ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಪ್ರಸಿದ್ಧ್ ಕೃಷ್ಣ, ಖ್ಯಾತ ಕ್ರಿಕೆಟಿಗ ವರಿಸಿರುವ ಹುಡುಗಿ ಯಾರು? ಏನು ಮಾಡುತ್ತಿದ್ದಾರೆ ಗೊತ್ತಾ?

ಸೆಲೆಬ್ರಿಟಿಗಳು ಎಂದಮೇಲೆ ವೈಯುಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಾಗುತ್ತಾರೆ. ಕ್ರಿಕೆಟ್ ಲೋಕವಿರಲಿ, ಸಿನಿಮಾ ಲೋಕವಿರಲಿ ಈ ಲೋಕದಲ್ಲಿ ಸಕ್ರಿಯರಾಗಿರುವವರ ಬಗ್ಗೆ ಎಲ್ಲರಿಗೂ ಕೂಡ ಕುತೂಹಲವಿರುತ್ತದೆ. ಅಂದಹಾಗೆ, ರಾಜಸ್ಥಾನ್ ರಾಯಲ್ಸ್ ಮತ್ತು ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಪ್ರಸಿದ್ಧ್ ಕೃಷ್ಣ (Prasiddh Krishnna) ಜೂನ್ 8 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ರಚನಾ (Rachana) ಎನ್ನುವವರ ಜೊತೆಗೆ ಹೊಸ ಬದುಕಿಗೆ ಕಾಲಿಟ್ಟ ಪ್ರಸಿದ್ಧ್ ಕೃಷ್ಣರವರು ತಮ್ಮ ಮದುವೆ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.ತಮ್ಮ ಬಹುಕಾಲದ ಗೆಳತಿ ರಚನಾ ಕೃಷ್ಣ (Rachana Krishna) ಅವರೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ವರಿಸಿದ್ದಾರೆ. ಸರಳವಾಗಿ ನಡೆದ ಪ್ರಸಿದ್ಧ್ ಕೃಷ್ಣ ಅವರ ಮದುವೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಕಾಣಿಸಿಕೊಂಡಿದ್ದರು.

ಯುವ ಆಟಗಾರರು ಕ್ರಿಕೆಟಿಗನ ಪ್ರಸಿದ್ಧ ಕೃಷ್ಣನವರ ಮದುವೆಯಲ್ಲಿ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೃಷ್ಣಪ್ಪ ಗೌತಮ್ ಮುಂತಾದ ಹಲವು ಆಟಗಾರರು ಭಾಗವಹಿಸಿ ಕ್ರಿಕೆಟಿಗ ವೈವಾಹಿಕ ಜೀವನಕ್ಕೆ ಶುಭಾಶಯಗಳನ್ನು ಕೋರಿದ್ದರು. ದಕ್ಷಿಣ ಭಾರತದ ಪದ್ಧತಿಯಂತೆ ನಡೆದಿದ್ದು, ಪ್ರಸಿದ್ಧ್ ಕೃಷ್ಣ ಬಿಳಿ ಬಣ್ಣದ ಧೋತಿ ಮತ್ತು ಶಲ್ಯ ಧರಿಸದ್ದು, ರಚನಾರವರು ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದರು.ಪ್ರಸಿದ್ಧ ಕೃಷ್ಣ ಅವರೇ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ನಾನು ಹಾಗೂ ರಚನಾ ಏಳು ಜನ್ಮಗಳಿಗೆ ಪರಸ್ಪರ ಜೊತೆಯಾಗಿರುತ್ತೇವೆ. ನನ್ನ ಹೆಂಡತಿ, ಬಿಲಿಯನ್‌ನಲ್ಲಿ ಒಬ್ಬರು” ಎಂದಿದ್ದಾರೆ.

ಪ್ರಸಿದ್ಧ್ ಕೃಷ್ಣ ಅವರು ಮದುವೆಯಾಗಿರುವ ಈ ರಚನಾ ಕೃಷ್ಣ ಅವರು ಟೆಕ್ಕಿ (Tekki) ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಓದಿದ್ದಾರೆ.ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿಯ ಪ್ರಕಾರವಾಗಿ ರಚನಾ ಅಮೆರಿಕ (America) ಮೂಲದ ಕಂಪನಿ (Company) ಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, ಪ್ರಸಿದ್ಧ ಕೃಷ್ಣ ಹಾಗೂ ರಚನಾರವರು ಜೂನ್ 6 ರಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಅದೇ ದಿನವು ಅರಿಶಿನ ಶಾಸ್ತ್ರವು ನಡೆಯಿತು. ಎಂಗೇಜ್ಮೆಂಟ್ ಹಾಗೂ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಜೋಡಿಯ ಮದುವೆಯ ಫೋಟೋ ಕಂಡು ಫ್ಯಾನ್ಸ್ ಶುಭಾಶಯಗಳನ್ನು ತಿಳಿಸಿದ್ದರು.

Leave a Reply

Your email address will not be published. Required fields are marked *