100 ವರ್ಷಗಳಾದರೂ ವಿಶ್ವದ ಅತ್ಯಂತ ದೊಡ್ಡ ಹಡಗು ಟೈಟಾನಿಕ್ ಹೊರಗೆ ತೆಗೆಯಲು ಸಾಧ್ಯವಾಗುತ್ತಿಲ್ಲ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ!!

ಟೈಟಾನಿಕ್ ಎಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಟೈಟಾನಿಕ್ ಹಡಗು ಮುಳುಗಡೆಯಾಗಿ 110 ವರ್ಷಗಳು ಕಳೆದಿದೆ. ಆ ಕಾಲದ ಪ್ರಸಿದ್ಧ ಮತ್ತು ಬೃಹತ್ ಹಡಗು ಎಂದರೆ ಅದುವೇ ಟೈಟಾನಿಕ್ (Titanic) ಹಡಗು. 882 ಫೀಟ್ ಉದ್ದ ಹಾಗೂ 92 ಫೀಟ್ ಅಗಲ 4 ಕೋಟಿ 72 ಲಕ್ಷ ಕೆಜಿ ಆಗಿತ್ತು. 1912ನೇ ಇಸ್ವಿಯಲ್ಲಿ ಟೈಟಾನಿಕ್ ಹಡುಗು ಇಂಗ್ಲೆಂಡಿನಿಂದ ನ್ಯೂ ಯಾರ್ಗೆ ತನ್ನ ಮೊದಲ ಪ್ರಯಾಣವನ್ನು ಬೆಳೆಸಿತ್ತು.

ಆದರೆ ಏಪ್ರಿಲ್ 14 ರಂದು ಮಂಜುಗಡ್ಡೆಯ ಪರ್ವತಕ್ಕೆ ಟೈಟಾನಿಕ್ ಹಡಗು (Titanic Ship) ಡಿಕ್ಕಿ ಹೊಡೆದ ಪರಿಣಾಮವಾಗಿ 2000 ಪ್ರಯಾಣಿಕರಿದ್ದ ಟೈಟಾನಿಕ್ ಹಡಗು ಸಂಪೂರ್ಣವಾಗಿ ಎರಡು ಭಾಗಗಳಲ್ಲಿ ಮುಳುಗಿಹೋಗಿತ್ತು. ಇವತ್ತಿಗೂ ಕೂಡ ಟೈಟಾನಿಕ್ ನ ದುರಂತ ದೃಶ್ಯವು ಎಲ್ಲರನ್ನು ಒಂದು ಬೆಚ್ಚಿ ಬೀಳಿಸುತ್ತದೆ.

ಟೈಟಾನಿಕ್ ಹಡಗು ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಹಡಗು ಖ್ಯಾತಿ ಗಳಿಸಿದ್ದರೂ ಕೂಡ ಈ ಹಡಗು ಯಾಕೆ ಮುಳುಗಿತ್ತು ಎನ್ನುವುದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ಆಗುತ್ತಲೇ ಇದೆ. ಅದಲ್ಲದೇ ಟೈಟಾನಿಕ್ ಹಡಗಿನ ಅವಶೇಷಗಳಡಿಯಲ್ಲಿ ಯಾರು ಹೋಗಬೇಕು ಮತ್ತು ಏಕೆ? ಎಂಬ ಬಗ್ಗೆ ದಶಕಗಳಿಂದ ಚರ್ಚೆ ನಡೆಯುತ್ತಿದೆ. ಅಂತಹ ಪ್ರವಾಸೋದ್ಯಮವು ಟೈಟಾನಿಕ್ ಅನ್ನು ಹಾನಿಗೊಳಿಸುತ್ತದೆ ಎಂದು ಅನೇಕ ವಿಜ್ಞಾನಿಗಳು ಹೇಳುತ್ತಿದ್ದರು.

ಇತ್ತ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಅಮೇರಿಕನ್ ಹಿಸ್ಟರಿ (Smithsonian National Museum of American History) ಯಲ್ಲಿ ಕಡಲ ಇತಿಹಾಸದ ಮೇಲ್ವಿಚಾರಕರಾದ ಪಾಲ್ ಜಾನ್ಸನ್ ಎಫ್. ‘ಪ್ರಯಾಣಿಕರು ಟೈಟಾನಿಕ್ ಹಡಗಿನ ಅವಶೇಷಗಳನ್ನು ಮುಟ್ಟುವುದಿಲ್ಲ ಅಥವಾ ಇದರಿಂದ ಅದು ಹಾನಿ ಆಗುವುದಿಲ್ಲ.ಇದು ನೀರೊಳಗಿನ ಪ್ರಪಂಚ ಮತ್ತು ಸಾಮಾನ್ಯವಾಗಿ ಹಡಗುಗಳತ್ತ ಗಮನವನ್ನು ತರುತ್ತದೆ. ಟೈಟಾನಿಕ್ ನೋಡಿ ಕಲಿಯುವುದಕ್ಕಿಂತ ಹೆಚ್ಚು ಮುಟ್ಟಿ ಕಲಿಯುವುದ ಏನೂ ಇಲ್ಲ. ನಾವು ಈಗಾಗಲೇ ಏನು ಮಾಡಿಲ್ಲ’ ಎಂದಿದ್ದರು.

ಅದಲ್ಲದೇ, ಬಲಾರ್ಡ್ ಎನ್ನುವಾತ ಸಮುದ್ರದಾಳದಲ್ಲಿ ಮುಳುಗಿ ಹೋಗಿದ್ದ ಟೈಟಾನಿಕ್ ಹಡುಗನ್ನು (Titanic Ship) ಕಂಡು ಹಿಡಿಯಲು ಮುಂದಾದ. ಆತನ ಪ್ರಯತ್ನವು ಯಶಸ್ವಿ ಕೂಡ ಆಯಿತು. ಸಮುದ್ರದ ನಾಲ್ಕು ಕಿಲೋಮೀಟರ್ ಆಳದಲ್ಲಿ ಹುದಗಿತ್ತು ಎನ್ನುವ ಸತ್ಯವನ್ನು ಬಹಿರಂಗ ಪಡಿಸಿದ್ದನು. ಆದಾದ ಬಳಿಕ ಅನೇಕ ಕಂಪೆನಿಗಳು ಆ ಹಡಗನ್ನು ನೀರಿನಿಂದ ಮೇಲಕ್ಕೆ ಎತ್ತಲು ಮುಂದೆ ಬಂದವು.

Titanic ship

ಅದರಲ್ಲಿಯೂ ಅಮೂಲ್ಯವಾದ ವಸ್ತುಗಳನ್ನು ಅದಾಗಲೇ ಎತ್ತಲಾಗಿತ್ತು. ಆದರೆ ಈ ಹಡಗನ್ನು ಎತ್ತುವುದು ಅಷ್ಟು ಸುಲಭವಾಗಿಲ್ಲ. ಅನೇಕ ಕಂಪನಿಗಳು ಮುಂದೆ ಬಂದಿದ್ದರೂ ಕೂಡ ಹಡಗಿನ ಅವಶೇಷಗಳನ್ನು ಮೇಲಕ್ಕೆತ್ತಲು ದೊಡ್ಡ ಮೊತ್ತದ ಹಣ ಖರ್ಚು ಆಗುತ್ತದೆ. ಈ ಹಣದಲ್ಲಿ ಒಂದು ಹೊಸ ಹಡಗನ್ನೇ ತಯಾರಿಸಬಹುದಾಗಿದೆ. ಈ ಹಡಗನ್ನು ಮ್ಯೂಸಿಯಂ ನಲ್ಲಿ ಇಟ್ಟುಕೊಂಡು ಜನರಿಂದ ಟಿಕೆಟ್ ಮೂಲಕ ಹಣ ಸಂಪಾದಿಸಿದರೂ ಕೂಡ ಈ ಹಡಗಿನ ಖರ್ಚನ್ನು ತುಂಬಲು ಸಾಕಷ್ಟು ವರ್ಷಗಳೇ ತಗಲುತ್ತವೆ. ಈ ಕಾರಣದಿಂದ ಟೈಟಾನಿಕ್ ಹಡಗನ್ನು ಮೇಲಕ್ಕೆತ್ತಲು ಮೇಲಕ್ಕೆತ್ತಲು ಹೋಗಿಲ್ಲ.

Leave a Reply

Your email address will not be published. Required fields are marked *