ಅವಳ ಹೆಸರು ಮೃದುಲಾ. ಹೆಸರೇ ಸೂಚಿಸುವಷ್ಟು ಮೃದುವಲ್ಲ..! ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನಿಗೆ ಮಾಡಿದ್ದೇನು ನೋಡಿ!!

Vishakhapattana mrudula : ಪತಿ ಕಾಣಿಸುತ್ತಿಲ್ಲ ಎಂದು ನಾಟಕವಾಡಿದ್ದ ಖತರ್ನಾಕ್ ಲೇಡಿ, ಪೊಲೀಸರ ತನಿಖೆಯ ವೇಳೆ ಹೊರ ಬಿತ್ತು ಅಸಲಿ ವಿಚಾರ. ಇ.ತ್ತೀಚಿನ ದಿನಗಳಲ್ಲಿ, ಹೆಚ್ಚು ಜನರು ಅ-ಕ್ರಮ ಸಂಬಂಧಗಳಲ್ಲಿ ಸಂತೋಷವನ್ನು ಹುಡುಕುತ್ತಿದ್ದಾರೆ. ತಮ್ಮ ಸುತ್ತ ಮುತ್ತಲಿನ ಜನರ ನಡುವಿನ ಸಂಬಂಧದಲ್ಲಿ ಸಂತೋಷ ಸಿಗದೇ ಹೋದರೆ ಬೇರೆ ವ್ಯಕ್ತಿಯ ಕಡೆಗೆ ವಾಲುವುದು ಸರ್ವೇ ಸಾಮಾನ್ಯವಾದ ವಿಚಾರವಾಗಿದೆ.

ಗಂಡನಿಗೆ ಒಳ್ಳೆ ಕೆಲಸ, ಆದಾಯವಿದ್ದು ಸುಂದರ ಜೀವನ ಇದ್ದ ಮಹಿಳೆ.. ದಾರಿ ತಪ್ಪಿದ್ದಳು. ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಗೆಳೆಯನು ಇದ್ದಾನೆ ಎನ್ನುವ ಭ್ರಮೆಯಲ್ಲಿ ತನ್ನೊಂದಿಗೆ ಏಳು ಹೆಜ್ಜೆ ಹಾಕಿದವನನ್ನು ಮರಳಿ ಬಾರದ ಲೋಕಕ್ಕೆ ಕಳುಹಿಸಿಬಿಟ್ಟಿದ್ದಳು.ಗಂಡ ಕಾಣದಿದ್ದಾಗ ನಾಪತ್ತೆಯಾಗಿದ್ದಾನೆ ಎಂದು ನಾಟಕ ಶುರು ಮಾಡಿದ್ದಳು.

ಹೌದು,ಆಂಧ್ರಪ್ರದೇಶದ ವಿಶಾಖಪಟ್ಟಣದ ಮಧುರವಾಡ ಪೊಲೀಸ್ ಠಾಣೆಯಲ್ಲಿ ಪತಿ ಮುರಳಿ ಕಾಣುತ್ತಿಲ್ಲ ಎಂದು ಬಡಮುರು ಮೃದುಲಾ ಎಂಬ ಮಹಿಳೆ ಈ ಹಿಂದೆ ಪೊಲೀಸರಿಗೆ ದೂ-ರು ನೀಡಿದ್ದಳು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ತದನಂತರದಲ್ಲಿ ಮಾರಿಕಾ ಕೋಳಿ ಹೆದ್ದಾರಿಯ ಸೇತುವೆಯ ಕೆಳಗೆ ಕೊ-ಳೆತ ಸ್ಥಿತಿಯಲ್ಲಿ ಮೃ-ತದೇಹ ಪತ್ತೆಯಾಗಿದ್ದು ಎಲ್ಲರಿಗೂ ಶಾಕ್ ಕಾದಿತ್ತು.

ಆ ಬಳಿಕ ನಾಪತ್ತೆ ಪ್ರಕರಣದ ತನಿಖೆ ನಡೆಸಿದಾಗ ಮುರಳಿ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿತ್ತು. ಇದರಿಂದ ಶಂ-ಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿತ್ತು.ವಿಶಾಖದ ಮಧುರವಾಡ ರಿಕ್ಷಾ ಕಾಲೋನಿಯ ಬುಡುಮೂರು ಮುರಳಿ (43) ಮತ್ತು ಮೃದುಲಾ (29) ಪತಿ-ಪತ್ನಿಯರು. ಮುರಳಿ ಅವರು ಕಳೆದ ಎಂಟು ವರ್ಷಗಳಿಂದ ಪೂರ್ವ ಆಫ್ರಿಕಾದ ಎರಿಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

Astrology mahesh bhat

ಬುಡುಮೂರು ಮುರಳಿ ಆಫ್ರಿಕಾದಿಂದ ವಿಶಾಖಪಟ್ಟಣಕ್ಕೆ ಆಗಮಿಸಿ ಎರಡು ದಿನ ಮನೆಯಲ್ಲಿಯೇ ಇದ್ದರು. ಒಂದು ದಿನ ಶ್ರೀಕಾಕುಳಂ ಜಿಲ್ಲೆಯ ಬಲ್ಸವಲಸದಲ್ಲಿ ತಾಯಿಯನ್ನು ಭೇಟಿಯಾಗಲು ತೆರಳಿದ್ದರು. ತನಿಖೆಯ ವೇಳೆ ಮೃದುಲಾ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದು, ಕೊಮ್ಮಾಡಿಯ ಎಸ್.ಟಿ.ಬಿ.ಎಲ್. ಥಿಯೇಟರ್ ಬಳಿ ಡ್ರಾಪ್ ಮಾಡಿದೆ. ಸ್ವಲ್ಪ ಸಮಯದ ನಂತರ ಗಂಡನ ಸ್ನೇಹಿತರು ಬಂದು ಅವರೊಂದಿಗೆ ತೆರಳಿದ್ದರು ಎಂದಿದ್ದಳು.

ಆದರೆ ಮೃದುಲಾಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿತ್ತು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿ ಮೃದುಲಾ ಶ-ವವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗಿ ಮಾರಿಕಾ ಸೇತುವೆ ಕೆಳಗೆ ಎಸೆದಿದ್ದಳು.

ಸಿಸಿಟಿವಿಯಲ್ಲಿ ಈ ದೃಶ್ಯಾವಳಿಗಳನ್ನೂ ಸೆರೆಯಾಗಿತ್ತು. ಈ ಪ್ರಕರಣದಲ್ಲಿ ಮೃದುಲಾ ಜೊತೆಗೆ ಆಕೆಯ ಪ್ರಿಯಕರನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರ್ಥಿಕವಾಗಿ ಚೆನ್ನಾಗಿದ್ದ ಪತಿಯ ಜೊತೆಗೆ ಸುಂದರವಾಗಿ ಸಂಸಾರವನ್ನು ನಡೆಸಬೇಕಿದ್ದ ಈಕೆಯು ಬೇರೊಬ್ಬ ಗಂಡಸಿನ ವ್ಯಾಮೋಹಕ್ಕೆ ಬಿದ್ದು ಪತಿಯ ಕಥೆ ಮು-ಗಿಸಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *