ತಮಿಳು ನಟರಾದ ಸೇತುಪತಿ ಈಗ ಜವಾನ್ ಸಿನಿಮಾದ ಗೆಲುವಿನಲ್ಲಿದ್ದಾರೆ. ಮಗಳ ವಯಸ್ಸಿನವಳ ಜೊತೆ ರೋಮ್ಯಾನ್ಸ್ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾನೇ ಆಕೆ ನನ್ನ ಸಿನಿಮಾಕ್ಕೆ ಬೇಡ ಅಂತಂದೆ ಅಂತ ಹೇಳಿಕೆಯನ್ನ ಕೊಟ್ಟಿದ್ದಾರೆ. ಬರೀ ಸೌತ್ ನಲ್ಲಷ್ಟೇ ಅಲ್ಲದೆ ಉತ್ತರ ಭಾರತದಲ್ಲಿಯೂ ಕೂಡ ಅಪಾರ ಅಭಿಮಾನಿಗಳನ್ನ ಹೊಂದಿದ ಇವರು ಕರ್ನಾಟಕ ಮೂಲದ ಈ ನಟಿಯ ಜೊತೆ ರೋಮ್ಯಾನ್ಸ್ ಮಾಡುವುದು ಅಸಾಧ್ಯ ಎಂದಿದ್ದಾರೆ.
ಹಾಗಾದ್ರೆ ಆ ನಟಿ ಯಾರು? ಅವರೇ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟ ಕೃತಿ ಶೆಟ್ಟಿ ಎನ್ನುವವರು. ಈ ಚಿತ್ರದ ಮೂಲಕವೇ ದೊಡ್ಡ ಹೆಸರನ್ನು ಮಾಡಿದ ನಟಿ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಚಿತ್ರಗಳನ್ನ ನೀಡಿದ ಇವರಿಗೆ ಟಾಲಿವುಡ್ ನಲ್ಲಿ ಒಂದು ವಿಘ್ನ ಎದುರಾಗಿದೆ.

ವಿಜಯ್ ಸೇತುಪತಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಸೆಲೆಕ್ಟಾಗಿರುವ ಈಕೆಗೆ ವಿಜಯ್ ಸೇತುಪತಿ ದೊಡ್ಡ ಶಾಕ್ ನೀಡಿದ್ದಾರೆ. ಕಾರಣ ಏನೆಂದರೆ ಕೃತಿಯವರ ಮೊದಲ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಕೃತಿ ಅಪ್ಪ ಮಗಳಾಗಿ ನಟಿಸಿದ್ದರು. ಆದಕಾರಣ ಈ ಸಿನಿಮಾದಲ್ಲಿ ವಿಜಯ ಸೇತುಪತಿ ಅವರು ಈ ಸಿನಿಮಾದಲ್ಲಿ ಆ ನಟಿಯ ಜೊತೆ ಹೇಗೆ ರೋಮ್ಯಾನ್ಸ್ ಮಾಡಲಿ ಅಂತ ಹೇಳಿದ್ದಾರೆ.
ಮೊದಲ ಸಿನಿಮಾದಲ್ಲಿ ನಾನು ಯಾಕೆ ಹೇಳಿದೆ ನನ್ನ ಮಗಳಾಗಿ ನಟಿಸು ಅಂತ. ಈಗ ಹೇಗೆ ಅವಳ ಜೊತೆ ರೋಮ್ಯಾನ್ಸ್ ಮಾಡಲಿ ಅಂತ ವಿಜಯ್ ಸೇತುಪತಿಯವರೇ ಹೇಳಿಕೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಜೊತೆ ನಟಿಸುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ನಟನ ಈ ನಿರ್ಧಾರವನ್ನು ಎಲ್ಲರೂ ಗೌರವಿಸಿದ್ದಾರೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
