ಮದುವೆಯ ದಿನ ಮೊದಲ ರಾತ್ರಿಯಂದು ಗಂಡು ಹೆಣ್ಣಿಗೆ ಕೇಸರಿ ಮಿಶ್ರಿತ ಹಾಲು ಕೊಡುತ್ತಾರೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ಕಾರಣ

ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಬದುಕಿನಲ್ಲಿ ತಿರುವಿನ ಅಧ್ಯಾಯ. ಎರಡೂ ಮನಸ್ಸುಗಳು ಹಾಗೂ ಎರಡು ಕುಟುಂಬಗಳು ಒಂದಾಗುವ ಸಮಯವದು. ಬಹುತೇಕರು ಮದುವೆಯನ್ನು ಅದ್ದೂರಿಯಾಗಿಯೇ ಆಗುತ್ತಾರೆ. ಅದಲ್ಲದೇ ಭಾರತೀಯರು ಮದುವೆಗೆ ವಿಶೇಷವಾದ ಅರ್ಥವನ್ನು ನೀಡಿದ್ದಾರೆ.

ಭಾರತದ ಹಲವೆಡೆ ವಿವಿಧ ಮದುವೆಯ ಸಂಪ್ರದಾಯ (Culture) ಗಳನ್ನು ಕಾಣಬಹುದಾಗಿದೆ. ಇನ್ನು ಈ ಮದುವೆಯಾದ ಮೊದಲ ರಾತ್ರಿ ವಧುವರರಿಗೆ ಕುಡಿಯಲು ಹಾಲು ನೀಡುವ ಸಂಪ್ರದಾಯವಿದೆ. ಆದರೆ ಇದರ ಹಿಂದಿನ ಕಾರಣ ಹಲವರಿಗೆ ತಿಳಿದಿಲ್ಲ. ಮದುವೆಯಾದ ಮೊದಲ ರಾತ್ರಿ (First night) ಯು ವಧು-ವರರು ಪತಿ-ಪತ್ನಿಯಾಗಿ ತಮ್ಮ ಸಂಸಾರಿಕ ಜೀವನವನ್ನು ಪ್ರಾರಂಭಿಸುವ ದಿನ.

ಹೀಗಾಗಿ ಈ ದಿನ ಮದುವೆಯ ಮೊದಲ ರಾತ್ರಿ, ಕೇಸರಿ (Kesar) ಯೊಂದಿಗೆ ಸಿಹಿ ಹಾಲನ್ನು ನವದಂಪತಿಗೆ ನೀದುವುದಿದೆ. ಇದು ನವವಿವಾಹಿತ ಜೋಡಿಗಳ ಬದುಕಿನಲ್ಲಿ ಮಾಧುರ್ಯವನ್ನು ಕಾಪಾಡುವುದರ ಅರ್ಥವನ್ನು ನೀಡಿದರೆ, ಮತ್ತೊಂದೆಡೆ ಕೇಸರಿ ಮತ್ತು ಹಾಲನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸುವ ಕಾರಣ ಮೊದಲ ರಾತ್ರಿಯಲ್ಲಿ ಬಳಸಲಾಗುತ್ತದೆ.

ಪ್ರಾಚೀನ ಗ್ರಂಥಗಳ ಪ್ರಕಾರ ಕಾ-ಮಸೂತ್ರದಲ್ಲಿ ಹಾಲು ಕುಡಿಯುವ ಬಗ್ಗೆ ಉಲ್ಲೇಖವಿದೆ. ಕಾಮಸೂತ್ರವು ಹಾಲಿ (Milk) ಗೆ ಕೇಸರಿ (Saffron) , ಜೇನುತುಪ್ಪ (Honey) ಮತ್ತು ಅರಿಶಿನ (Turmeric) ವನ್ನು ಸೇರಿಸಿ ನವ ವಧು ವರರಿಗೆ ನೀಡುವುದು ಒಳ್ಳೆಯದು ಎನ್ನಲಾಗಿದೆ.ಆದರೆ ಈ ಹಾಲು ಕುಡಿಯುವುದರಿಂದ ಲೈಂ-ಗಿಕ ಶಕ್ತಿ ಹೆಚ್ಚುತ್ತದೆ ಎನ್ನಲಾಗಿದೆ.

ಅದರ ಜೊತೆಗೆ ಆಯಾಸ (Tiredness) ಮತ್ತು ಒತ್ತಡ ನಿವಾರಣೆ (Stress Control), ಮಾನಸಿಕ ಆರೋಗ್ಯ (Mental Health) ಮತ್ತು ಮನಸ್ಥಿತಿಯು ಉತ್ತಮವಾಗುತ್ತದೆ ಎನ್ನುವ ಕಾರಣಕ್ಕೆ ಈ ಕೇಸರಿ ಮಿಶ್ರಿತ ಹಾಲನ್ನು ನೀಡಲಾಗುತ್ತದೆ. ಅದಲ್ಲದೇ ಈ ಕೇಸರಿ ಮಿಶ್ರಿತ ಹಾಲು ಕುಡಿದರೆ ದೇಹದಲ್ಲಿ ಹೆಚ್ಚಿನ ಈಸ್ಟ್ರೊಜೆನ್ ಹಾರ್ಮೋನ್ ಉತ್ಪತ್ತಿ (Estrogen Harmone Produce) ಯಾಗುವುದರ ಜೊತೆಗೆ ದೇಹದಲ್ಲಿ ಶಕ್ತಿಯು ಪ್ರಮಾಣವು ಹೆಚ್ಚಾಗುತ್ತದೆ ಎನ್ನಲಾಗಿದೆ. ಆರೋಗ್ಯ ಪ್ರಯೋಜನಕಾರಿ ಯಾಗಿರುವ ಕಾರಣ ಮೊದಲ ರಾತ್ರಿಗೆ ಕೇಸರಿ ಹಾಲನ್ನು ನೀಡುವುದರ ಹಿಂದಿನ ಕಾರಣವಾಗಿದೆ.

Leave a Reply

Your email address will not be published. Required fields are marked *