ಪುರೋಹಿತರು, ಯುವತಿಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲ ಈ ವಿಚಿತ್ರ ಮದುವೆಗೆ ಸಾಕ್ಷಿಯಾಗಿದ್ದಾರೆ. ರಾಜಸ್ಥಾನ ರಾಜ್ಯದ ಜೈಪುರ್ ಜಿಲ್ಲೆಯ ಗೋವಿಂದಗಢ ಹೋಬಳಿ ಸಮೀಪದ ನರಸಿಂಘಪುರ ಎಂಬ ಗ್ರಾಮದ ಯುವತಿ ಈ ಪೂಜಾ ಸಿಂಗ್. ಗ್ರಾಮದ ವಿಷ್ಣು ದೇಗುಲದಲ್ಲಿ ಆಕೆ ವಿಷ್ಣು ಜೊತೆ ಮದುವೆಯಾಗಿದ್ದು, ಆಕೆಯ ಮದುವೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ರೀತಿ ನಿರ್ಧಾರದ ತೆಗೆದು ಕೊಳ್ಳಲು ಕಾರಣ ?
ಶ್ರೀ ಹರಿಯನ್ನೇ ತನ್ನ ಪತಿಯೆನ್ನುವುದಾ ಗಿ ಹೇಳುತ್ತಿದ್ದಾಳೆ. ಈ ರೀತಿ ನಿರ್ಧಾರದ ತೆಗೆದು ಕೊಳ್ಳಲು ಕಾರಣವಿದೆ. ಹೌದು, ಪೂಜಾ ಬಾಲ್ಯದಿಂದಲೂ ತಂದೆ-ತಾಯಿಯ ನಡುವೆ ಜಗಳ, ಹೊಡೆತಗಳನ್ನು ನೋಡುತ್ತಾ ಬೆಳೆದಳು. ಹಾಗಾಗಿ ನನ್ನ ಜೀವನದಲ್ಲಿ ಮದುವೆಯಾಗುವುದಿಲ್ಲ ಎಂದು ಮೊದಲೇ ನಿರ್ಧಾರ ಮಾಡಿದ್ದಳು. ಮದುವೆಯ ಕಾರಣಕ್ಕೆ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ ಎನ್ನುವುದು ಆಕೆಯ ಮನದಾಳದ ಮಾತು.

ಪೂಜಾ ವಿದ್ಯಾವಂತ ಹುಡುಗಿ. ಪೂಜಾ ಸಿಂಗ್ ಅವರ ತಂದೆ ಪ್ರೇಮ್ ಸಿಂಗ್ ಬಿಎಸ್‌ಎಫ್‌ನಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಭದ್ರತಾ ಏಜೆನ್ಸಿಯನ್ನು ನಡೆಸುತ್ತಿದ್ದು ಈಕೆಯ ತಾಯಿ ರತನ್ ಕನ್ವರ್ ಸಿಂಗ್ ಗೃಹಿಣಿಯಾಗಿದ್ದಾರೆ. ಪೂಜಾಳಿಗೆ ಮೂವರು ಕಿರಿಯ ಸಹೋದರು ಇದ್ದಾರೆ.
ಈ ಪೂಜಾ ಸಿಂಗ್ ಎಲ್ಲರಂತೆ ಸಾಮಾನ್ಯವಾಗಿ ಬೆಳೆದ ಯುವತಿ. ಆದರೆ ಬಾಲ್ಯದಿಂದಲೂ ದೇವರು, ಧರ್ಮ ಎಂದರೆ ಈಕೆಗೆ ಅಪಾರ ಭಕ್ತಿ, ಅಪಾರ ಶ್ರದ್ಧೆ. ಬಾಲ್ಯದಿಂದಲೂ ದೇವರೊಬ್ಬನೇ ಶಾಶ್ವತ, ಈ ಸಂಸಾರವೇ ನಶ್ವರ ಹೀಗೆ ಮಾತನಾಡುತ್ತಿದ್ದಳು. ಪೂಜಾ ಮದುವೆ ವಯಸ್ಸಿಗೆ ಬರುತ್ತಿದ್ದಂತೆ ಮನೆಯಲ್ಲಿ ಮದುವೆ ಮಾಡಿಕೊಳ್ಳುವಂತೆ ಒತ್ತಡ ಏರಲಾಗಿತ್ತು. ಇನ್ನು, ಗಂಡಿನ ಕಡೆಯವರೂ ಪೂಜಾಳನ್ನು ಮದುವೆ ಮಾಡಿಕೊಡುವಂತೆ ಆಕೆಯ ತಂದೆ, ತಾಯಿ ಬಳಿ ಕೇಳುತ್ತಿದ್ದರು.
ಅಪ್ಪ ಅಮ್ಮನ ಜಗಳ ನೋಡಿ ಸಾಕಾಗಿ ಯಾವ ಪುರುಷರನ್ನು ಮದುವೆಯಾಗದೆ, ದೇವರನ್ನೇ ಮದುವೆಯಾದ ಯುವತಿ! ಸುಂದರ ಯುವತಿಯ ನಿರ್ಧಾರಕ್ಕೆ ಯುವಕರ ಕಣ್ಣೀರು ನೋಡಿ!!
ಆದರೆ 30 ವರ್ಷ ಆಗುವವರೆಗೂ ಮದುವೆಯಾಗದೇ ಮದುವೆಯನ್ನು ಮುಂದೂಡುತ್ತಾ ಬಂದಳು. ಆದರೆ ಇದೀಗ ಗ್ರಾಮದ ವಿಷ್ಣು ದೇಗುಲದಲ್ಲಿ ವಿಷ್ಣುವನ್ನೇ ಪೂಜಾ ಸಿಂಗ್ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾಳೆ. ದೇವಾಲಯದ ಪುರೋಹಿತರು, ಯುವತಿಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲರೂ ಈ ಮದುವೆ ಗೆ ಸಾಕ್ಷಿ, ಫೋಟೋ ಹಾಗೂ ವಿಡಿಯೋವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.