ಬಾಲಿವುಡ್ ನಟಿ ಕರೀನಾ ಕಪೂರ್ ಯಾವ ಧರ್ಮವನ್ನು ಅನುಸರಿಸುತ್ತಿದ್ದಾರೆ, ಖ್ಯಾತ ಶೋನಲ್ಲಿ ಪತಿ ಸೈಫ್‌ ಅಲಿಖಾನ್ ಬಿಚ್ಚಿಟ್ಟ ಸತ್ಯ ಬೇರೇನೇ ಇದೆ? ಇಲ್ಲಿದೆ ನೋಡಿ ಅಸಲಿ ವಿಚಾರ

ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ (Famous Producer Karan Johar) ನಡೆಸಿಕೊಡುವ ಚಾಟ್​ ಶೋ ‘ಕಾಫಿ ವಿತ್​ ಕರಣ್​’ (Coffee With Karan) ಶೋ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕರಣ್ ಜೋಹರ್ ನಿರೂಪಣೆಯಲ್ಲಿ ಮೂಡಿಬರುವ ಈ ಶೋಗೆ ಈಗಾಗಲೇ ಬಾಲಿವುಡ್‌ನ ಸ್ಟಾರ್‌ಗಳು ಎಂಟ್ರಿ ಕೊಟ್ಟು ತಮ್ಮ ಸೀಕ್ರೆಟ್ ಗಳನ್ನು ರಿವೀಲ್ ಮಾಡಿದ್ದಾರೆ.

ಇದೀಗ ಸೈಫ್ ಅಲಿ ಖಾನ್ ತನ್ನ ಪತ್ನಿ ಕರೀನಾ ಫಾಲೋ ಮಾಡುವ ಧರ್ಮ ಯಾವುದು ಎನ್ನುವುದು ರಿವೀಲ್ ಮಾಡಿ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದ್ದಾರೆ. ಹೌದು, ಕಾಫಿ ವಿತ್ ಕರಣ್ 8ನೇ ಸೀಸನ್ ನಲ್ಲಿ ನಟ ಸೈಫ್ ಅಲಿಖಾನ್ ತಮ್ಮ ಅಮ್ಮ ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೋರ್ (Sharmila Tagor) ಜೊತೆ ಭಾಗವಹಿಸಿದ್ದರು. ಈ ವೇಳೆಯಲ್ಲಿ ನಟ ಸೈಫ್ ಅಲಿ ಖಾನ್ ಬಳಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಬಾಲಿವುಡ್ ನಟ ಸೈಫ್‌ ಅಲಿಖಾನ್ ಅವರ ತಾಯಿ ಬಾಲಿವುಡ್‌ನ ಹಿರಿಯ ನಟಿ ಶರ್ಮಿಳಾ ಠಾಗೋರ್ ಹಿಂದೂವಾಗಿದ್ದು, ತಂದೆ ಪಟೌಡಿ ರಾಜಮನೆತನಕ್ಕೆ ಸೇರಿದವರಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿಖಾನ್ ಪಟೌಡಿ (Mansoor Alikhan Patowdi) ಮುಸ್ಲಿಂ ಧರ್ಮದವರಾಗಿದ್ದಾರೆ. ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದ ನಟ ಸೈಫ್‌ ಅಲಿಖಾನ್ ಅವರನ್ನು ಕರೀನಾ ಕಪೂರ್ ಅವರು ಮದುವೆಯಾಗಿದ್ದಾರೆ.

ಕರೀನಾ ಕಪೂರ್ ಹಿಂದೂವಾಗಿದ್ದರೂ ಮದುವೆಯಾದ ಬಳಿಕ ಹೆಚ್ಚಿನವರು ಅವರು ಪತಿಯ ಧರ್ಮವಾದ ಮುಸ್ಲಿಂ ಧರ್ಮವನ್ನು ಫಾಲೋ ಮಾಡುತ್ತಿರಬಹುದು ಎಂದು ಕೊಂಡಿದ್ದಾರೆ. ಆದರೆ ಈ ಶೋ ನಲ್ಲಿ ಕರೀನಾ ಕಪೂರ್ ಅವರು ಅನುಸರಿಸುತ್ತಿರುವ ಧರ್ಮದ ಬಗ್ಗೆ ರಿವೀಲ್ ಆಗಿದೆ. ನಟ ಸೈಫ್ ಅಲಿಖಾನ್‌ಗೆ ಈ ಶೋದಲ್ಲಿ ಕರಣ್ ಜೋಹರ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಸೈಫ್‌ಗೆ ಮಗ ತೈಮೂರ್ ಕೇಳುವ, ಅತ್ಯಂತ ಕುತೂಹಲಕಾರಿಯಾದ, ಆದರೆ ಉತ್ತರಿಸಲಾಗದ, ಚಿಂತನೆಗೆ ದೂಡುವ ಪ್ರಶ್ನೆ ಯಾವುದು? ಎಂದು ಕರಣ್ ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿದ ಸೈಫ್ ಅಲಿಖಾನ್, “ಆತ ಹೆಚ್ಚಾಗಿ ಧರ್ಮ, ದೇವರುಗಳ ಬಗ್ಗೆ ಪ್ರಶ್ನೆ ಕೇಳುತ್ತಾನೆ. ಆತ ಇಂತಹದ್ದೇ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಾನೆ ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಆದರೆ ಆತ ಹೆಚ್ಚಾಗಿ ಧರ್ಮದ ವಿಚಾರಗಳ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಆತ ದೇವರ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಆತನ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ನಾನು ಅಲೋಚಿಸಬೇಕಾಗುತ್ತದೆ.

ಕೆಲ ದಿನಗಳ ಹಿಂದೆ ಆತ ಯೇಸುವಿನ ಶಿಲುಬೇಗೇರಿಸಿದ ಬಗ್ಗೆ ಪ್ರಶ್ನಿಸಿದ್ದ. ಅಲ್ಲವನ್ನೇ ಯೇಸುವನ್ನು ಏಕೆ ಕೊ-ಲ್ಲಲಾಯ್ತು ಎಂದು ಪ್ರಶ್ನಿಸಿದ. ಅವನು ವಿಶೇಷವಾಗಿ ಕ್ರಿಶ್ಚಿಯನ್ ಧರ್ಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾನೆ. ಇದಕ್ಕೆ ಕಾರಣ ಹೆಂಡ್ತಿ ಕರೀನಾ ಕಪೂರ್” ಎಂದು ಉತ್ತರಿಸಿದ್ದಾರೆ ಸೈಫ್. ಹೀಗಾಗಿ ನಟಿ ಕರೀನಾ ಕಪೂರ್ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ ಎನ್ನುವುದರ ಸುಳಿವು ನೀಡಿದ್ದಾರೆ.

Leave a Reply

Your email address will not be published. Required fields are marked *