ಯಾವ ರಾಶಿಯವರು ಯಾವ ಸಮಯದಲ್ಲಿ ಕೆಲಸ ಮಾಡಿದರೆ ಲಾಭದಾಯಕ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಪ್ರತಿಯೊಬ್ಬರ ಜೀವನ (Life) ದಲ್ಲಿಯು ಈ ಜ್ಯೋತಿಷ್ಯವು ಪ್ರಮುಖ ಪಾತ್ರವಹಿಸುತ್ತದೆ. ಕೆಲವರು ಈ ಜ್ಯೋತಿಷ್ಯವನ್ನು ಅವಲಂಬಿಸಿಕೊಂಡು ಬದುಕುತ್ತಾರೆ. ಅದಲ್ಲದೇ ನಮ್ಮ ಜೀವನದ ಏರಿಳಿತ (Up and Down) ಗಳಿಗೆ ಈ ಜ್ಯೋತಿಷ್ಯನು ಕಾರಣ ಎಂದರೆ ತಪ್ಪಾಗಲಾರದು. ಆದರೆ ಯಾವೆಲ್ಲಾ ರಾಶಿಗಳಿಗೆ ದಿನದ ಯಾವ ಸಮಯ (Time) ವು ಅದೃಷ್ಟದಾಯಕವಾಗಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡಬಹುದು.

ಮೇಷ ರಾಶಿ : ಈ ರಾಶಿಯವರಿಗೆ ಜ್ಯೋತಿಷ್ಯದ ಪ್ರಕಾರ, ಬೆಳ್ಳಗಿನ ಸಮಯವು ಅದೃಷ್ಟಶಾಲಿ ಮತ್ತು ಶುಭವವಾಗಿದೆ ಎನ್ನಬಹುದು. ಬೆಳಿಗ್ಗೆ 10:20 ರಿಂದ 11:15 ರ ನಡುವೆ ಪ್ರಮುಖ ಸಭೆ ಅಥವಾ ಉದ್ಯೋಗ ಸಂದರ್ಶನವನ್ನುನ್ನು ಇಟ್ಟುಕೊಳ್ಳುವುದು ಉತ್ತಮ ಎನ್ನಬಹುದು. ಈ ಸಮಯದಲ್ಲಿ ಮಾಡಿದ ಎಲ್ಲಾ ಕೆಲಸಗಳು ಪೂರ್ಣಗೊಂಡು ಫಲನು ಲಭಿಸುತ್ತದೆ.

ವೃಷಭ ರಾಶಿ : ವೃಷಭ ರಾಶಿಗೆ ಅದೃಷ್ಟದ ಸಮಯವೆಂದರೆ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:53 ರವರೆಗೆ ಎನ್ನಬಹುದು..ಈ ಸಮಯದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಫಲವು ಉತ್ತಮವಾಗಿರುತ್ತದೆ. ಆದರೆ ತಾಳ್ಮೆಯನ್ನು ರೂಢಿಸಿಕೊಳ್ಳುವುದು ಬಹುಮುಖ್ಯವಾಗಿದೆ.

ಮಿಥುನ ರಾಶಿ : ಮಿಥುನ ರಾಶಿಗೆ ಜ್ಯೋತಿಷ್ಯದ ಹೇಳುವ ಅದೃಷ್ಟದ ಸಮಯ ಯಾವುದೆಂದರೆ ಮಧ್ಯಾಹ್ನ 12:55 ರಿಂದ 1:40 ರವರೆಗೆ ಎನ್ನಬಹುದು. ತಮ್ಮ ಕೆಲಸ ಕಾರ್ಯದಲ್ಲಿ ಅತೀ ಹೆಚ್ಚಿನ ಏಕಾಗ್ರತೆ ಹಾಗೂ ಸಂವಹನವನ್ನು ರೂಢಿಸಿದರೇ ಯಶಸ್ಸು ಕಟ್ಟಿಟ್ಟ ಬುತ್ತಿ. ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಬೇಕು ಎನ್ನುವವರು ಈ ಸಮಯದಲ್ಲಿ ಆರಂಭಿಸುವುದು ಸೂಕ್ತ.

ಕರ್ಕಾಟಕ ರಾಶಿ : ಈ ರಾಶಿಯವರಿಗೆ ಮಧ್ಯಾಹ್ನದ ಊಟದ ಸಮಯವು ಅದೃಷ್ಟದಾಯಕವಾಗಿದೆ. ಹೀಗಾಗಿ 1:13 ರಿಂದ 2:15 ರ ನಡುವಿನ ಸಮಯ ಯಾವ ಕೆಲಸಗಳನ್ನು ಮಾಡಿದರೆ ಅದ್ಭುತವಾದ ಫಲವನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಈ ರಾಶಿಯವರ ಮನೆಗೆ ಬರುವ ಅತಿಥಿಗಳು ಆನಂದ ಹಾಗೂ ಸಂತೋಷವನ್ನು ತರುತ್ತಾರೆ.

ಸಿಂಹ ರಾಶಿ : ಜ್ಯೋತಿಷ್ಯದ ಪ್ರಕಾರ, ಬೆಳಿಗ್ಗೆ 7:00 ರಿಂದ 8:15 ರ ನಡುವಿನ ಸಮಯವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಪ್ರಮುಖ ಯೋಜನೆಯಲ್ಲಿ ಕೆಲಸ ಮಾಡಲು ಹಾಗೂ ಆರ್ಥಿಕ ಲಾಭಗಳಿಸಲು ಯೋಚಿಸುತ್ತಿದ್ದರೆ ಈ ಸಮಯವನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ.

ಕನ್ಯಾರಾಶಿ : ಈ ರಾಶಿಯವರಿಗೆ ಬೆಳಿಗ್ಗೆ 7:05 ರಿಂದ 8:15 ರವರೆಗೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿದೆ. ಹೀಗಾಗಿ ಈ ವೇಳೆಯಲ್ಲಿ ಈ ರಾಶಿಯವರು ದೈನಂದಿನ ಕಾರ್ಯಗಳ ಕಡೆಗೆ ಕೆಲಸ ಮಾಡಿದರೆ, ಖಂಡಿತವಾಗಿಯೂ ನಿಮಗೆ ಉತ್ತಮ ಫಲಿತಾಂಶಗಳನ್ನು ಉತ್ತಮವಾಗಿರುತ್ತದೆ. ನೀವು ಅಂದುಕೊಂಡಂತೆ ಬದುಕಲು ಸಹಾಯಕವಾಗಿದೆ.

ತುಲಾ ರಾಶಿ : ತುಲಾ ರಾಶಿಯವರಿಗೆ ಸಂಜೆ 4:00 ರಿಂದ 5:15 ರ ನಡುವಿನ ಸಮಯವು ಉತ್ತಮವಾಗಿದೆ. ಈ ದೀರ್ಘಾವಧಿಯ ಸಮಯವನ್ನು ಬಳಸಿಕೊಂಡು ಕಾರ್ಯಕ್ಷೇತ್ರಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗಿದೆ. ಸಮಯದ ಜೊತೆಗೆ ಗ್ರಹಗಳ ಶಕ್ತಿಗಳು ಕೂಡ ಈ ರಾಶಿಯವರನ್ನು ಬೆಂಬಲಿಸಿ ಜೀವನದ ಏಳಿಗೆಗೆ ಕಾರಣವಾಗುತ್ತದೆ.

ವೃಶ್ಚಿಕ ರಾಶಿ : ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯವರಿಗೆ ಅದೃಷ್ಟ ಹಾಗೂ ಲಾಭದಾಯಕ ಸಮಯವೆಂದರೆ ಅದುವೇ ಸಂಜೆ 5:30 ರಿಂದ 6:15 ರ ನಡುವೆ ಯಾಗಿದೆ. ಈ ಸಮಯದಲ್ಲಿ ನೀವು ಮಾಡುವ ಕೆಲಸಗಳಲ್ಲಿ ನೂರಕ್ಕೆ ನೂರರಷ್ಟು ಯಶಸ್ಸನ್ನು ಪಡೆಯುವ ಸಮಯವಾಗಿದೆ. ಹೀಗಾಗಿ ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಗುರಿಗಳ ಕಡೆಗೆ ಕೆಲಸ ಮಾಡಿದರೆ, ನೀವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವುದರಲ್ಲಿರಲ್ಲಿ ಯಾವುದೇ ಸಂದೇಹವೇ ಇಲ್ಲ ಎನ್ನಬಹುದು.

ಧನು ರಾಶಿ : ಈ ರಾಶಿಯವರಿಗೆ ಅದೃಷ್ಟದ ಸಮಯವೆಂದರೆ ಮಧ್ಯಾಹ್ನದ ಸಮಯ, ಮಧ್ಯಾಹ್ನ 1.00 ರಿಂದ ಸಂಜೆ 4.00 ರವರೆಗೆ. ಈ ಸಮಯದಲ್ಲಿ, ನೀವು ಹೆಚ್ಚು ಶಕ್ತಿವಂತರಾಗಿದ್ದು, ಹೀಗಾಗಿ ಒಳ್ಳೆಯ ಕೆಲಸ ಮಾಡಿದರೆ ಒಳಿತಾಗಲಿದೆ. ಈ ಸಮಯವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ನೀಡಿ, ಸಮೃದ್ಧಿಯ ಕಡೆಗೆ ಸುಗಮ ಮಾರ್ಗವನ್ನ ತೋರುತ್ತದೆ ಎನ್ನಬಹುದು.

ಮಕರ ರಾಶಿ : ಮಕರ ರಾಶಿಯವರಿಗೆ ಸಂಜೆ 5:45 ರಿಂದ 6:30 ರ ನಡುವೆ ಎಲ್ಲಾ ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಜ್ಯೋತಿಷ್ಯ ಹೇಳುತ್ತದೆ. ಈ ಸಮಯದಲ್ಲಿ ಕೆಲಸ ಮಾಡಿದರೆ ನಿಮ್ಮನ್ನು ಯಶಸ್ಸಿನ ಹತ್ತಿರ ಕೊಂಡೊಯ್ಯುತ್ತದೆ. ಈ ವೇಳೆಯಲ್ಲಿ ಗುರಿಗಳ ಕಡೆಗೆ ಹೆಚ್ಚು ಏಕಾಗ್ರತೆ ಇರುತ್ತದೆ, ಹೀಗಾಗಿ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ.

ಕುಂಭ ರಾಶಿ : ಕುಂಭ ರಾಶಿಯವರಿಗೆ ಸಂಜೆಯ ಸಮಯವು ಅತ್ಯಂತ ಪ್ರಯೋಜನಕಾರಿಯಾಗಿದೆ. ಸಂಜೆ 6:25 ರಿಂದ 7:18 ರವರೆಗೆ ಸಮಯವು ಅದ್ಭುತವಾಗಿದ್ದು, ಈ ಸಮಯದಲ್ಲಿ ಕೆಲಸ ಮಾಡಲು ಹೋದರೆ ಯಶಸ್ಸು ಸಿಕ್ಕಂತೆ. ಇದಕ್ಕೆ ದೇವಾನುದೇವತೆಗಳು ನಿಮ್ಮ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸುತ್ತಾರೆ. ವೈಯುಕ್ತಿಕವಾಗಿ ಯಾರನ್ನನಾದರೂ ಭೇಟಿಯಾಗಬೇಕು ಎಂದುಕೊಂಡಿದ್ದರೆ ಈ ಸಮಯವು ಸೂಕ್ತವಾಗಿದೆ.

ಮೀನ ರಾಶಿ : ಈ ರಾಶಿಯವರಿಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರ ನಡುವಿನ ಸಮಯವು ಉತ್ತಮ ಸಮಯವಾಗಿದೆ. . ಆದ್ದರಿಂದ, ಈ ಒಂದು ಗಂಟೆಯ ಅವಧಿಯಲ್ಲಿ, ಮೀನ ರಾಶಿಯವರು ಈ ಸಮಯವನ್ನು ಹೆಚ್ಚು ಬಳಸಿಕೊಂಡರೆ ಉತ್ತಮದಾಯಕವಾಗಿರಲಿದೆ. ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳು ಯಶಸ್ಸಿಗೆ ಮುನ್ನುಡಿ ಬರೆದಂತೆ ಎನ್ನಬಹುದು.

Leave a Reply

Your email address will not be published. Required fields are marked *