ಶ್ರೀಮಂತಿಕೆ (Richness) ಎನ್ನುವುದು ಎಲ್ಲರ ಕನಸು ಆಗಿದ್ದರೂ, ಎಲ್ಲರೂ ಕೂಡ ಶ್ರೀಮಂತರಾಗಲು ಸಾಧ್ಯವಿಲ್ಲ. ಶ್ರೀಮಂತಿಕೆ ಎನ್ನುವುದನ್ನು ಕೆಲವರು ದುಡ್ಡಿನಿಂದ ಅಳೆದರೂ ಕೂಡ ಕೆಲವರು ಸುಖ, ಶಾಂತಿ, ಆರೋಗ್ಯ (Health) ವಿದ್ದರೆ ಅದುವೇ ಶ್ರೀಮಂತಿಕೆಯೆನ್ನುತ್ತಾರೆ. ಹಣವಿದ್ದರೆ ಅದುವೇ ಶ್ರೀಮಂತಿಕೆಯ ಸೂಚಕ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರವಾಗಿದೆ.
ಆದರೆ ಕಷ್ಟ ಪಟ್ಟು ದುಡಿದು ಕೈ ತುಂಬಾ ಹಣ ಸಂಪಾದನೆ ಮಾಡಿದರೂ ಕೂಡ ಹಣವು ಕೈಯಲ್ಲಿ ನಿಲ್ಲುವುದಿಲ್ಲ. ಆದರೆ ನಾವಿವತ್ತು ಹೇಳುವ ಮಾಹಿತಿಯು ನಿಮ್ಮನ್ನು ಶ್ರೀಮಂತರನ್ನಾಗಿಸಬಹುದು. ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಈ ಒಂದು ಸಸ್ಯದ ಬೇರಿನಿಂದ ನೀವು ಆರಾಮದಾಯಕವಾಗಿ ಶ್ರೀಮಂತಿಕೆಯನ್ನು ಅನುಭವಿಸಬಹುದಾಗಿದೆ. ತುಳಸಿಯು ವಿಷ್ಣುವಿನ ಸ್ವರೂಪವಾಗಿದೆ. ತುಳಸಿ (Tulasi) ಯ ನೆರಳಿನಲ್ಲಿ ಸ್ವಯಂ ಭಗವಂತನಾದ ವಿಷ್ಣು ನೆಲೆಸಿರುತ್ತಾನೆ.

ಹೀಗಾಗಿ ಪ್ರತಿಯೊಬ್ಬರು ಕೂಡ ತುಳಸಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ನವಗ್ರಹಗಳ ದೋಷಗಳ ಸೇರಿದಂತೆ ಇನ್ನಿತ್ತರ ದೋಷಗಳ ಪರಿಹಾರಕ್ಕಾಗಿ ಈ ತುಳಸಿ ಗಿಡದ ಬೇರನ್ನು ತಾಯತದಲ್ಲಿ ಹಾಕಿ ಕೊರಳಿಗೆ ಹಾಕಿಕೊಂಡರೆ ಯಾವುದೇ ರೀತಿಯ ದೋಷಗಳು ಪರಿಹಾರವಾಗುತ್ತದೆ.ಅದಲ್ಲದೇ, ಒಂದು ವೇಳೆ ದಿನಾ ತುಳಸಿ ಸಸ್ಯ (Tulasi Plant) ಕ್ಕೆ ಜಲವನ್ನು ಅರ್ಪಿಸಿದರೆ ಅಲ್ಲೂ ಸಹ ನಿಮ್ಮ ದೋಷಗಳು ದೂರ ಆಗುತ್ತವೆ.
ಈ ತುಳಸಿಯ ಮಾಲೆ ಮಾಡಿ ದೇವರಿಗೆ ಸಮರ್ಪಿಸಿ ಕೊಂಡರೆ ಯಾವುದೇ ನಕಾರಾತ್ಮಕ ಶಕ್ತಿ (Negative Energy) ಯು ದೂರವಾಗುತ್ತದೆ. ಈ ತುಳಸಿ ಗಿಡದಲ್ಲಿ ನಕಾರಾತ್ಮಕ ಶಕ್ತಿಯನ್ನು ತನ್ನ ಕಡೆ ಎಳೆದುಕೊಂಡು ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸುವ ಸಾಮರ್ಥ್ಯವು ಇದೆ.ಇನ್ನೊಂದು ಮುಖ್ಯವಾದ ಅಂಶವೆಂದರೆ ಈ ತುಳಸಿಯ ಬೇರನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರ (Entrens) ದ ಮೇಲೆ ನೇತು ಹಾಕಿದರೆ ಮನೆಯ ಬಂಧನಕ್ಕೆ ಒಳಪಡುತ್ತದೆ.
ಈ ವೇಳೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ. ಧನಸಂಪತ್ತು ಅಭಿವೃದ್ಧಿಯಾಗಬೇಕೆಂದರೆ ಬೆಳ್ಳಿಯ ತಾಯತದಲ್ಲಿ ತುಳಸಿ ಬೇರೆನ್ನು ಹಾಕಿಕೊರಳಲ್ಲಿ ಹಾಕಿಕೊಳ್ಳಬೇಕು. ಈ ರೀತಿ ಮಾಡಿದಾಗ ಶ್ರೀ ಕೃಷ್ಣ ಮತ್ತು ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯುತ್ತಾರೆ. ಅದಲ್ಲದೆ ವ್ಯಕ್ತಿಯು ಬೇಗ ಸಿರಿವಂತನಾಗುತ್ತಾನೆ. ಶ್ರೀಮಂತಿಕೆಯೆನ್ನುವುದು ವ್ಯಕ್ತಿಯತ್ತ ಬರುತ್ತದೆ.