ಸತಿ ಪತಿ ಎನ್ನುವ ಪವಿತ್ರ ಸಂಬಂಧ (Husband And Wife Relationship) ವು ದಿನ ಕಳೆದಂತೆ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಗಂಡ ಹೆಂಡಿರ ನಡುವೆ ಮೂರನೇ ವ್ಯಕ್ತಿಯ ಪ್ರವೇಶ ಎನ್ನುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದಾಗಿ ಗಂಡ ಹೆಂಡತಿಯ ನಡುವೆ ಮ-ನಸ್ತಾಪ ಹಾಗೂ ಮುನಿಸು ಹೆಚ್ಚಾಗಿ ಕೆಲವೊಮ್ಮೆ ಬೇಡದ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಇಂತಹದ್ದೇ ಘಟನೆಯೊಂದು ವಿಶಾಖ ಪಟ್ಟಣದಲ್ಲಿ ನಡೆದಿದೆ.
ಪ್ರಿಯಕರನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಪೊಲೀಸ್ ಪೇದೆಯಾಗಿದ್ದ ಪತಿಯನ್ನು ಕಥೆಯನ್ನು ಮುಗಿಸಿದ್ದಾಳೆ. ಗೆಳೆಯನ ಜೊತೆ ಚೆಲ್ಲಾಟವಾಡಲು ಅಡ್ಡ ನಿಂತಿದ್ದ ಈ ಪತಿಯನ್ನು ಈ ಲೋಕದಿಂದಲೇ ದೂರ ಮಾಡಬೇಕು ಎಂದು ನಿರ್ಧಾರ ಮಾಡಿಬಿಟ್ಟಿದ್ದಳು. ಎರಡು ಮಕ್ಕಳ ತಾಯಿಯಾಗಿದ್ದರೂ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೇನೇ ತನ್ನ ಸ್ವಾ-ರ್ಥಕ್ಕಾಗಿ ಇಂತಹ ನೀ-ಚ ಕೆಲಸವನ್ನು ಮಾಡಿದ್ದಾಳೆ.

ವಿಶಾಖಪಟ್ಟಣಂ ಎಂವಿಪಿ ಕಾಲೋನಿ (Vishakha Pattanam MVP Colony) ಯಲ್ಲಿ ನೆಲೆಸಿದ್ದ ಕಾನ್ ಸ್ಟೇಬಲ್ ರಮೇಶ್ (Ramesh) ಪತ್ನಿಯ ಅ-ಕ್ರಮ ಸಂಬಂಧಕ್ಕೆ ಜೀ-ವ ಕಳೆದುಕೊಂಡವರು. ಹೌದು, ಸ್ಥಳೀಯ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರು ಕೆಲಸ ವಿಚಾರದಲ್ಲಿ ತುಂಬಾನೆ ಪ್ರಾಮಾಣಿಕ ಹಾಗೂ ನಿಷ್ಠಾವಂತರಾಗಿದ್ದರು.
ಆದರೆ ದೇವರಂತಹ ಪತಿಯನ್ನು ಜಾಣತನದಿಂದ ಜೀ-ವ ತೆಗೆದಿದ್ದು, ಪತಿ ಕೊ-ಲೆಯಾಗಿಲ್ಲ ಹೃದಯಾಘಾತದಿಂದ ಸಹಜ ಸಾ-ವು ಎಂದು ನಾಟಕವಾಡಿದ್ದು, ಕೊನೆಗೆ ಈ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕಾನ್ಸ್‌ಟೇಬಲ್ ರಮೇಶ್ ಅವರ ಪತ್ನಿ ಶಿವಜ್ಯೋತಿ (Shivajyothi) ಸ್ಥಳೀಯ ಟ್ಯಾಕ್ಸಿ ಚಾಲಕನೊಂದಿಗೆ ಸಂಬಂಧ ಹೊಂದಿದ್ದಳು. ಹೀಗಾಗಿ ಪತ್ನಿ ಶಿವಜ್ಯೋತಿ ತನ್ನ ಪತಿ ಕಾನ್ಸ್‌ಟೇಬಲ್ ರಮೇಶ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದು, ತನ್ನ ಗೆಳೆಯ ಮತ್ತು ಆತನ ಸ್ನೇಹಿತನ ಸಹಾಯ ಪಡೆದಿದ್ದಾಳೆ.
ಪ್ಲಾನ್ ನಂತೆಯೇ ಶಿವಜ್ಯೋತಿ ರಮೇಶ ಮಲಗಿದ್ದಾಗ ಕಟ್ಟಿ ಹಾಕಿ ದಿಂಬಿನಿಂದ ಉ-ಸಿರುಗಟ್ಟಿಸಿದ್ದಾಳೆ. ಈ ಶಿವಾನಿ, ಹೃದಯಾಘಾತದಿಂದ ಸಾ-ವನ್ನಪ್ಪಿದ್ದಾನೆ ಎಂದು ಎಲ್ಲರನ್ನು ನಂಬಿಸಲು ಯತ್ನಿಸಿದ್ದಾಳೆ. ಅಷ್ಟಕ್ಕೇ ನಿಲ್ಲದ ಶಿವಜ್ಯೋತಿಯು ತಡಮಾಡಿದರೆ ಅಸಲಿ ಸತ್ಯ ಹೊರ ಬರುತ್ತದೆ ಎನ್ನುವ ಕಾರಣಕ್ಕೆ ಕೊನೆಯ ವಿ-ಧಿ ವಿಧಾನಗಳನ್ನು ಆದಷ್ಟು ಬೇಗನೇ ಮಾಡಲು ಮುಂದಾಗಿದ್ದಾಳೆ.

ಈ ವಿಚಾರವು ತಿಳಿಯುತ್ತಿದ್ದಂತೆ ಸಹ ನೌಕರ ಕಾನ್ ಸ್ಟೆಬಲ್ ರಮೇಶ್ ಸಾ-ವಿನಿಂದ ಶಾ-ಕ್ ಗೆ ಒಳಗಾಗಿದ್ದ ಈ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿದ್ದರು. ರಮೇಶ್ ಅ-ನುಮಾನಾಸ್ಪದ ಸಾ-ವಿನ ಹಿನ್ನೆಲೆಯಲ್ಲಿ ಎಂವಿಪಿ ಪೊಲೀಸರು (MVP Police) ತನಿಖೆ ಕೈಗೊಂಡಿದ್ದಾರೆ. ಎಂವಿಪಿ ಪೊಲೀಸರ ತನಿಖೆಯಲ್ಲಿ ರಮೇಶ್ ಪತ್ನಿ ಶಿವಜ್ಯೋತಿ ಟ್ಯಾಕ್ಸಿ ಚಾಲಕನೊಂದಿಗೆ ಅ-ಕ್ರಮ ಸಂಬಂಧ ಹೊಂದಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ತನಿಖೆಯನ್ನು ಮತ್ತಷ್ಟು ಬಿರಿಸುಗೊಳಿಸಿದಾಗ ಟ್ಯಾಕ್ಸಿ ಚಾಲಕನೊಂದಿಗಿನ ವಿವಾಹೇತರ ಸಂಬಂಧವೇ ರಮೇಶ್ ಕೊ-ಲೆಗೆ ಕಾರಣ ಎಂದು ತಿಳಿದುಬಂದಿದ್ದು, ಈ ಮೂವರನ್ನು ಬಂ-ಧಿಸಲಾಗಿದೆ.