ಕನ್ನಡ ಸಿನಿಮಾರಂಗದಲ್ಲಿ ಖಳ ನಟನಾಗಿ, ನಾಯಕ ನಟನಾಗಿ ಮಿಂಚಿದ ನಟರಲ್ಲಿ ಟೈಗರ್ ಪ್ರಭಾಕರ್ (Tiger Prabhakar) ಕೂಡ ಒಬ್ಬರು. ಟೈಗರ್ ಪ್ರಭಾಕರ್ ಅವರ ಹೆಸರು ಕೇಳಿದರೆ ಅವರ ಖಡಕ್ ಧ್ವನಿ ಹಾಗೂ ಡೈಲಾಗ್ ಹೇಳುವ ರೀತಿಯು ಕಣ್ಣ ಮುಂದೆ ಬರುತ್ತದೆ. ಟೈಗರ್ ಪ್ರಭಾಕರ್ ಅವರು ದೈಹಿಕವಾಗಿ ಇಲ್ಲವಾದರೂ ಕೂಡ ಮಾನಸಿಕವಾಗಿ ಅವರ ಸಿನಿಮಾದ ಮೂಲಕ ಸದಾ ಜೀವಂತವಾಗಿದ್ದಾರೆ ಎನ್ನಬಹುದು. ಟೈಗರ್ ಪ್ರಭಾಕರ್ ಅವರು ತೆರೆ ಮೇಲೆ ಫೈಟ್ (Fight) ಮಾಡುತ್ತಿದ್ದರೆ ಆ ದೃಶ್ಯವನ್ನು ನೋಡಲು ದೊಡ್ಡ ಅಭಿಮಾನಿ ಬಳಗವೇ ಇತ್ತು.
ಟೈಗರ್ ಪ್ರಭಾಕರ್ ಅವರ ವೃತ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದರೂ ಕೂಡ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದರು. ಕನ್ನಡದ ಖ್ಯಾತ ನಟ ಪ್ರಭಾಕರ್ ಅವರಿಗೆ ಮೂವರು ಪತ್ನಿಯರು, ಐವರು ಮಕ್ಕಳು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ನಟ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ (Vinod Prabhakar) ಚಂದನವನದಲ್ಲಿ ಸಕ್ರಿಯರಾಗಿದ್ದಾರೆ.
ಆದರೆ ನಟ ಪ್ರಭಾಕರ್ ಅವರ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳಿವೆ, ಅವರು ಯಾರು ಕೂಡ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ ಎನ್ನುವ ಮಾತು ಚಂದನವನದ ತುಂಬೆಲ್ಲಾ ಹರಿದಾಡಿತ್ತು. ಆದರೆ ಆ ಮಾತನ್ನು ಟೈಗರ್ ಪ್ರಭಾಕರ್ ಅವರ ಮಕ್ಕಳು ಸುಳ್ಳು ಮಾಡಿದ್ದಾರೆ. ಇದೀಗ ಟೈಗರ್ ಪ್ರಭಾಕರ್ ಅವರ ಮಕ್ಕಳಾದ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯರವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹೌದು, ಟೈಗರ್ ಪ್ರಭಾಕರ್ ಅವರ ಮೊದಲ ಪತ್ನಿಯ ಮಗ ವಿನೋದ್ ಪ್ರಭಾಕರ್ ಎರಡನೇ ಪತ್ನಿ ಮಗಳು ಸೌಂದರ್ಯಾ. ಈ ಇಬ್ಬರೂ ಮಕ್ಕಳು ಕೂಡ ಸಿನಿಮಾರಂಗದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯರವರ ಜೊತೆಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಫೋಟೋಗಳು ವೈರಲ್ ಆಗಿವೆ.
ವಿನೋದ್ (Vinod) ಹಾಗೂ ಸೌಂದರ್ಯ (Sowdarya) ಅವರು ಸಹೋದರ ಹಾಗೂ ಸಹೋದರಿಯೇ. ಆದರೆ ಇವರಿಬ್ಬರೂ ದೂರ ಇಡುವ ಪ್ರಯತ್ನಗಳು ಈಗಾಗಲೇ ನಡೆದಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ (Palace Ground) ನಲ್ಲಿ ಅದ್ಧೂರಿಯಾಗಿ ನಡೆದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ (Vinod Biddappa) ಆರತಕ್ಷಣೆಯಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯರವರು ಭೇಟಿಯಾಗಿದ್ದಾರೆ.
ಈ ವೇಳೆಯಲ್ಲಿ ಫೋಟೋ ತೆಗೆಸಿಕೊಂಡ ಇವರಿಬ್ಬರ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದಲ್ಲದೇ, ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಅವರ ಜೊತೆಗೆ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಯಾಗಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಟೈಗರ್ ಪ್ರಭಾಕರ್ ಅವರ ಮಕ್ಕಳು ಜೊತೆಯಾಗಿ ಕಾಣಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.