Vishnuvardhan gandhadagudi story : ಗಂಧದಗುಡಿ ಚಿತ್ರವು ದೊಡ್ಡ ಮಟ್ಟದಲ್ಲಿ ಹೆಸರು ಮತ್ತು ಲಾಭಗಳಿಸಿತ್ತು ನಿಜ…ಆದರೆ ಅದರೊಂದಿಗೆ ಬಹುದೊಡ್ಡ ಸಂದೇಹದ ಕಥೆಯೇ ಹುಟ್ಟಿಕೊಂಡಿತ್ತು. ಚಿತ್ರೀಕರಣದ ವೇಳೆ ಗನ್ ನಿಂದ ಬುಲೆಟ್ ಹಾರಿದ್ದು, ಅಸಲಿ ಕಥೆ ಅರಿಯದೆ ಗಾಳಿ ಸುದ್ದಿಯಿಂದಲೇ ವಿಷ್ಣುವರ್ಧನ್ ಅವರ ಮೇಲೆ ಅಪವಾದ ಬರುವಂತಾಯಿತು. ಈ ಒಂದು ಘಟನೆ ನಡೆದ ನಂತರ ವಿಷ್ಣುವರ್ಧನ್ ಪಡಬಾರದಂತಹ ಕಷ್ಟಗಳನ್ನು ನೋವುಗಳನ್ನು ಎದುರಿಸಿದರು.
ಗಂಧದಗುಡಿ ಚಿತ್ರದ ಆ ಘಟನೆ ನಡೆದ ನಂತರ ವಿಷ್ಣುವರ್ಧನ್ ಅವರ ಶಂಕರಪುರದ ಮನೆಗೆ ಹೋಗಿ ಕಲ್ಲು ತೂರಾಟ ಮಾಡುತ್ತಾರೆ ಅದಾದ ನಂತರ ವಿಷ್ಣುವರ್ಧನ್ ಅವರು ಜಯನಗರದ ಅಪಾರ್ಟ್ಮೆಂಟ್ ಗೆ ಹೋಗಿ ಶಿಫ್ಟ್ ಆಗುತ್ತಾರೆ. ಆದರೆ ಕೆಲವು ದುರಾಭಿಮಾನಿಗಳು ಅಲ್ಲಿಯೂ ಹೋಗಿ ಮನೆ ಮೇಲೆ ಕಲ್ಲು ತೂರಾಟ ಮಾಡುತ್ತಾರೆ. ಕೊನೆಯದಾಗಿ ಯಾವುದೇ ಆಯ್ಕೆಯಿಲ್ಲದೆ ವಿಷ್ಣುವರ್ಧನ್ ಅವರು ವುಡ್ಲ್ಯಾಂಡ್ ಹೋಟೆಲ್ ಗೆ ಹೋಗಿ ಉಳಿದು ಕೊಳ್ಳಲು ಶುರು ಮಾಡುತ್ತಾರೆ.
How bad Vishnuvardhan was treated by few fans :
ಅಂದು ರಾಜಕುಮಾರ ಅವರ ಒಲವು ಗೆಲುವು ಸಿನಿಮಾ ಬಿಡುಗಡೆಯಾಗಿತ್ತು. ಕೆಂಪೇಗೌಡ ರಸ್ತೆಯ ಥಿಯೇಟರ್ ಮುಂದೆ ಅಭಿಮಾನಿಗಳಿಂದ ಖುಷಿಯಿಂದ ಸಂಭ್ರಮಿಸುತ್ತಿದ್ದರು. ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ಅದೇ ರಸ್ತೆಯಲ್ಲಿ ಪಾಸ್ ಆಗುತ್ತಿರುತ್ತಾರೆ, ಇದನ್ನು ಕಂಡ ದುಷ್ಟ ಅಭಿಮಾನಿಗಳ ಗುಂಪು ವಿಷ್ಣುವರ್ಧನ್ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ… ಅವರು ಕೊರಳಿಗೆ ಕೈ ಹಾಕಿ ರಾಜಕುಮಾರ್ ಅವರ ಸಿನಿಮಾದ ಘೋಷಣೆ ಕೂಗುವಂತೆ ಒತ್ತಾಯ ಮಾಡಿದ್ದರು.
ವಿಕೃತ ಮನಸ್ಸಿನ ಜನರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ವಿಷ್ಣುವರ್ಧನ್ ತಂದೆಯ ಅಂತಿಮ ಸಂಸ್ಕಾರದಲ್ಲಿ ಕೂಡ ಕಲ್ಲು ಹೋರಾಟ ಮಾಡಿದರು. ನಂತರ ವಿಷ್ಣುವರ್ಧನ್ ಅವರ ಮದುವೆಯ ದಿನ ಕೂಡ ಕಲ್ಲು ತೂರಾಟ ನಡೆಸಿದರು. ಬೇರೆ ಭಾಷೆಗಳಲ್ಲಿ ವಿಷ್ಣುವರ್ಧನ್ ನಟಿಸಿದರು ಅಂತ ಅವರಿಗೆ ಕನ್ನಡದ ದ್ರೋಹಿ ಎಂಬ ಪಟ್ಟ ನೀಡಿದರು.
ಅಭಿಮಾನಿಗಳು ಅಂತ ಸುಳ್ಳು ಹೇಳಿಕೊಂಡು ವಿಷ್ಣುವರ್ಧನ್ ಅವರ ಬಳಿ ಹೋಗಿ ಅವರ ಕಣ್ಣಿಗೆ ಖಾರದ ಪುಡಿ ಸೋಕುವುದು.. ಹಾಗೆ ಅವರ ಕೈಗೆ ಬ್ಲೇ-ಡ್ ನಿಂದ ಕು-ಯ್ಯುವುದು ಈ ರೀತಿಯ ಅನಾಹುತಗಳನ್ನು ಮಾಡುತ್ತಿದ್ದರು. ವಿಷ್ಣುವರ್ಧನವರು ಥಿಯೇಟರ್ ಗೆ ಹೋಗಿ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಗ್ಲಾಸ್ ಚೂರು ಗಳನ್ನು ಹಾಕಿ ಬರುತ್ತಿದ್ದರು. ವಿಷ್ಣುವರ್ಧನ್ ಅವರಿಗೆ ಕಾಟಕೊಟ್ಟ ಇಂತಹ ದುಷ್ಟ ಅಭಿಮಾನಿಗಳು ಆ ದಿನ ಗಂಧದಗುಡಿ ಶೂಟಿಂಗ್ನಲ್ಲಿ ನಿಜವಾಗಿ ನಡೆದ ಅಸಲಿ ಘಟನೆ ತಿಳಿದುಕೊಂಡಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ.

ಚಿತ್ರೀಕರಣದಲ್ಲಿ (Shooting) ನಿಜವಾಗಿ ನಡೆದಿರುವ ಘಟನೆ ಏನೆಂಬುದನ್ನು ತಿಳಿದುಕೊಳ್ಳೋಣ. Vishnuvardhan gandhadagudi story
Fighting ನ ಸನ್ನಿವೇಶ. ಚಿತ್ರೀಕರಣವಾಗುತ್ತಿರುವುದು ಕಾಕನಕೋಟೆಯ ಬೆಟ್ಟದಲ್ಲಿ. ಬಾಲಕೃಷ್ಣ (Baalkrishna) ಅವರು ಬಂದೂಕಿನಿಂದ ಶೂಟ್ ಮಾಡುವ ದೃಶ್ಯಗಳಿತ್ತು. ಆದರೆ ಹೆಚ್ಚಾದ ತೂಕವಿರುವ ( heavy weight ) ಬಂದೂಕನ್ನು ಸರಿಯಾಗಿ ಹಿಡಿಯಲಾರದೆ ದೃಶ್ಯಕ್ಕಾಗಿ 3 ರಿಂದ 4 ಬಾರಿ ಪ್ರಯತ್ನಿಸಿದರು.
ಇದೇ ಕಾರಣಕ್ಕಾಗಿ ಎಂ ಪಿ ಶಂಕರ್( M. P. Shankar) ಅವರಿಂದ ಗನ್ನನ್ನು ತೆಗೆದುಕೊಂಡು ಬುಲೆಟ್ ಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಗ-ನ್ ಟ್ರಿಗರನ್ನು ಪ್ರೆಸ್ ಮಾಡುತ್ತಾರೆ. ಗ-ನ್ ಲಾಕ್ ಆಗಿರುವುದರಿಂದ ಯಾವುದೇ ರೀತಿಯ ಫೈಯರ್ ಆಗುವುದಿಲ್ಲ. ನಂತರ ಗ-ನ ಅನ್ನು ಎಂಪಿ ಶಂಕರ್ ಅವರಿಗೆ ಮರಳಿಸಿದಾಗ ಅವರ ಕೈಯಿಂದ ಗ-ನ್ ಜಾರುತ್ತಿರುತ್ತೆ; ಅವರಿಗೆ ಗೊತ್ತಿಲ್ಲದ ಹಾಗೆ trigger press ಆಗಿ ಬುಲೆಟ್ ಸಿಡಿಯುತ್ತೆ.
ಈ ಘಟನೆ ನಡೆದ ನಂತರ ಎಂ ಪಿ ಶಂಕರ್ ಅವರು ಗಾಬರಿಗೊಂಡು ನಿಂತುಬಿಡುತ್ತಾರೆ. ಡಾಕ್ಟರ್ ರಾಜಕುಮಾರ್ ಅವರು ಕೂಡ ಸುಮಾರು 10 ನಿಮಿಷಗಳ ಕಾಲ ಸುಮ್ಮನೆ ನಿಂತಿದ್ದರಂತೆ. ರಾಜಕುಮಾರ ಅವರು ದೇವರೇ ನಮ್ಮನ್ನು ಕಾಪಾಡಿದ ಎನ್ನುತ್ತಾ ಚಿತ್ರತಂಡವನ್ನು ಮುಂದಿನ ಚಿತ್ರೀಕರಣಕ್ಕಾಗಿ ಸಜ್ಜುಗೊಳಿಸಿದರಂತೆ.
ಆ ವೇಳೆಯಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರು ಕಾಕನಕೋಟೆಯ ಬೆಟ್ಟದಲ್ಲಿ ಅಂದರೆ ಚಿತ್ರೀಕರಣದ ಸ್ಥಳದಲ್ಲಿ ಇರಲೇ ಇಲ್ಲ. ಆದರೆ ರಾಜಕುಮಾರ್ ಅವರ ಕಡೆಗೆ ಗ-ನ್ ನಿಂದ ಬು-ಲೆಟ್ ಹಾರಿರುವ ಆಕಸ್ಮಿಕ ಘಟನೆಯಲ್ಲಿ ತಳುಕು ಹಾಕಿಕೊಂಡಿರುವ ಹೆಸರು ಮಾತ್ರ ವಿಷ್ಣುವರ್ಧನ್ ಅವರದು.