ಪತ್ನಿಗೆ ಡೈವೋರ್ಸ್ ಕೊಟ್ಟು ಬೇರೊಬ್ಬ ನಟಿಯನ್ನು ಮದುವೆಯಾಗಲು ಸಜ್ಜಾದ ತಮಿಳು ನಟ ವಿಜಯ್ ದಳಪತಿ! ಯಾರೂ ಗೊತ್ತಾ ಆ ನಟಿ? ಇಲ್ಲಿದೆ ನೋಡಿ ಮಾಹಿತಿ!!

ಕಾಲಿವುಡ್ ಅಂಗಳದಲ್ಲಿ ದಳಪತಿ ವಿಜಯ್ ಅವರ ವೈವಾಹಿಕ ಜೀವನದ ಸುದ್ದಿಯೊಂದು ಸದ್ದು ಮಾಡುತ್ತಿದೆ. ದಳಪತಿ ವಿಜಯ್ ಮತ್ತು ಸಂಗೀತಾ ದಂಪತಿಗಳು ಬೇರೆ ಬೇರೆಯಾಗಲಿದ್ದಾರೆ. ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡಲಿದ್ದಾರೆ ಎನ್ನಲಾಗಿದೆ. ಅದಲ್ಲದೇ ಈ ಡಿವೋರ್ಸ್ ನಂತರ ಖ್ಯಾತ ನಟಿಯನ್ನು ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಸದ್ದು ಮಾಡುತ್ತಿದೆ.

ತಮಿಳು ನಟ ವಿಜಯ್ ಅವರು ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದು ಅವರೇ ಈ ಸಂಗೀತ ವಿಶೇಷ. ಈ ಜೋಡಿಯ ಮೊದಲ ಭೇಟಿ 1996 ರಲ್ಲಿ ನಡೆಯಿತು. ಸಂಗೀತಾ ಅವರು ವಿಜಯ್‌ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಸಂಗೀತಾರವರು ಹೆಚ್ಚು ವಿಜಯ್ ಅವರ ಸಿನಿಮಾಗಳನ್ನು ಟಿವಿಯಲ್ಲಿ ಮತ್ತು ಥಿಯೇಟರ್‌ಗಳಲ್ಲಿ ನೋಡುತ್ತಿದ್ದರು.

ದಳಪತಿ ವಿಜಯ್ ಅವರ ಪೂವೆ ಉನಕ್ಕಾಗ ಸಿನಿಮಾ ರಿಲೀಸ್ ಆಗಿದ್ದ ಸಮಯದಲ್ಲಿ ವಿಜಯ್​ಗೆ ಶುಭಾಶಯ ತಿಳಿಸಲು ಅವರು ಅಮೆರಿಕಾದಿಂದ ನೇರವಾಗಿ ಚೆನ್ನೈಗೆ ಬಂದಿದ್ದರು. ಸಿನಿಮಾ ನೋಡಿ ಫಿದಾ ಆಗಿದ್ದ ಸಂಗೀತಾರವರು ಅಮೆರಿಕಾದಿಂದ ಭಾರತಕ್ಕೆ ಪ್ರಯಾಣಿಸಿ ಬಂದು ನಟನನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ತದನಂತರ ವಿಜಯ್ ತನ್ನ ಕಟ್ಟಾ ಅಭಿಮಾನಿ ಸಂಗೀತಾರವರನ್ನು ಕುಟುಂಬಕ್ಕೆ ಪರಿಚಯಿಸಿದ್ದರು ವಿಜಯ್. ಇದಾದ ಬಳಿಕ ವಿಜಯ್ ಕುಟುಂಬದಲ್ಲಿ ಸಂಗೀತಾ ಅವರ ಸ್ವಭಾವ ಇಷ್ಟವಾಯಿತು. ಒಳ್ಳೆಯ ಸ್ನೇಹಿತರಾಗಿದ್ದ ಇವರಿಬ್ಬರಲ್ಲಿ ಪ್ರೀತಿ ಚಿಗುರಿತು. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ಸಂಗೀತಾ ಮತ್ತು ವಿಜಯ್ ಆಗಸ್ಟ್ 25, 1999 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ವಿಜಯ್ ಮತ್ತು ಸಂಗೀತಾ ಮದುವೆಯಾಗಿ 22 ವರ್ಷಗಳೇ ಕಳೆದಿವೆ.

ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಜೇಸನ್ ಮತ್ತು ಮಗಳು ದಿವ್ಯಾ. ನಟ ವಿಜಯ್ ದಂಪತಿಗಳು ಸುಖವಾಗಿ ಸಂಸಾರ ಮಾಡುತ್ತಿದೆ. ಕುಟುಂಬದ ಮೂಲಗಳ ಪ್ರಕಾರ ವಿಚ್ಛೇದನದ ಸುದ್ದಿ ಕೇವಲ ವದಂತಿಯಾಗಿದೆ ಎನ್ನಲಾಗಿದೆ. ನಟ ವಿಜಯ್, ಸಂಗೀತಾ ದಾಂಪತ್ಯ ಜೀವನದ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ರಶ್ಮಿಕಾ ಮಂದಣ್ಣನವರ ಕೇಳಿ ಬರುತ್ತಿದೆ. ಇವರಿಬ್ಬರ ದಾಂಪತ್ಯ ಜೀವನದ ಬಿರುಕು ಮೂಡಲು ಸಾಕಷ್ಟು ಮಂದಿ ರಶ್ಮಿಕಾನೇ ಕಾರಣ ಎಂದು ಹೇಳುತ್ತಿದ್ದಾರೆ.

ದಾಂಪತ್ಯ ಜೀವನದ ಕಲಹಕ್ಕೆ ನಟಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣನೇ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ. ಆಕೆ ಕಾಲಿಟ್ಟ ಕಡೆಯೆಲ್ಲ ಸಮಸ್ಯೆನೇ ಐರೆನ್‌ ಲೆಗ್‌ ನಟಿ ಎಂದು ರಶ್ಮಿಕಾ ಮಂದಣ್ಣ ನವರ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇತ್ತ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಟ್ಟ ಮೇಲೆ ನಟಿ ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.

ಹೌದು, `ಭೈರವ’ ಮತ್ತು `ಸರ್ಕಾರ್’ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಬಳಿಕ ಇವರಿಬ್ಬರ ನಡುವೆ ಸ್ನೇಹ ಸಂಬಂಧವು ಬೆಳೆದಿದೆ. ಆದರೆ ಇದೀಗ ಪ್ರೀತಿಗೆ ತಿರುಗಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯೂ ಹೊರ ಬಿದ್ದಿಲ್ಲ.

Leave a Reply

Your email address will not be published. Required fields are marked *