ಬಿಗ್ ಬಾಸ್ ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವ ವಿನಯ್ ಗೌಡ ಅವರ ಆಸ್ತಿಯ ಮೌಲ್ಯ ಎಷ್ಟು ಕೋಟಿ ಗೊತ್ತಾ?

ಸ್ನೇಹಿತರೆ ಈಗಾಗಲೇ ಈ ಬಾರಿಯ ಹತ್ತನೇ ಅವತಾರಣಿಕೆಯ ಬಿಗ್ ಬಾಸ್ ಕಾರ್ಯಕ್ರಮ ಅದ್ದೂರಿಯಾಗಿ ಪೂರ್ತಿಯಾಗಿದ್ದು ಮೊದಲನೇ ಸ್ಥಾನವನ್ನು ಕಾರ್ತಿಕ್ ಮಹೇಶ್ 2ನೇ ಸ್ಥಾನವನ್ನು ಡ್ರೋನ್ ಪ್ರತಾಪ್ ಮೂರನೇ ಸ್ಥಾನವನ್ನು ಸಂಗೀತ ಶೃಂಗೇರಿ ಹಾಗೂ ನಾಲ್ಕನೇ ಸ್ಥಾನವನ್ನು ವಿನಯ್ ಗೌಡ ಅವರು ಪಡೆದುಕೊಂಡಿದ್ದಾರೆ. ಸಾಕಷ್ಟು ಬಿಗ್ ಬಾಸ್ ವಿಕ್ಷಕರು ಈ ಬಾರಿಯ ಬಿಗ್ ಬಾಸ್ ಅನ್ನು ವಿನಯ್ ಗೌಡ ಅವರೇ ಗೆಲ್ಲುತ್ತಾರೆ ಎಂಬುದಾಗಿ ಭಾವಿಸಿದ್ದರು.

ವಿನಯ್ ಗೌಡ ಅವರು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವುದು ಬಿಗ್ ಬಾಸ್ ಪ್ರೇಕ್ಷಕರಿಗೆ ಇವತ್ತಿಗೂ ಕೂಡ ಆಶ್ಚರ್ಯವನ್ನು ತರಿಸುವಂತಹ ಒಂದು ವಿಚಾರವಾಗಿದೆ ಎನ್ನಬಹುದಾಗಿದೆ. ವಿನಯ್ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಸಂದರ್ಭದಲ್ಲಿ ಆದಂತಹ ಬದಲಾವಣೆ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು ಅಂತ ಹೇಳಬಹುದು.

ಇನ್ನು ವಿನಯ್ ಗೌಡ ಅವರ ಬಗ್ಗೆ ಮಾತನಾಡುವುದಾದರೆ ಕನ್ನಡ ಕಿರುತೆರೆಯಲ್ಲಿ ತಮ್ಮ ಮಹದೇವನ ಪಾತ್ರದ ಮೂಲಕ ಪ್ರೇಕ್ಷಕರ ಮನೆಗೆ ಹೋದಕ್ಕೆ ಪ್ರಾರಂಭಿಸಿದ ಇವರು ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಬಿಗ್ ಬಾಸ್ ಮೂಲಕ ಹೊಂದಿದ್ದಾರೆ ಎಂದು ಹೇಳಬಹುದು. ವಿನಯ್ ಗೌಡ ತಮ್ಮ ನೇರ ನುಡಿ ಹಾಗೂ ಖಡಕ್ ನಡತೆಯಿಂದಾಗಿ ಸದಾ ಕಾಲ ಸುದ್ದಿಯಲ್ಲಿದ್ದವರು. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ವಿನಯ್ ಗೌಡ ಅವರ ಆಸ್ತಿಯ ಲೆಕ್ಕಾಚಾರ ಮಾಡೋಣ.

ಉತ್ತಮ ಅನುಕೂಲಸ್ತ ಕುಟುಂಬದಿಂದ ಬಂದಿರುವಂತಹ ವಿನಯ್ ಗೌಡ ಅವರು ಬಿಗ್ ಬಾಸ್ ಮೂಲಕ ತಿಳಿದು ಬಂದಿರುವ ಹಾಗೆ ಕಾರ್ತಿಕ್ ಮಹೇಶ್ ಅವರಂತಹ ಸ್ನೇಹಿತರಿಗೂ ಕೂಡ ಆಶ್ರಯ ಹಾಗೂ ಸಹಾಯವನ್ನು ನೀಡಿದಂತಹ ಉತ್ತಮ ಮನಸ್ಸಿನ ವ್ಯಕ್ತಿ. ವಿನಯ್ ಗೌಡ ಅವರ ಆಸ್ತಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 15 ರಿಂದ 20 ಕೋಟಿ ಇರಬಹುದು ಎಂಬುದಾಗಿ ಅಂದಾಜು ಮಾಡಲಾಗಿದೆ.

Leave a Reply

Your email address will not be published. Required fields are marked *