ಪ್ರಯಾಣದಲ್ಲಿ ವಾಂತಿ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಕೂಡ ಇದು ಅನ್ವಯಿಸುತ್ತದೆ. ವಾಂತಿ ಮಾಡಿಕೊಂಡು ಸುಸ್ತಾಗುತ್ತಾರೆ. ಪ್ರಯಾಣವನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಪ್ರಯಾಣದ ಮುಂಚೆ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಎಷ್ಟೋ ರೀತಿಯ ಔಷಧಿಯನ್ನು ಕೂಡ ಹಾಕುತ್ತಾರೆ ಇದೆಲ್ಲ ಒಂದು ರೀತಿಯಲ್ಲಿ ತಪ್ಪು ಅಂತಾನೇ ಹೇಳಬಹುದು ಇಂತಹವರಿಗೆ ಇಲ್ಲಿದೆ ಸರಳ ಪರಿಹಾರಗಳು. ನಿಯಮವನ್ನ ಪಾಲಿಸಿದರೆ ಮಕ್ಕಳಿಗೆ ಏನು ತೊಂದರೆ ಆಗದಂತೆ ನೀವು ಎಷ್ಟು ದೂರ ಸಹಿತ ಪ್ರಯಾಣ ಮಾಡಬಹುದು.
ಇದಕ್ಕೆ ನಾವು ಮೋಶನ್ ಸಿಕ್ನೆಸ್ ಅಂತ ಕರೆಯುತ್ತೇವೆ. ಅಂದರೆ ಕಾರು ಚಲಿಸುವಾಗ ಸ್ನಾಯುಗಳಲ್ಲಿನ ನರಗಳ ಸಂಘರ್ಷ ಉಂಟಾಗಿ ಈ ಕ್ರಿಯೆ ಸಂಭವಿಸುತ್ತದೆ. ಸಣ್ಣ ಮಕ್ಕಳು ಹೆಚ್ಚು ಈ ರೀತಿಯಿಂದ ಬಳಲುತ್ತಾರೆ. ಇದಕ್ಕೆಲ್ಲ ಒಂದೇ ಒಂದು ಪರಿಹಾರ ಅಂತಂದ್ರೆ ಪ್ರಯಾಣದ ಮೊದಲು ನೀವು ಮಕ್ಕಳಿಗೆ ಹೆಚ್ಚು ಆಹಾರವನ್ನ ನೀಡಬಾರದು.
ಮತ್ತು ಪ್ರಯಾಣದ ಮೊದಲು ಯಾವುದೇ ರೀತಿಯ ಡೈರಿ ಪ್ರಾಡಕ್ಟ್ ಅಲ್ಲ ಕೊಡಬಾರದು ಅಂದರೆ ಹಾಲು ಮೊಸರು ಮಜ್ಜಿಗೆ ಬೆಣ್ಣೆ ಇಂತಹ ಪದಾರ್ಥಗಳನ್ನು ಕೊಡಬಾರದು. ಎಣ್ಣೆ ಪದಾರ್ಥಗಳನ್ನು ಕೊಡಬಾರದು ಹಾಗೆಯೇ ಅತಿಕಾರವಾದ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಿಸಬಾರದು.
ಇನ್ನು ಪ್ರಯಾಣಿಸುತ್ತಿರುವಾಗ ಮಕ್ಕಳಿಗೆ ಮೊಬೈಲನ್ನು ನೋಡಲು ಕೊಡಬಾರದು. ಇದರಿಂದಲೂ ಕೂಡ ವಾಂತಿ ಸಮಸ್ಯೆ ಉಲ್ಬಣವಾಗುತ್ತದೆ. ಆದ್ದರಿಂದ ಪ್ರಯಾಣದ ಸಮಯದಲ್ಲಿ ಮಕ್ಕಳಿಗೆ ಮೊಬೈಲನ್ನು ಕೊಡದೆ, ಹೊರಗಡೆ ಪರಿಸರವನ್ನ ನೋಡುವಂತೆ ನೋಡಿಕೊಳ್ಳಬೇಕು. ಹೆಚ್ಚು ನಿದ್ರಿಸುವ ಹಾಗೆ ನೋಡಿಕೊಳ್ಳಬೇಕು. ಇದರಿಂದ ಮೋಷನ್ ಸಿಕ್ನೆಸ್ ಅನ್ನೋ ಕಡಿಮೆ ಮಾಡಿ ವಾಂತಿ ಮಾಡುವುದನ್ನು ತಪ್ಪಿಸ ಬಹುದು.
ಮತ್ತು ಪ್ರಯಾಣದ ಸಮಯದಲ್ಲಿ ಕೃತಕ ಎಸಿ ಗಿಂತ ಹೊರಗಿನ ವಾತಾವರಣದ ಗಾಳಿಯು ಕಾರಿನ ಒಳಗಡೆ ಬರುವಂತೆ ನೋಡಿಕೊಳ್ಳಬೇಕು. ಇನ್ನು ವಾಂತಿ ಮಾತ್ರೆನಾ ತೆಗೆದುಕೊಂಡ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಿ ತೆಗೆದುಕೊಳ್ಳುವುದು ಉತ್ತಮ ನಿಮಗೆ ಮನಸ್ಸಿಗೆ ತೋಚಿದ ಮಾತ್ರೆಯನ್ನು ತೆಗೆದುಕೊಳ್ಳುವುದು ಸರಿಯಲ್ಲ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.