ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್ ಕೈಹಿಡಿದಿರುವ ಹುಡುಗ ನೂಪುರ್ ಅವರು ವಿ-ವಾದಗಳಿಂದ ಸುದ್ದಿಯಾಗಿದ್ರಾ? ಯಾರು ಈ ಹುಡುಗ ಗೊತ್ತಾ? ಇಲ್ಲಿದೆ ನೋಡಿ!!

ಸೆಲೆಬ್ರಿಟಿಗಳು ಎಂದ ಮೇಲೆ ಅವರೂ ಸುದ್ದಿಯಾಗುವುದಲ್ಲದೆ ಅವರ ಮಕ್ಕಳು ಹಾಗೂ ಕುಟುಂಬದವರು ಸುದ್ದಿಯಲ್ಲಿರುವುದು ಸರ್ವೇ ಸಾಮಾನ್ಯ. ಅದರಲ್ಲಿಯು ಸೆಲೆಬ್ರಿಟಿಗಳ ಮದುವೆ ಅಥವಾ ಅವರ ಮಕ್ಕಳ ಮದುವೆ ಎಂದ ಮೇಲೆ ಕೇಳಬೇಕೇ, ಮದುವೆಗೆ ಸಂಬಂಧ ಪಟ್ಟ ಎಲ್ಲಾ ವಿಚಾರಗಳು ಹರಿದಾಡುತ್ತಿರುತ್ತವೆ. ಆದರೆ ಇದೀಗ ಬಾಲಿವುಡ್ ನಟ ಅಮೀರ್ ಖಾನ್ (Amir Khan) ಪುತ್ರಿ ಇರಾ ಖಾನ್ (Ira Khan) ಬಹುಕಾಲದ ಗೆಳೆಯ ನೂಪುರ್ ಶಿಖರೆ (Nupur Shikhare) ಯೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ನೂಪುರ್ ಮತ್ತು ಇರಾ ಅವರು 2021ರಲ್ಲಿ ಮೊದಲ ಬಾರಿಗೆ ಜೊತೆಗೆ ಇರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಮಾಡಿ, ತಾವಿಬ್ಬರು ರಿಲೇಷನ್ಶಿಪ್ ನಲ್ಲಿರುವುದನ್ನು ಬಹಿರಂಗಗೊಳಿಸಿದ್ದರು. ಅಷ್ಟೇ ಅಲ್ಲದೆ, ಈ ನೂಪುರ್ ಅದೇ ವರ್ಷ ಐರನ್‌ಮ್ಯಾನ್ ಓಟದ ಅಂತಿಮ ಸಾಲಿನಲ್ಲಿ ಇರಾಗೆ ಪ್ರೇಮ ನಿವೇದನೆ ಮಾಡಿಯೇ ಬಿಟ್ಟರು.ಆದಾದ ಬಳಿಕ ಈ ಜೋಡಿ ಕಳೆದ ವರ್ಷ ನವೆಂಬರ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ತಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿತ್ತು.

ಈ ಮುದ್ದಾದ ಜೋಡಿಯು ನಿನ್ನೆ (ಜನವರಿ 3) ಬಾಂದ್ರಾ (Baandra) ದಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದ ನಂತರ ಅದೇ ಹೋಟೆಲ್ನಲ್ಲಿ ಆರತಕ್ಷತೆ ನಡೆದಿದೆ. ಇದೇ ವಾರದಲ್ಲಿ ಉದಯಪುರ (Udayapura) ದಲ್ಲಿ ಕುಟುಂಬಕ್ಕಾಗಿ ಅದ್ಧೂರಿ ಸಮಾರಂಭ ನಡೆಯಲಿದೆ. ಮುಂದಿನ ವಾರ ಮುಂಬೈ (Mumbai) ನಲ್ಲಿ ಸೆಲೆಬ್ರಿಟಿಗಳಿಗಾಗಿ ಅದ್ದೂರಿ ಸಮಾರಂಭವೊಂದನ್ನು ಏರ್ಪಡಿಸಲಾಗಿದೆ ಎನ್ನಲಾಗಿದೆ.

ಬಾಲಿವುಡ್‌ನ ಖ್ಯಾತ ನಟ ಅಮೀರ್‌ ಖಾನ್‌ ಅವರ ಅಳಿಯ ಯಾರಿಗೇನು ಕಡಿಮೆಯಿಲ್ಲ ಎನ್ನುವಂತೆ ಇದ್ದಾರೆ. ನೂಪುರ್ ಶಿಖರೆ ಪುಣೆ ಮೂಲದ ಕ್ರೀಡಾಪಟು (Sport Man) ಮತ್ತು ಫಿಟ್ನೆಸ್ ತರಬೇತು (Fitness Trainer) ದಾರರಾಗಿದ್ದಾರೆ. ಫಿಟ್ನೆಸಿಸಂ ಎಂಬ ಸಮರ ಕಲೆಗಳ ತರಬೇತಿ ಅಕಾಡೆಮಿಯನ್ನು ಸ್ಥಾಪಸಿದ್ದು ಅಮೀರ್ ಮತ್ತು ನಟಿ ಸುಶ್ಮಿತಾ ಸೇನ್ ಸೇರಿದಂತೆ ಹೀಗೆ ಹಲವು ನಟರ ವೈಯಕ್ತಿಕ ತರಬೇತುದಾರರಾಗಿಯು ಕೆಲಸ ಮಾಡಿದ್ದರು.

ತೀರಾ ಆಕ್ಟಿವ್ ಆಗಿರುವ ನೂಪುರ್ ಶಿಖರೆ ಅವರು ಈ ಹಿಂದೆ ಫೋಟೋ ಶೂಟ್ (Photoshoot) ನಿಂದಲೇ ಸುದ್ದಿಯಾಗಿದ್ದರು.2019 ರಲ್ಲಿ ನೂಪುರ್ ಶಿಖರೆ, ನ-ಗ್ನ ಫೋಟೋಶೂಟ್ ಮಾಡಿಕೊಂಡಿದ್ದು, ವಿ-ವಾದಗಳಿಂದ ಸುದ್ದುಯಾಗಿದ್ದರು. ಈ ಫೋಟೋಶೂಟ್ ಹೊರಾಂಗಣ ಪ್ರದೇಶದಲ್ಲಿ ನ-ಗ್ನವಾಗಿ ಓಡುವುದು, ಜಿಗಿಯುವುದು ಮತ್ತು ಸ್ನಾಯುಗಳನ್ನು ಬಗ್ಗಿಸುವ ಭಂಗಿಗಳನ್ನು ಒಳಗೊಂಡಿತ್ತು. ಈ ಫೋಟೋ ಶೂಟ್ ವೇಳೆಯಲ್ಲಿ ಸಾಂತಾ ಕ್ಲಾಸ್ ಟೋಪಿಯನ್ನು ಮಾತ್ರ ಧರಿಸಿದ್ದರು. ಆದರೆ ಕೆಲವರು ಈ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು ಕೂಡ ಮತ್ತೆ ಕೆಲವರು ಮೆಚ್ಚಿಕೊಂಡಿದ್ದರು.

Leave a Reply

Your email address will not be published. Required fields are marked *