ಮುಂದಿನ ವರ್ಷ ಜನವರಿಯಿಂದಲೇ ಯುವನಿಧಿ ಯೋಜನೆ ಜಾರಿ,ಪದವಿಧರ ವಿದ್ಯಾರ್ಥಿಗಳು ಈ ಎಲ್ಲ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ ? ಇಲ್ಲಿದೆ ನೋಡಿ ಮಾಹಿತಿ!!!

ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ (Congress Government)ವು ಚುನಾವಣೆಗೂ ಮೊದಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ಜನರಿಗೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ತಾವು ಹೇಳಿದ ಆ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆ (Five Gurantee Scheme) ಗಳಲ್ಲಿ ನಾಲ್ಕು ಯೋಜನೆಗಳು ಜಾರಿಗೆ ಬಂದಿದೆ.

ಐದನೇ ಗ್ಯಾರಂಟಿ ಯೋಜನೆಯಾಗಿರುವ ಯುವ ನಿಧಿ ಯೋಜನೆಯು ಜಾರಿಗೆ ತರಲು ಮುಹೂರ್ತ ಫಿಕ್ಸ್ ಆಗಿದ್ದು, ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಯೇ ಹೇಳಿದ್ದಾರೆ. ಈ ಯುವ ನಿಧಿ ಯೋಜನೆಯಡಿಯಲ್ಲಿ ಡಿಪ್ಲೋಮಾ, ಪದವೀಧರರಿಗೆ 1,500 ರೂ. ಹಾಗೂ 3,000 ರೂ. ನೀಡುವ ಯುವನಿಧಿ ಯೋಜನೆಯಲ್ಲಿ ನೀಡಲಾಗುತ್ತದೆ.

ಸಿಎಂ ಸಿದ್ದರಾಮಯ್ಯ (CM Siddaramaiah) ನವರು ಯುವನಿಧಿ ಯೋಜನೆಯ ಜಾರಿಯ ಕುರಿತು ಮಾತನಾಡಿಡಿದ್ದು, ‘ನಮ್ಮ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ, ಜಾರಿಗೊಳಿಸಲಾಗುತ್ತಿದೆ.4 ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಾಗಿವೆ, ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ’ ಎಂದು ರಾಜ್ಯದ ಯುವಕ ಯುವತಿಯರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಈ ಯುವನಿಧಿ ಯೋಜನೆಯ ಫಲಾನುಭವಿಗಳಾಗಬೇಕಾದರೆ ಪದವಿ/ ಡಿಪ್ಲೋಮಾ (Degree Or Diplamo) ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದ ಯುವಕ ಯುವತಿಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯನ್ನು ಪಡೆಯಲು ನಿರುದ್ಯೋಗಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳ ಖಾತೆಗೆ ಹಣವು ಜಮಾವಾಗುತ್ತದೆ.

ಇಲ್ಲಿ ಮುಖ್ಯವಾದ ವಿಚಾರವೆಂದರೆ ಪದವಿ ಅಥವಾ ಡಿಪ್ಲೋಮಾ ಶಿಕ್ಷಣದ ಬಳಿಕ ಉನ್ನತ ವ್ಯಾಸಂಗ (Higher Education) ವನ್ನು ಮಾಡುವವರಿದ್ದರೆ ಅಂತಹವರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಉದ್ಯೋಗ ಸಿಕ್ಕ ನಂತರವು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ ಅಂತಹವರು ದಂಡ ಕಟ್ಟಬೇಕಾಗುತ್ತದೆ. ಯುವ ನಿಧಿ ಯೋಜನೆಯ ಫಲಾನುಭವಿಗಳಾಗಬೇಕಾದರೆ ಈ ದಾಖಲೆಗಳು ಇದ್ದರೆ ಮಾತ್ರ ಸಾಧ್ಯ.

ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ (Adhar Card) , ಆದಾಯ ಪ್ರಮಾಣ ಪತ್ರ (Income Certificate), ಬ್ಯಾಂಕ್ ಖಾತೆಯ ವಿವರ (Bank Acount Details), ಇ-ಮೇಲ್ ಐಡಿ (Email ID), ಮೊಬೈಲ್ ಸಂಖ್ಯೆ (Mobile Number), ಭಾವಚಿತ್ರ (Photos) ಹಾಗೂ ಪದವಿ ಹಾಗೂ ಪದವಿ ಅಥವಾ ಡಿಪ್ಲೋಮಾ ಮುಗಿಸಿದ್ದಾರೆ ಎನ್ನುವ ಕೊನೆಯ ವರ್ಷದ ಅಂಕ ಪಟ್ಟಿ (Last year mark card) ಯು ಕಡ್ಡಾಯವಾಗಿ ಅರ್ಜಿಯ ಜೊತೆಗೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ದಾಖಲೆಗಳು ಇದ್ದರೆ ನಿರುದ್ಯೋಗ ಭತ್ಯೆಯನ್ನು ಪಡೆಯಲು ರಾಜ್ಯದ ಯುವಕ ಯುವತಿಯರು ಅರ್ಹರಾಗಿರುತ್ತಾರೆ

Leave a Reply

Your email address will not be published. Required fields are marked *