Vishakapatnam lovers bike ride : ಪ್ರೀತಿ ಎನ್ನುವುದು ಮಾಯೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಸಿನಿಮಾ ಹಾಡು ಕೇಳಿದರೆ ಈ ಪ್ರೀತಿ ಎಷ್ಟು ಡೇಂಜರ್ ಎಂದೆನಿಸಿಬಿಡುತ್ತದೆ. ಪ್ರತಿಯೊಬ್ಬರು ಕೂಡ ಪ್ರೀತಿಗಾಗಿ ಹಾತೊರೆಯುತ್ತಾರೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡಬೇಕು.
ಕೆಲವೊಮ್ಮೆ ಈ ಪ್ರೀತಿಯ ಭಾವನೆ ಉಸಿರು ಗಟ್ಟಿಸುತ್ತದೆ ಕೂಡ. ಹೀಗದಾಗ ಸಂಬಂಧದಲ್ಲಿ ಬಿರುಕು ಕಾಣಿಸುತ್ತದೆ. ಇನ್ನೊಂದೆಡೆ ಈ ಪ್ರೀತಿ ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ.ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಎರಡು ಮನಸ್ಸು ಇಷ್ಟ ಪಟ್ಟರೆ ಸಾಕು ಎನ್ನಬಹುದು. ಇನ್ನು ಪ್ರೀತಿಯಲ್ಲಿ ಪ್ರೇಮಿಗಳು ಪ್ರಪಂಚ ಕಾಣದು. ಪ್ರೀತಿಯಲ್ಲಿದ್ದಾಗ ಜಗತ್ತೇ ಸುಂದರವಾಗಿ ಕಾಣುತ್ತದೆ.
ಕೆಲವೊಮ್ಮೆ ಪ್ರೇಮಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಆಂಧ್ರಪ್ರದೇಶದಲ್ಲಿ ಚಲಿಸುತ್ತಿದ್ದ ಬೈಕ್ ನಲ್ಲಿ ತನ್ನ ಪ್ರೇಯಸಿ ಜೊತೆಗೆ ಹೋಗುತ್ತಿದ್ದ ವೇಳೆಯಲ್ಲಿ ಯುವಕನೊಬ್ಬನ ವಿಚಿತ್ರ ಕೃತ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಚಲಿಸುತ್ತಿರುವ ಬೈಕ್ ಮೇಲೆ ಪ್ರೇಮಿಗಳು ಪರಸ್ಪರ ತಬ್ಬಿಕೊಳ್ಳುತ್ತಿದ್ದಾರೆ.
ಅಂದಹಾಗೆ, ವಿಶಾಖಪಟ್ಟಣಂನ ಸ್ಟೀಲ್ ಪ್ಲಾಂಟ್ ರಸ್ತೆಯಲ್ಲಿ ಚಿತ್ರೀಕರಿಸಲಾಗಿದ್ದು, ಈ ವಿಡಿಯೋದಲ್ಲಿ 19 ವರ್ಷದ ಯುವತಿ ಮತ್ತು 22 ವರ್ಷದ ಯುವಕ ಬೈಕ್ ಚಲಾಯಿಸುತ್ತಿರುವಾಗಲೇ ತನ್ನ ಯುವತಿಯನ್ನು ಬೈಕ್‌ನ ಟ್ಯಾಂಕ್ ಮೇಲೆ ಕೂರಿಸಿ ತಬ್ಬಿಕೊಳ್ಳತೊಡಗಿದ್ದಾನೆ. ಬೈಕ್ ಚಲಾಯಿಸುತ್ತಿರುವಾಗಲೇ ಅಜಾಗರೂಕತೆಯಿಂದ ವರ್ತಿಸಿದ್ದಾನೆ.
Vishakapatnam lovers bike ride
https://twitter.com/VizagNewsman/status/1608426856176578560?t=ttAOHzTnBs1JTurK-hjCFg&s=19
ಈ ವೇಳೆಯಲ್ಲಿ ಬೈಕ್‌ನಲ್ಲಿ ಪ್ರೇಮಿಗಳು ತಬ್ಬಿಕೊಳ್ಳುತ್ತಿರುವ ದೃಶ್ಯವನ್ನು ಮತ್ತೊಬ್ಬ ವ್ಯಕ್ತಿಯೂ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರ ವಿರುದ್ಧವೂ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲು ಮಾಡಿದ್ದಾರೆ. ಈ ಯುವಕನ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 336, 279, 132 ಮತ್ತು 129 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಇಬ್ಬರ ಪೋಷಕರನ್ನೂ ಕರೆಸಿ ಕೌನ್ಸೆಲಿಂಗ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಸಿಎಚ್ ಶ್ರೀಕಾಂತ್ ಅವರು ನಾಗರಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.
ಕಾನೂನು ಉಲ್ಲಂಘಿಸುವವರಿಗೆ ವಾಹನ ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬೈಕ್ ಮೇಲೆ ರೋಮ್ಯಾನ್ಸ್ ಮಾಡಲು ಹೋದ ಪ್ರೇಮಿಗಳಿಬ್ಬರ ಮೇಲೆ ಪ್ರಕರಣ ದಾಖಲಾಗಿರುವುದು ವಿಪರ್ಯಾಸವೆನ್ನಬಹುದು.