ಮದುವೆ ಆದರೂ ಅಭಿಷೇಕ್ ಬಚ್ಚನ್ ಗೆ ನಟಿ ಜೋತೆ ಅ ಫೇರ್ ಇತ್ತಾ? ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ನಿಲ್ಲಿಸಲು ಯತ್ನಿಸಿದ್ದ ಬಾಲಿವುಡ್ ನಟಿ, ಅಷ್ಟಕ್ಕೂ ಏನಾಗಿತ್ತು?

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ (Aishwarya Rai- Abhishek Bacchan) ಅವರ ವೈವಾಹಿಕ ಜೀವನದಲ್ಲಿ ಸಣ್ಣ ಬಿರುಕೊಂದು ಕಾಣಿಸಿಕೊಂಡಿದೆ. ಸದ್ಯಕ್ಕೆ ಈ ಜೋಡಿಯ ನಡುವಿನ ವಿಚ್ಛೇದನದ ಸುದ್ದಿಯೊಂದು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, 16 ವರ್ಷ ಚೆನ್ನಾಗಿಯೇ ಇದ್ದ ಇವರ ಸಂಬಂಧವು ಅರ್ಧಕ್ಕೆ ನಿಂತುಹೋಗುತ್ತಾ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿ-ಚ್ಛೇಧನದ ಸುದ್ದಿಯು ಒಂದೆಡೆಯಾದರೆ, ಇದರ ಹಿಂದೆ ಒಂದರಂತೆ ಒಂದು ಇನ್ನಿತರ ವಿಚಾರಗಳು ಸುದ್ದಿಯಾಗುತ್ತಿದೆ. ನಟಿಯ ದಾಂಪತ್ಯ ಜೀವನದಲ್ಲಿ ಈಗಾಗಲೇ ಅನೇಕ ವಿ-ವಾದಗಳು ಎದ್ದಿದ್ದು, ಅದೆಲ್ಲವು ಅಲ್ಲೇ ಮುಗಿದು ಹೋಗಿತ್ತು. ಆದರೆ ಈ ಮುದ್ದಾದ ಜೋಡಿಯು ವೈವಾಹಿಕ ಬದುಕಿಗೆ ಎಂಟ್ರಿ ಕೊಡುತ್ತಿದ್ದಂತೆ ಬಾಲಿವುಡ್ ಆ ನಟಿಯೊಬ್ಬರು ದೊಡ್ಡ ಸುದ್ದಿಯೊಂದನ್ನು ಹಬ್ಬಿಸಿದ್ದರು.

ಇವರಿಬ್ಬರ ಮದುವೆಯ ಸಂದರ್ಭದಲ್ಲಿಯೇ ಖ್ಯಾತ ನಟಿ ಮತ್ತು ಮಾಡೆಲ್ ಆಗಿರುವ ಜಾಹ್ನವಿ ಕಪೂರ್ (Jhanvi Kapoor) ಅವರು ನಾನೇ ಅಭಿಷೇಕ್ ನಿಜವಾದ ಪತ್ನಿ. ಅಭಿಷೇಕ್ ನನಗೆ ಮೋ-ಸ ಮಾಡಿ ಐಶ್ವರ್ಯ ಅವರನ್ನು ವಿವಾಹವಾಗುತ್ತಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ, ಜುಹು ಪೊಲೀಸ್ ಠಾಣೆ ಗೆ ತೆರಳಿ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಿ ಮದುವೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ ಪೊಲೀಸರು ಜಾಹ್ನವಿ ಮಾತು ಕೇಳಿರಲಿಲ್ಲ. ಹೀಗಾಗಿ ಅಭಿಷೇಕ್ ಬಚ್ಚನ್ ವಿರುದ್ಧ ಯಾವುದೇ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಈ ಎಲ್ಲಾ ಕಾರಣದಿಂದಾಗಿ ನಟಿಯು ತನ್ನ ಕೈಯ ನರವನ್ನು ಕ-ತ್ತರಿಸಿ ಬಚ್ಚನ್ ನಿವಾಸದ ಎದುರು ಆ-ತ್ಮಹತ್ಯೆಗೆ ಯತ್ನ ಮಾಡಿದ್ದರು. ಆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಭಿಷೇಕ್ ಅವರ ಮದುವೆಯನ್ನು ನಿಲ್ಲಿಸಲು ಈ ನಟಿಯು ಪ್ರಯತ್ನ ಪಡುವುದು ಗೊತ್ತಾಗುತ್ತಿದ್ದಂತೆ ಈ ಮದುವೆ ಮುಗಿಯುವವರೆಗೂ ಆಸ್ಪತ್ರೆಯಲ್ಲಿಯೇ ನಟಿಯನ್ನು ಇರಿಸಲಾಗಿತ್ತು ಕೂಡ.

ಈ ಘಟನೆಯ ಬಳಿಕ ನಟಿ ಜಾಹ್ನವಿ ಕಪೂರ್ ಚಿತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಯಾವುದೇ ಮಾಧ್ಯಮದ ಮುಂದೆ ಕಾಣಿಸಿಕೊಳ್ಳದೆ ಮರೆಯಾಗಿಯೇ ಬಿಟ್ಟರು. ಆದರೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈಯವರು ತಮ್ಮ ಮದುವೆಯ ಸಂದರ್ಭದಲ್ಲಿ ಎಲ್ಲಾ ವಿಘ್ನಗಳನ್ನು ದಾಟಿ ಸರಿಸುಮಾರು ಹದಿನಾರು ವರ್ಷಗಳ ಸುಖ ಸಂಸಾರ ಮಾಡಿದ್ದಾರೆ. ಆದರೆ ಇದೀಗ ಕೇಳಿ ಬರುತ್ತಿರುವ ವಿಚ್ಛೇಧನದ ಸುದ್ದಿಗೆ ಯಾವಾಗ ಈ ಬಾಲಿವುಡ್ ಜೋಡಿ ತೆರೆ ಎಳೆಯುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *