ತೂಕ ಇಳಿಸಿಕೊಳ್ಳಲು ಅಡುಗೆ ಮನೆಯಲ್ಲಿ ಸಿಗುವ ಈ ಎರಡು ವಸ್ತುಗಳಲ್ಲಿ ಯಾವುದು ಬೆಸ್ಟ್ ಗೊತ್ತಾ? ಇಲ್ಲಿದೆ ನೋಡಿ

ಒತ್ತಡ ತುಂಬಿದ ಬದುಕಿನಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆ (Health Problem) ಗಳು ಕಾಡುತ್ತವೆ. ಹೀಗಾಗಿ ದುಡಿಮೆಯ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಈ ಕಾರಣದಿಂದ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಬೇಕು ಬೇಕಂತಲೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ತಂದುಕೊಂಡು ಬಿಡುತ್ತೇವೆ.

ಇತ್ತೀಚೆಗಿನ ದಿನಗಳಲ್ಲಿ ನಾನಾ ರೀತಿಯ ಖಾ-ಯಿಲೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಅದರಲ್ಲಿಯು ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಅದುವೇ ತೂಕ ಹೆಚ್ಚಳವಾಗುವುದು. ಏನು ಮಾಡದೇನೆ ತೂಕ ಹೆಚ್ಚಳವಾಗಿ ತಮ್ಮ ದೇಹದ ಬಗ್ಗೆಯೆ ತಾವೇ ಕೀ-ಳರಿಮೆ ಭಾವವನ್ನು ಬೆಳೆಸಿಕೊಂಡು ಬಿಡುತ್ತೇವೆ. ಅದಲ್ಲದೇ ತೂಕ ಹೆಚ್ಚಳವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಪ್ರಾಡಕ್ಟ್ (Products) ಗಳನ್ನು ತಂದು ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡುವವರು ಇದ್ದಾರೆ.

ಅದಲ್ಲದೇ ಕೆಲವರು ದಿನ ನಿತ್ಯ ಸೇವಿಸುವ ಆಹಾರದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಡಯಟ್ (Diet) ಮಾಡುತ್ತಾರೆ. ಈ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಆದರೆ ಅಡುಗೆ ಮನೆಯಲ್ಲಿ ಸಿಗುವ ಬೆಲ್ಲ (Jaggery) ಹಾಗೂ ಜೇನುತುಪ್ಪ (Honey) ದಲ್ಲಿ ತೂಕ ಇಳಿಸಿಕೊಳ್ಳಲು ಯಾವುದು ಬೆಸ್ಟ್ ಎನ್ನುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಲೇಖನದಲ್ಲಿ ತೂಕ ಇಳಿಸಿಕೊಳ್ಳಲಲು ಬಯಸುವವರಿಗೆ ಕೆಲವು ಸಲಹೆಗಳನ್ನು ಪಡೆದುಕೊಳ್ಳಬಹುದು.

ಈ ಜೇನುತುಪ್ಪ ನೈಸರ್ಗಿಕವಾಗಿ ಸಿಗುವ ವಸ್ತುವಾಗಿದ್ದು, ಈ ಜೇನುತುಪ್ಪವನ್ನು ಬಳಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಈ ಜೇನು ತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಹೆಚ್ಚಿನ ತೂಕವನ್ನು ಕಡಿಮೆ ಮಾಡುತ್ತದೆ. ಬೆಲ್ಲವು ಕೂಡ ನೈಸರ್ಗಿಕವಾದ ಸಿಹಿಯನ್ನು ಹೊಂದಿದ್ದು, ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣವು ಕಡಿಮೆಯಿದೆ. ಸಕ್ಕರೆ ಕಾಯಿಲೆ ಇರುವವರು ಬೆಲ್ಲವನ್ನು ಬಳಸಬಹುದು.

ಈ ಬೆಲ್ಲದಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ಹಾಗೇ ಖನಿಜಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದೇ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕಾರಣದಿಂದಾಗಿ ತೂಕ ಇಳಿಸಲು ಬೆಲ್ಲ ಮತ್ತು ಜೇನುತುಪ್ಪ ಎರಡೂ ಉತ್ತಮವಾಗಿದ್ದು ಈ ಎರಡರಲ್ಲಿಯು ಕ್ಯಾಲೋರಿಯು ಕಡಿಮೆಯಿದೆ. ಹೀಗಾಗಿ ತೂಕ ಇಳಿಸಬೇಕೇನ್ನುವವರು ಇತಮಿತಿವಾಗಿ ಬಳಸಿ ಅಧಿಕ ತೂಕವನ್ನು ಕಡಿಮೆ ಮಾಡಬಹುದು.

Leave a Reply

Your email address will not be published. Required fields are marked *