ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರು ತಮ್ಮ ಮದುವೆಯ ವಿಚಾರ ಮುಚ್ಚಿಟ್ಟಿದ್ದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ (Leelavati) ವಯೋಸಹಜ ಕಾಯಿಲೆಯಿಂದ ಡಿಸೆಂಬರ್ 8ರಂದು ಇ-ಹಲೋಕ ತ್ಯಜಿಸಿದ್ದರು. ಅಮ್ಮ ಮಗ ಇಬ್ಬರೂ ಎರಡು ಜೀವ ಒಂದೇ ಪ್ರಾ-ಣದಂತೆ ಬದುಕುತ್ತಿದ್ದರು. ಇದೀಗ ತಾಯಿ ಲೀಲಾವತಿಯನ್ನು ಕಳೆದುಕೊಂಡು ವಿನೋದ್ಒಂ ರಾಜ್ (Vinod Raj) ಒಂಟಿಯಾಗಿದ್ದಾರೆ. ಹೌದು, ತಾಯಿಯ ಕೊನೆಯ ಕಾರ್ಯಗಳನ್ನು ಮುಗಿಸಿದ್ದು ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

ಅದಲ್ಲದೇ, ಲೀಲಾವತಿ ಅಗಲಿದಾಗ ಅವರ ಅಂತಿಮ ದರ್ಶನ ಪಡೆಯಲು ಸೊಸೆ ಅನು (Anu) ಮತ್ತು ಮೊಮ್ಮಗ ಆಗಮಿಸಿದ್ದರು. ಚೆನ್ನೈನಲ್ಲಿ ವಾಸವಿರುವ ತಾಯಿ ಮಗ ಮಾಧ್ಯಮಗಳಲ್ಲಿ ಜೊತೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲದೇ ವಿನೋದ್ ರಾಜ್ ಅವರ ಪತ್ನಿ ಅನುರವರು ಅತ್ತೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ಮದುವೆಯಾಗಿ ಮಗನಿದ್ದರೂ ವಿನೋದ್ ರಾಜ್ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಇತ್ತೀಚೆಗಷ್ಟೇ ನಟ ವಿನೋದ್ ರಾಜ್ ಅವರಿಗೆ ಮದುವೆ (Marriage) ಯಾಗಿದೆ ಎನ್ನುವ ವಿಚಾರವು ಬಹಿರಂಗಗೊಂಡಿತ್ತು. ಆದರೆ ಈ ವಿಚಾರವನ್ನು ಮುಚ್ಚಿಡಲು ಕಾರಣವೇನು ಎನ್ನುವ ಬಗ್ಗೆ ನಟ ವಿನೋದ್ ರಾಜ್ ಅವರು ಮೌನ ಮುರಿದಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಲೀಲಾವತಿ ಅವರ ಫ್ಯಾಮಿಲಿ ಫೋಟೋ ( Family Photo) ಮತ್ತು ಮೊಮ್ಮಗನ ಮಾರ್ಕ್ಸ್‌ ಕಾರ್ಡ್ ಫೋಟೋವು (Mark Card Photo) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ನಟ ವಿನೋದ್ ರಾಜ್‌ಗೆ ಮದುವೆಯಾಗಿ, ಆಗಿದ್ದರೂ ಆಗಿಲ್ಲ ಎಂದು ಹೇಳುವುದು ಅಥವಾ ಮುಚ್ಚಿಟ್ಟಿರಲು ಕಾರಣ ಏನು ಎಂದು ಅಭಿಮಾನಿಗಳಿಗೆ ಮೂಡಿತ್ತು. ಅದಲ್ಲದೇ, ಈ ಹಿಂದೆಯಷ್ಟೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು (Director Prakash Raj Mehu) ಅವರು ನಟ ವಿನೋದ್ ರಾಜ್ ಅವರ ಮದುವೆಯ ವಿಚಾರವನ್ನು ಬಿಚ್ಚಿಟ್ಟಿದ್ದರು. ಈ ಬಗ್ಗೆ ಹೇಳಿಕೆ ನೀಡಿದ್ದ ಅವರು,”ವಿನೋದ್ ರಾಜ್‌ ಮತ್ತು ಅನು ಅವರು ಮದುವೆಯಾಗಿರುವ ವಿಚಾರ 20 ವರ್ಷಗಳ ಹಿಂದೆ ಗೊತ್ತಿತ್ತು. 2001ರಲ್ಲಿ ವಿನೋದ್ ಮಗ ಹುಟ್ಟಿರುವುದು ಲೆಕ್ಕಾಚಾರ ಮಾಡಿ ಮೂರ್ನಾಲ್ಕು ವರ್ಷ ಹಿಂದೆ ಮುಂದೆ ಮಾಡಿದರೆ 1998-99ರಲ್ಲಿ ಇವರ ಮದುವೆ ನಡೆದಿರಬಹುದು.

ವಿನೋದ್ ಪತ್ನಿ ಅವರೇ ಅಂತ ಯಾರೋ ಹೇಳಿದರು. ವಿನೋದ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಅನು. ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಅಂತ ಯಾರೋ ಹೇಳಿದ್ದರು. ಆ ಕಾರಣಕ್ಕೆ ಪಬ್ಲಿಕ್‌ನಲ್ಲಿ ಹೇಳಿಕೊಳ್ಳುತ್ತಿಲ್ವೋ ಏನೋ ಗೊತ್ತಿಲ್ಲ. ಅದು ನಿಜವೇ ಆಗಿದ್ರೆ ವಿನೋದ್ ರಾಜ್ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಏಕೆಂದರೆ ಇದರಲ್ಲಿ ಯಾವುದೇ ತಪ್ಪು ಕೆಲಸವಿಲ್ಲ. ಕೆಲಸ ಮಾಡುತ್ತಿರುವ ಹೆಂಗಸಿಗೆ ಬಾಳು ಕೊಟ್ಟಿದ್ದಾರೆ ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ವಿಚಾರ.

ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದಾರೆ ಅದರಲ್ಲಿ ಯಾವ ನಿಗೂಢತೆ ಇದೆ ನನಗೆ ಗೊತ್ತಿಲ್ಲ. ಅವರಿಗೆ ಹೆಂಡತಿ ಮಗ ಇರುವುದು ನಿಜ ನನಗೆ ಅಷ್ಟ ಮಾತ್ರ ಗೊತ್ತು” ಎಂದಿದ್ದರು. ಆದರೆ ಇದೀಗ ಖಾಸಗಿ ಸುದ್ದಿವಾಹಿನಿಯು ನಟ ವಿನೋದ್ ರಾಜ್ ಅವರ ಬಳಿ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಿದೆ. ಆದರೆ ಪ್ರತಿಕ್ರಿಯೆ ನೀಡಿರುವ ನಟ ವಿನೋದ್ ರಾಜ್ ಅವರು, “ಮದುವೆಯಾಗಿರುವುದನ್ನು ಹೇಳುವಂತಹ ಪರಿಸ್ಥಿತಿಯಲ್ಲಿ ನಾವಿರಲಿಲ್ಲ.

ಅದನ್ನು ದೊಡ್ಡದಾಗಿ ಮಾಡುವುದು ಇಷ್ಟವಿರಲಿಲ್ಲ. ತಾಯಿಯವರು ತಿರುಪತಿಯಲ್ಲಿ ಮದುವೆ ಮಾಡಿಸಿದ್ದರು. ತಾಯಿ ಅವರನ್ನು ಚೆನ್ನೈತೋಟದಲ್ಲಿ ಬಿಟ್ಟರು. ಇದ್ರಲ್ಲಿಯೇ ಚೆನ್ನಾಗಿ ಜೀವನ ಮಾಡಲಿ ಎಂದು ತಾಯಿಯವರು ಹೀಗೆ ಮಾಡಿದ್ದರು. ತಾಯಿಯವರಿಗೆ ವಿವಾದಾತ್ಮಕವಾದದ್ದು ಇಷ್ಟ ಇರಲಿಲ್ಲ. ಬೇಡದ ಮಾತುಗಳು ಬರಬಾರದು ಎನ್ನುವ ಉದ್ದೇಶ ಬಿಟ್ರೆ ಅಮ್ಮನಿಗೆ ಬೇರೇನೂ ಇರಲಿಲ್ಲ” ಎಂದಿದ್ದಾರೆ.

Leave a Reply

Your email address will not be published. Required fields are marked *