ಸಾಹಸಸಿಂಹ ವಿಷ್ಣುವರ್ಧನ್ ರವರು ತಮ್ಮ ಕೊನೆಯ ಸಿನಿಮಾದಲ್ಲಿ ಹಾಕಿಕೊಂಡ ಬಟ್ಟೆಯ ಬೆಲೆ ಕೇಳಿದರೆ ನೀವು ಕೂಡ ಆಶ್ಚರ್ಯಪಡ್ತಿರಾ..!?

vishnuvardhan movie costume price

ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗ ಕಂಡಂತಹ ಮೇರು ನಟರಲ್ಲಿ ಒಬ್ಬರಾಗಿದ್ದಾರೆ. ತೆರೆ ಮೇಲಿನ ವ್ಯಕ್ತಿತ್ವ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ವಿಷ್ಣುವರ್ಧನ್ ರವರ ಜಂಟಲ್ಮ್ಯಾನ್ ಆಗಿದ್ದರು. ಇದಕ್ಕಾಗಿಯೇ ಇದುವರೆಗೂ ಕೂಡ ವಿಷ್ಣುವರ್ಧನ್ ಅವರನ್ನು ಆರಾಧಿಸುವ ಅಭಿಮಾನಿಗಳು ಕೋಟ್ಯಾಂತರ ಮಂದಿ ಇದ್ದಾರೆ. ಅಷ್ಟಿಲ್ಲದೇ ಅವರನ್ನು ಕರುನಾಡ ಮಾಣಿಕ್ಯ ಎಂದು ಹೇಳುತ್ತಾರೆಯೇ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡವರು.

ವಿಷ್ಣುವರ್ಧನ್ ರವರು ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳ ನೆಚ್ಚಿನ ನಟ ಎಂಬುದಾಗಿ ಅಂದಿನ ಕಾಲದಲ್ಲಿ ಪ್ರಖ್ಯಾತಿಯನ್ನು ಪಡೆದವರು. ತಮ್ಮ ಆದರ್ಶಗಳಿಂದ ನಿಜ ಜೀವನದಲ್ಲಿ ಕೂಡ ನಿಜವಾದ ಅಭಿಮಾನಿಗಳನ್ನು ಹೊಂದಿದಂತಹ ನಟ. ಇಂದಿಗೂ ಅವರು ನಮ್ಮ ಜೊತೆ ಇಲ್ಲದಿದ್ದರೂ ಕೂಡ ಅವರ ಅಭಿಮಾನಿಗಳು ಅವರ ಜನ್ಮದಿನಾಚರಣೆಯ ಹೆಸರಿನಲ್ಲಿ ಜನರಿಗೆ ಸಹಾಯ ಮಾಡುವ ಕೆಲಸವನ್ನು ಇಂದಿಗೂ ಮಾಡುತ್ತಿದ್ದಾರೆ. ವಿಷ್ಣುವರ್ಧನ್ ಅವರ ಆದರ್ಶಗಳನ್ನು ಇಟ್ಟುಕೊಂಡು ಅದೆಷ್ಟು ಜನರು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ.

ಒಬ್ಬ ಸಿನೆಮಾ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಒಬ್ಬ ವ್ಯಕ್ತ ಹೇಗೆ ಇರಬೇಕು ಎನ್ನುವ ಪ್ರತೀಕ ಎಂದರೆ ತಪ್ಪಾಗಲಾರದು. ನಿಮಗೆಲ್ಲರಿಗೂ ತಿಳಿದಿರುವಂತೆ ವಿಷ್ಣುವರ್ಧನ್ ರವರ ಕೊನೆಯ ಸಿನಿಮಾ ಆಪ್ತರಕ್ಷಕ. ಈ ಚಿತ್ರದಲ್ಲಿ ವಿಷ್ಣುವರ್ಧನ್ ರವರು 2 ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ವಿಜಯರಾಜೇಂದ್ರ ಬಹದ್ದೂರ್ ಪಾತ್ರದಲ್ಲಿ ಗರನೆ ಗರಗರನೆ ಸಾಂಗ್ ಯಾವ ದೊಡ್ಡ ಮಟ್ಟಿಗೆ ಯಶಸ್ಸನ್ನು ಪಡೆದಿದೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಆದರೆ ಈ ಹಾಡಿನಲ್ಲಿ ಗಾಜಿನ ಪೋಷಾಕಿನಲ್ಲಿ ವಿಷ್ಣುವರ್ಧನ್ ರವರು ಕಾಣಿಸಿಕೊಂಡಿರುವುದು ಎಷ್ಟು ಚೆನ್ನಾಗಿ ಮೂಡಿಬಂದಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ ಆದರೆ ಅದರ ಬೆಲೆ ಎಷ್ಟು ಗೊತ್ತಾ. ಹೌದು ರಾಜ ವಿಜಯರಾಜೇಂದ್ರ ಬಹದ್ದೂರ್ ಪಾತ್ರದಲ್ಲಿ ಕಾಣಿಸಿಕೊಂಡಂತಹ ಬಟ್ಟೆಯ ಬೆಲೆ ಬರೋಬ್ಬರಿ 1.30 ಲಕ್ಷ ರೂಪಾಯಿ.

ಬಜೆಟ್ ಕಡಿಮೆ ಇದ್ದರೂ ಕೂಡ ಚಿತ್ರತಂಡ ವಿಷ್ಣುವರ್ಧನರವರ ಹೇಗೆ ಕಾಣಿಸಿಕೊಳ್ಳಬೇಕು ಎನ್ನುವ ಆಸೆಯಿಂದ ಹಲವಾರು ಕಡೆಗೆ ತಿರುಗಿ ಬೇಕಾಗುವಂತಹ ಎಲ್ಲಾ ಬಟ್ಟೆಗಳನ್ನು ಜೋಡಿಸಿ ತಂದು ಚಿತ್ರವನ್ನು ಮಾಡಿದ್ದರಂತೆ. ಅಂದಿನ ಕಾಲದಲ್ಲೇ ಇದರ ಬೆಲೆ 1.30 ಲಕ್ಷ ರೂಪಾಯಿ ಇತ್ತು ಎಂದರೆ ಇಂದಿನ ಕಾಲಕ್ಕೆ ಅದರ ಬೆಲೆ ಎಷ್ಟಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಇನ್ನು ವಿಷ್ಣುವರ್ಧನ್ ರವರ ಕೊನೆಯ ಸಿನಿಮಾದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ. ನೀವು ಕೂಡ ವಿಷ್ಣುವರ್ಧನರವರ ಅಭಿಮಾನಿಗಳಾಗಿದ್ದರೆ ತಪ್ಪದೇ ಈ ಲೇಖನಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *