ಡಾ.ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಅವರು 17ವರ್ಷ ಒಟ್ಟಿಗೆ ಇದ್ದರು ನಟಿಸಲಿಲ್ಲ ಏಕೆ ಗೊತ್ತೇ.?

vishuvardhan and anant nag

ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ ಇವರು. 70 ದಶಕದಿಂದಲೂ ಇಲ್ಲಿಯ ತನಕ ಮೋಹಕ ನಟ ಯರು ಎಂದು ನೋಡಲು ಹೋದಾಗ ಮೊದಲಿಗೆ ನೆನಪಿಗೆ ಬರುವುದು ಅನಂತ್ ನಾಗ್ ಅವರ ಹೆಸರು ಎಂದರೇ ತಪ್ಪಾಗಲಾರದು.

1973 ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಬಂದು ಸುಮಾರು 48 ವರ್ಷ ಕಳೆದರು ಕೂಡ ಅವರ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. ಅನಂತ್ ನಾಗ್ ಅವರ ಸುದೀರ್ಘ ಸಿನೆಮಾ ಜಗತ್ತಿನಲ್ಲಿ ಎಲ್ಲರ ಜೊತೆಯೂ ತೆರೆಯನ್ನು ಹಂಚಿಕೊಂಡಿದ್ದಾರೆ. ಅವರಿಗೆ ಸಿಕ್ಕ ಪಾತ್ರವನ್ನು ಬಿಡದೆ ಗೌರವ ದಿಂದ ಅಭಿಯಿಸುತ್ತಿವರು ಅನಂತ್ ನಾಗ್. ಅನಂತ್ ನಾಗ್ ಅವರು ಆಗಿನ ಕಾಲದ ಸ್ಟಾರ್ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರಿಂದ ಹಿಡಿದು ಈಗಿನ ಕಾಲದ ಎಲ್ಲಾ ಸ್ಟಾರ್ ನಟರ ಜೊತೆಯೂ ತೆರೆಯನ್ನು ಹಂಚಿಕೊಂಡಿದ್ದಾರೆ.

ಅನಂತ್ ನಾಗ್ ಅವರು ವಿಷ್ಣುವರ್ಧನ್ ಅವರ ಜೊತೆ ಮಾಡಿದ ಒಂದು ಸಿನೆಮಾ ಮಾತ್ರ ಎಲ್ಲರಿಗೂ ಪದೇ ಪದೇ ನೋಡಬೇಕು ಎಂದು ಅನುಸುತ್ತದೆ. ಆ ಸಿನೆಮಾ ಯಾವುದೆಂದರೆ ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಿದ ಮತ್ತೆ ಹಾಡಿತು ಕೋಗಿಲೆ ಚಿತ್ರ, ಇದಾದನಂತರ ಅವರಿಬ್ಬರು ಮತ್ತೊಮ್ಮೆ ಸೇರಿದ್ದು ನಿಸ್ಕರ್ಷ ಸಿನೆಮಾದಲ್ಲಿ. ಮತ್ತೆ ಹಾಡಿತು ಕೋಗಿಲೆ ಚಿತ್ರದ ಕಥೆಯನ್ನು ಬರೆದಿದ್ದು ಚಿ. ಉದಯಶಂಕರ್. 1990 ರಲ್ಲಿ ಮತ್ತೆ ಹಾಡಿತು ಕೋಗಿಲೆ ಸಿನೆಮಾ ತೆರೆಕಂಡಿತು. ಈ ಸಿನೆಮಾದಲ್ಲಿ ವಿಷ್ಣುವರ್ಧನ್, ಅನಂತ್ ನಾಗ್, ಭವ್ಯ, ಹಾಗೂ ರೂಪಿನಿ ನಟಿಸಿದ್ದರು.

70ನೇ ದಶಕದಲ್ಲಿ ಅನಂತ್ ನಾಗ್, ವಿಷ್ಣುವರ್ಧನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ ಅವರಿಬ್ಬರೂ ಒಟ್ಟಿಗೆ ನಟಿಸುವುದಕ್ಕೆ 17 ವರ್ಷಗಳು ಕಾಯಬೇಕಾಗಿತ್ತು. ಮತ್ತೆ ಹಾಡಿತು ಸಿನೆಮಾದಲ್ಲಿ ಎರಡನೇ ನಾಯಕನ ಪಾತ್ರಕ್ಕೆ ಅನಂತ್ ನಾಗ್ ಅವರನ್ನು ಕರೆತರಲಾಗಿತ್ತದೆ.

ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿನಯವನ್ನು ಕಂಡು ಪ್ರೇಕ್ಷಕ ಪ್ರಭುಗಳು ಕಣ್ಣೀರು ಹಾಕುತ್ತಾರೆ. ಈ ಚಿತ್ರದ ಬಂದು 30 ವರ್ಷ ಕಳೆದರು ಕೂಡ ಇಂದಿಗೂ ಅನಂತ್ ನಾಗ್ ಹಾಗೂ ವಿಷ್ಣುವರ್ಧನ್ ಅವರ ನಟನೆ ಎಲ್ಲರ ಹೃದಯದಲ್ಲಿ ಹಾಗಿ ಇದೆ ಎಂದರೆ ಖಂಡಿತ ತಪ್ಪಾಗಲಾರದು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *