ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಶಾಸಕ ಪ್ರದೀಪ್ ಈಶ್ವರ್ ಅವರ ಸಂಭಾವನೆಯ ಮೊತ್ತವೆಷ್ಟು ಗೊತ್ತಾ? ಇಲ್ಲಿದೆ ನೋಡಿ!!

ದೊಡ್ಮನೆಯ ಆಟ ಶುರು ಆಗಿದೆ. ಹೌದು, ಕನ್ನಡ ಬಿಗ್ ಬಾಸ್ ಸೀಸನ್ 10 (Big Boss Sisan 10) ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದು, ಈ ಬಾರಿಯ ಸೀಸನ್ 10 ಭಾರಿ ವಿಶೇಷವಾಗಿರಲಿದೆ ಎನ್ನಲಾಗುತ್ತಿದೆ. ಸ್ಪರ್ಧಿಗಳೆಲ್ಲರೂ ಎಂಟ್ರಿ ಕೊಟ್ಟ ಮೇಲೆ ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ (Pradeep Eshwar) ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಅವರ ಎಂಟ್ರಿಯು ಸ್ಪರ್ಧಿಗಳಿಗೆ ಶಾಕ್ ನೀಡಿದೆ.

ಇತ್ತ ಎಂಎಲ್​ಎ ಆಗಿ ದೊಡ್ಮನೆಗೆ ತೆರಳಿರುವ ಬಗ್ಗೆ ಹೇಳಿದ್ದು, ವೀಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಇನ್ನೊಂದೆಡೆ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಯಲ್ಲಿ ತೆಗೆದುಕೊಳ್ಳುವ ಸಂಭಾವನೆಯ ಬಗ್ಗೆಯು ಭಾರಿ ಚರ್ಚೆಯಾಗುತ್ತಿದೆ. ಬಿಳಿ ಬಣ್ಣದ ಡ್ರೆಸ್​ (White Colour Dress) ನಲ್ಲಿ ಪ್ರದೀಪ್ ಈಶ್ವರ್ ಅವರು ಏಕಾಏಕಿ ಎಂಟ್ರಿ ಕೊಟ್ಟಿದ್ದಾರೆ.

ಆದರೆ ಇತ್ತ ಸ್ಪರ್ಧಿಗಳು ಅಕ್ಟೋಬರ್ 8ರಂದು ಅವರು ದೊಡ್ಮನೆಗೆ ಬರಬೇಕಿತ್ತು.ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ದಿನ ತಡವಾಗಿ ಅವರು ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾವು ಎಂಎಲ್​ಎ (MLA) ಜೊತೆ ಸ್ಪರ್ಧಿಸಬೇಕಲ್ಲ ಎಂದು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್​ಗೆ ಪ್ರದೀಪ್ ಈಶ್ವರ್ ಬರುತ್ತಾರೆ ಎನ್ನುವ ಬಗ್ಗೆ ಸುದ್ದಿಯಾಗಿತ್ತು.

ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.ಆದರೆ ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯಾಗಿ ಬಂದಿದ್ದಾರೋ ಅಥವಾ ಉಳಿದ ಸ್ಪರ್ಧಿಗಳಂತೆ ಸ್ಪರ್ಧಿಯಾಗಿ ಬಂದಿದ್ದಾರಾ ಎನ್ನುವ ಪ್ರಶ್ನೆಯೊಂದು ಸದ್ಯಕ್ಕೆ ಹುಟ್ಟಿಕೊಂಡಿದೆ. ಆದರೆ ಅನೇಕರು ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ ಎಂಟ್ರಿ ಕೊಟ್ಟಿರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಎಂಎಲ್​ಎ ಆಗಿ ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ರಿಯಾಲಿಟಿ ಶೋಗೆ ಹೋದರೆ ಸಾಮಾನ್ಯ ಜನರ ಗತಿ ಏನು ಎನ್ನುತ್ತಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.ಅದಲ್ಲದೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಪ್ರದೀಪ್ ಈಶ್ವರ್ ಅವರ ಸಂಭಾವನೆಯು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಲಕ್ಷಾನುಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಪ್ರದೀಪ್ ಈಶ್ವರ್ ಅವರುವಾರಕ್ಕೆ ಒಂದೂವರೆ ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಬಲ್ಲ ಮೂಲಗಳ ಪ್ರಕಾರ ಎಲ್ಲ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ದಾನ ಮಾಡಲಿದ್ದಾರಂತೆರಂತೆ. ಒಟ್ಟಿನಲ್ಲಿ ತನ್ನ ಸಂಭಾವನೆಯ ಮೊತ್ತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಡುತ್ತಿರುವುದು ನಿಜಕ್ಕೂ ಎಲ್ಲರಿಗೂ ಮಾದರಿಯಾಗುವ ವಿಚಾರ.

Leave a Reply

Your email address will not be published. Required fields are marked *