ಮನೆಯಲ್ಲಿ ಕೃಷ್ಣನ ಈ ಎಲ್ಲಾ ಫೋಟೋಗಳು ಇದ್ದರೆ ಶುಭನಾ? ಅಶುಭನಾ? ಇಲ್ಲಿದೆ ಅಸಲಿ ವಿಚಾರ

ದೇವರನ್ನು ನಂಬುವ ಎಲ್ಲರೂ ಕೂಡ ಮನೆಯ ದೇವರಕೋಣೆಯಲ್ಲಿ ದೇವರ ಫೋಟೋ (God Photos) ಗಳನ್ನು ಇಟ್ಟಿರುತ್ತಾರೆ. ಅದಲ್ಲದೇ ದೇವಿ ಹಾಗೂ ದೇವರ ಫೋಟೋಗಳನ್ನು ಇಟ್ಟು ಪೂಜಿಸುತ್ತಾರೆ. ಆದರೆ ಕೆಲವರ ಮನೆಯಲ್ಲಿ ಕೃಷ್ಣನ ಫೋಟೋಗಳನ್ನು ಕಾಣುತ್ತೇವೆ. ಆದರೆ ಈ ಜ್ಯೋತಿಷ್ಯದ ಪ್ರಕಾರ ಕೃಷ್ಣನ ಕೆಲ ಫೋಟೋ (Krishna Photo) ಗಳಿದ್ದರೆ ಅದೃಷ್ಟ ಎನ್ನಲಾಗುತ್ತದೆ. ಹಾಗಾದ್ರೆ ಯಾವೆಲ್ಲಾ ಫೋಟೋಗಳು ಅದೃಷ್ಟದ ಸಂಕೇತವಾಗಿರುತ್ತದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

ಕಾಳಿಂಗ (Kalinga) ದ ಮೇಲೆ ಶ್ರೀಕೃಷ್ಣನಿರುವ ಫೋಟೋವೊಂದು ನಿಮ್ಮ ಮನೆಯಲ್ಲಿದ್ದರೆ ತುಂಬಾ ಒಳ್ಳೆಯದು. ಹೌದು, ಮನೆಯ ಸದಸ್ಯರಿಗೆ ಶತ್ರುಗಳ ಕಾಟ ಇದ್ದರೆ ಅಥವಾ ಹೊಟ್ಟೆಕಿಚ್ಚು ಪಡುವವರು ಇದ್ದರೆ ಕಳಿಂಗನ ಮೇಲೆ ಕೃಷ್ಣ ನಿಂತಿರುವ ಫೋಟೋಗಳನ್ನು ಇಟ್ಟುಕೊಂಡರೆ ಒಳ್ಳೆಯದಾ ಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಅರ್ಜುನ (Arjuna) ನೊಂದಿಗೆ ಕೃಷ್ಣನು ಇರುವ ಫೋಟೋವು ಕೂಡ ಶುಭದ ಸಂಕೇತವಾಗಿದೆ. ಈ ಫೋಟೋವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿಯು ಇರುತ್ತದೆ. ಆದರೆ ಕುರುಕ್ಷೇತ್ರ ಯುದ್ಧದ ಫೋಟೋಗಳನ್ನುಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ಇದು ಸಂಬಂಧಗಳಲ್ಲಿ ಬಿರುಕಿಗೆ ಕಾರಣವಾಗಬಹುದು. ಮನೆಯಲ್ಲಿ ಸದಾ ಜಗಳಗಳು ಆಗಬಹುದು.

ಕೊಳಲನ್ನು ಊದುತ್ತಿರುವ ಕೃಷ್ಣನ ಫೋಟೋ ಮನೆಯಲ್ಲಿದ್ದರೆ ಶುಭಕರ ಎನ್ನಲಾಗುತ್ತದೆ. ಈ ಫೋಟೋವನ್ನು ಇಟ್ಟುಕೊಂಡರೆ ಮನೆಯಲ್ಲಿರುವ ಸಮಸ್ಯೆಗಳಿದ್ದರೂ ಪರಿಹಾರವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ಹಾಗೂ ಸಂತೋಷವು ತುಂಬಿರುತ್ತದೆ ಎನ್ನಲಾಗುತ್ತದೆ.

ಬಾಲ ಗೋಪಾಲ (Bala Gopal) ನ ಫೋಟೋವು ನೋಡಲು ಎಷ್ಟು ಚಂದವೋ ಅವು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಬಾಲ ಗೋಪಾಲನ ಫೋಟೋವನ್ನ ಪೂರ್ವ ದಿಕ್ಕಿಗೆ ಹಾಕುವುದು ಒಳ್ಳೆಯದು. ಬಾಲಗೋಪಾಲನ ಫೋಟೋವು ಮಕ್ಕಳ ಕಲೆಯನ್ನು ಮನೆಯ ತುಂಬಾ ಹಬ್ಬುವಂತೆ ಮಾಡುತ್ತದೆ.

ರಾಧಾ ಕೃಷ್ಣನ ಫೋಟೋ (Radha Krishna Photo) ವನ್ನು ಇಟ್ಟುಕೊಂಡಿದ್ದರೆ ದಾಂಪತ್ಯ ಜೀವನವು ಸುಖಕರವಾಗಿರಲು ಸಾಧ್ಯವಾಗುತ್ತದೆ. ಒಂದು ವೇಳೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದರೆ ರಾಧಾ ಕೃಷ್ಣರ ಫೋಟೋಗಳನ್ನು ಇಟ್ಟುಕೊಂಡರೆ ಸಮಸ್ಯೆಗಳು ದೂರವಾಗುತ್ತದೆ. ಅದಲ್ಲದೇ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.

Leave a Reply

Your email address will not be published. Required fields are marked *