ಮಾತಿನ ಮೇಲೆ ಹಿಡಿತ ಕಳೆದುಕೊಂಡು ಕೆಟ್ಟ ಭಾಷೆಯಲ್ಲಿ ಬೈದ ವಿನಯ್ ಗೌಡ!! ನಿಜಕ್ಕೂ ವಿನಯ್ ಹೇಳಿದ್ದೇನು? ಇಲ್ಲಿದೆ ನೋಡಿ ಅಸಲಿ ವಿಚಾರ!!

ಕನ್ನಡದ ಜನಪ್ರಿಯ ಶೋಗಳಲ್ಲಿ ಬಿಗ್ ಬಾಸ್ (Bigg Boss) ಕೂಡ ಒಂದು. ಈ ಬಾರಿ ಹ್ಯಾಪಿ ಬಿಗ್ ಬಾಸ್ ಟ್ಯಾಗ್ ಲೈನ್ ನೊಂದಿಗೆ ಆರಂಭವಾದ ಬಿಗ್‌ಬಾಸ್‌ ಕನ್ನಡ ಸೀಸನ್‌ 10 (Bigg Boss Sisan10) ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿನ್ನರ್ ಪಟ್ಟವನ್ನು ಯಾರು ಆಗುತ್ತಾರೆ ಎನ್ನುವುದನ್ನು ಘೋಷಿಸುವ ಮೂಲಕ ತೆರೆ ಬೀಳಲಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಕೆಲವೇ ಕೆಲವು ಸ್ಪರ್ಧಿಗಳು ಇದ್ದು, ಪ್ರತಿದಿನ ಜ-ಗಳಗಳು ನಡೆಯುತ್ತಲೇ ಇದೆ.

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಹೈ ಲೈಟ್ ಆಗುತ್ತಿರುವುದು ವಿನಯ್ ಗೌಡ (Vinay Gowda). ತನ್ನ ನಡೆ ನುಡಿ ವರ್ತನೆಗಳಿಂದ ಪ್ರತಿ ಸಂಚಿಕೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೀಗಿರುವಾಗ ಕಳೆದ ಮೂರು ವಾರಗಳಿಂದ ಕೂಲ್ ಆಗಿದ್ದ ವಿನಯ್ ಮತ್ತೆ ತನ್ನ ಹಿಂದಿನ ಮುಖದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕಡ್ಡಿ ಮುರಿದಂತೆ ಮಾತನಾಡುತ್ತಾ ಮಾತಿನ ಮೇಲೆ ಹಿಡಿತ ತಪ್ಪುವ ಈ ವಿನಯ್ ಗೌಡ ರವರು ಪ್ರತಾಪ್ (Prathap) ಅವರ ತನ್ನ ಮಾತಿನ ಚಾಟಿ ಬೀಸಿದ್ದಾರೆ.

ಹೌದು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಿನಯ್ ಗೌಡ, ಇನ್ನು ಮುಂದೆ ಜೋರಾಗಿ ಮಾತನಾಡಲ್ಲ, ಬೈಯಲ್ಲ ಯಾರ ಜೊತೆಯೂ ನಾನು ಸಿಟ್ಟಿನಿಂದ ಮಾತನಾಡಲ್ಲ ಎಂದಿದ್ದರು. ಆದರಂತೆ ಸೈಲೆಂಟ್ ಆಗಿದ್ದು ಸೈಲೆಂಟ್ ಆಗಿಯೇ ಎಲ್ಲದಕ್ಕೂ ಉತ್ತರ ನೀಡಿದ್ದರು. ಇದು ವೀಕ್ಷಕರಿಗೆ ಸ್ವಲ್ಪ ಮಟ್ಟಿಗೆ ಖುಷಿ ನೀಡಿತ್ತು. ಆದರೆ ಇದೀಗ ಅದೇ ಚಾ-ಳಿಯನ್ನು ಶುರು ಮಾಡಿರುವ ವಿನಯ್ ಪ್ರತಾಪ್ ಮೇಲೆ ಹರಿಹಾಯ್ದಿದ್ದಾರೆ.

ಕಳೆದ ವಾರ ವಿನಯ್​ ಒಬ್ಬರನ್ನು ತುಳಿದು ಮೇಲೆ ಬಂದಿದ್ದಾರೆ’ ಎಂದು ಪ್ರತಾಪ್ ಹೇಳಿದ್ದರು. ಇದರಿಂದಾಗಿ ವಿನಯ್ ಅವರು ಕೋ-ಪಗೊಂಡಿದ್ದು, ನಿನ್ನೆಯ ಸಂಚಿಕೆಯಲ್ಲಿ ವಿನಯ್ ಅವರು ಮಾತನಾಡುವಾಗ ಪ್ರತಾಪ್​ ಆರೋಪಗಳನ್ನು ಮಾಡಿದ್ದಾರೆ. ಆ ಬಳಿಕ ಪ್ರತಾಪ್​ಗೆ ಏಕವಚನ ಬಳಕೆ ಮಾಡಿ, ಇದರಿಂದ ಸಿ-ಟ್ಟಾಗಿರುವ ಪ್ರತಾಪ್ ಎ-ಚ್ಚರಿಕೆ ನೀಡಿದ್ದಾರೆ. ವಿನಯ್ ಅವರ ಮಾತು ಮಿತಿಮೀರುತ್ತಿದ್ದಂತೆ ‘ಪರಿಣಾಮ ನೆಟ್ಟಗೆ ಇರಲ್ಲ’ ಎಂದಿದ್ದಾರೆ ಪ್ರತಾಪ್.

ಈ ಮಾತನ್ನು ಕೇಳಿದ ಮತ್ತಷ್ಟು ಕೆರಳಿದ ವಿನಯ್ , ‘ತಿ* ಮುಚ್ಕೊಂಡು ಇರು..’, ‘ಏನು ಅ-ಲ್ಲಾಡ್ಸಕ್ಕೆ ಆಗಲ್ಲ. ನನಗೆ ಏನು ಮಾತನಾಡಬೇಕು ಅಂತ ಗೊತ್ತು. ನೀನು ಹೆ-ದರಿಲ್ಲ ಅಂದ್ರೆ ** ಹೋಯ್ತು’ ಎಂದಿದ್ದಾರೆ. ಈ ವೇಳೆಯಲ್ಲಿ ‘ವಾದ ಮಾಡಿ. ಆದರೆ, ಕೆ-ಟ್ಟ ಶಬ್ದ ಬಳಕೆ ಮಾಡಬೇಡಿ’ ಎಂದು ವಿನಯ್​ಗೆ ಉಳಿದ ಸ್ಪರ್ಧಿಗಳು ಬುದ್ಧಿ ಹೇಳಿದ್ದಾರೆ. ಈ ಸಂಚಿಕೆಯು ಪ್ರಸಾರ ಕಂಡಿದ್ದು, ವೀಕ್ಷಕರು ಮತ್ತೆ ವಿನಯ್ ಅವರ ಮೇಲೆ ಅಸಮಾಧಾನಗೊಂಡಿದ್ದಾರೆ. ಬಿಗ್ ಬಾಸ್ ಕೊನೆಯ ಹಂತ ತಲುಪಿರುವಾಗಲೇ ವಿನಯ್ ಅವರು ಈ ರೀತಿಯಾಗಿ ಮಾತನಾಡಿದ್ದು ಋಣಾನಾತ್ಮಕ ಪರಿಣಾಮ ಬೀರುತ್ತಾ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *