ಇದೀಗ ಕರ್ನಾಟಕದಲ್ಲಿ ಹುಲಿ ಉಗುರಿನ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿಯ ಉಗುರನ್ನು ಧರಿಸಿರುವ ವಿಷಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿ ನಂತರ ಅರೆಸ್ಟ್ ಆಗಿರುವ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಆದರೆ ಈಗ ಇನ್ನೊಂದು ದೊಡ್ಡ ಸುದ್ದಿ ಹರಡುತ್ತಿರುವುದೇನೆಂದರೆ ಕೇವಲ ವರ್ತೂರ್ ಸಂತೋಷ್ ಮಾತ್ರ ಅಲ್ಲದೆ ಕರ್ನಾಟಕದ ಇನ್ನು ಇತರ ಸೆಲೆಬ್ರಿಟಿಗಳು ಕೂಡ ಈ ಹುಲಿಯ ಉಗುರನ್ನ ಧರಿಸಿದ್ದಾರೆ ಎಂಬುದು..
ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರಸ್ವಾಮಿ, rockline ವೆಂಕಟೇಶ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಇನ್ನೂ ಹಲವಾರು ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಹೆಸರುಗಳು ಇದೀಗ ಕೇಳಿ ಬರುತ್ತಿವೆ. ಸೆಲೆಬ್ರಿಟಿಗಳು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳು ರಾಜಾರೋಷವಾಗಿ ಹುಲಿಯ ಹೂಗಳನ್ನು ಡಾಲರ್ ಚಿಹ್ನೆಯಾಗಿ ಧರಿಸಿ ಓಡಾಡುತ್ತಿರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ..
ಅಷ್ಟಕ್ಕೂ ಹುಲಿಯ ಉಗುರಿನ ಡಾಲರ್ ಅನ್ನು ಎಲ್ಲರೂ ಧರಿಸುವುದು ಏಕೆ? ಇದರಿಂದ ಏನಾದರೂ ಪ್ರಯೋಜನ ಇದೆಯಾ ಎಂದು ತಿಳಿದುಕೊಳ್ಳೋಣ ಬನ್ನಿ.. ಹುಲಿಯ ಉಗುರನ್ನು ಎಲ್ಲರೂ ಧರಿಸಬಾರದಂತೆ ಕೇವಲ ಸಿಂಹ ರಾಶಿ ಮತ್ತು ಸಿಂಹ ನಕ್ಷತ್ರದಲ್ಲಿ ಹುಟ್ಟಿರುವ ವ್ಯಕ್ತಿಗಳು ಮಾತ್ರ ಧರಿಸಬೇಕು ಎಂಬ ಶಾಸ್ತ್ರ ಇದೆ. ಸಿಟಿ ಮಾರ್ಕೆಟ್ ಗಳಲ್ಲಿ ಮತ್ತು ಕೆಲವು ಅಂಗಡಿಗಳಲ್ಲಿ ಡುಬ್ಲಿಕೇಟ್ ಹುಲಿ ಉಗುರು ಸಿಗುತ್ತೆ. ಆದರೆ ಸಿಗಬೇಕು ಎಂದರೆ ನೀವು ಕಾಡಿಗೆ ಹೋಗಿ ತೆಗೆದುಕೊಳ್ಳಬೇಕು.
ಕಾಡಿಗೆ ಹೋಗಿ ಯಾವುದಾದರು ಆದಿವಾಸಿಗಳ ಬಳಿ ಅಥವಾ ಕಾಡಿನಲ್ಲಿರುವ ದೇವಸ್ಥಾನದ ಪೂಜಾರಿಗಳ ಬಳಿ ಅಥವಾ ಕಾಡಿನ ವಲಸಿಗರ ಬಳಿ ಈ ಹುಲಿಯ ಗುರು ಸಿಗುತ್ತೆ. ಇಂತಹ ಜನರ ಬಳಿ ಹೋಗಿ ಹೆಚ್ಚಾಗಿ ಜನರು ಖರೀದಿ ಮಾಡುತ್ತಾರೆ. ಆಗ ಅವರಿಗೆ ಕಡಿಮೆ ಬೆಲೆಯಲ್ಲಿ ಸಿಕ್ಕಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಹುಲಿಯನ್ನ ಬೇಟೆಯಾಡಿ ಸಾಯಿಸಿ ನಂತರ ಅದೇ ಹುಲಿ ಉಗುರನ್ನು ಧರಿಸುತ್ತಿದ್ದರು.. ಆಗಿನ ಕಾಲದಲ್ಲಿ ಇದು ಪ್ರತಿಷ್ಠೆಯ ಸಂಕೇತವಾಗಿತ್ತು.

ಹುಲಿಯ ಉಗುರನ್ನ ಧರಿಸುವ ವ್ಯಕ್ತಿಗಳು ಬಲಶಾಲಿಗಳು.. ಹುಲಿಯ ಹಾಗೆ ಧೈರ್ಯವಂತರು ಎಂಬ ನಂಬಿಕೆ ಇದೆ.. ಇದೇ ಕಾರಣಕ್ಕೆ ಹಲವಾರು ಜನ ಹುಲಿಯ ಉಗುರನ್ನು ಧರಿಸುತ್ತಾರೆ. ಅಷ್ಟೇ ಅಲ್ಲದೆ ಹುಲಿಯ ಉಗುರನ್ನು ಧರಿಸುವುದರಿಂದ ಕೆಟ್ಟ ಶಕ್ತಿಗಳು ನಮ್ಮ ಮೇಲೆ ಪರಿಣಾಮ ಬೀಳುವುದಿಲ್ಲ ..ಮಾಟ ಮಂತ್ರಗಳು ನಮ್ಮ ಮೇಲೆ ದುಷ್ಪರಿಣಾಮಗಳನ್ನು ಬೀರುವುದಿಲ್ಲ ಎಂಬ ನಂಬಿಕೆ ಕೂಡ ಇದೆ..
ಕೆಟ್ಟ ಶಕ್ತಿಗಳು ನಮ್ಮ ಮೇಲೆ ಬೀಳದೆ ಇರಲಿ ಎನ್ನುವ ಕಾರಣಕ್ಕೆ ಕೂಡ ಕೆಲವು ಜನರು ಇದನ್ನು ಧರಿಸುತ್ತಾರೆ..ಹುಲಿಯ ಉಗುರನ್ನು ಧರಿಸುವುದು ಕಾನೂನಿನ ಪ್ರಕಾರ ತಪ್ಪು ಎನ್ನುವುದು ಹಲವು ಜನರಿಗೆ ಗೊತ್ತಿಲ್ಲ ಈ ವಿಷಯ ಗೊತ್ತಿಲ್ಲದೆ ಕೇವಲ ನಂಬಿಕೆಗಳನ್ನು ನಂಬಿ ಜನರು ಹುಲಿಯ ಉಗುರನ್ನ ಧರಿಸುತ್ತಾರೆ. ಆದರೆ ಇದೀಗ ಕರ್ನಾಟಕದಲ್ಲಿ ಹುಲಿಯ ಉಗುರಿನ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ..