Vellur deepika and raja : ವಿವಾಹೇತರ ಸಂಬಂಧದಿಂದಾಗಿ ಸಂಸಾರವು ಬೀದಿಗೆ ಬಿದ್ದಿರುವ ಘಟನೆಗಳನ್ನು ಆಗಾಗ ಕೇಳುತ್ತಿರುತ್ತೇವೆ. 2019 ರಲ್ಲಿ ವೆಲ್ಲೂರು ಜಿಲ್ಲೆಯ ಆರ್ಕಾಟ್ ಬಳಿ ಪತಿ ಮತ್ತು ಒಂದು ವರ್ಷದ ಮಗನನ್ನು ಬ-ಲಿ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ತನಿಖೆ ಅಡಿ 20 ವರ್ಷದ ಮಹಿಳೆಯನ್ನು ಬಂಧಿಸಲಾಗಿತ್ತು.
ಮಗು ಮತ್ತು ಗಂಡ ಕಾಣೆ ಆಗಿದ್ದಾರೆ ಎಂದು ದೂರು ಕೊಟ್ಟಿದ್ದ ಮಹಿಳೆ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊನೆಯ ಹಂತದಲ್ಲಿ ಈ ಕೇಸ್ಪೊ ಗೆ ರೋಚಕ ತಿರುವು ಸಿಕ್ಕಿದೆ. ಪೋಲೀಸರ ಪ್ರಕಾರ, ಆರ್ಕಾಟ್ ಸಮೀಪದ ತಾಜಪುರ ಗ್ರಾಮದ ದೀಪಿಕಾ (20) ಎರಡು ವರ್ಷಗಳ ಹಿಂದೆ ಅದೇ ಪ್ರದೇಶದ ಸುಬ್ರಮಣಿ ಅವರ ಮಗ ರಾಜಾ (25) ನೊಂದಿಗೆ ವಿವಾಹವಾಗಿದ್ದರು.
ದಂಪತಿಗೆ ಒಂದು ವರ್ಷದ ಪ್ರಾಣೇಶ್ ಎಂಬ ಮಗನಿದ್ದನು. ಹೀಗಿರುವಾಗ ಇದ್ದಕ್ಕಿದ್ದಂತೆ ದೀಪಿಕಾ ತನ್ನ ಪತಿ ಮತ್ತು ಮಗ ಕೆಲವು ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಆರ್ಕಾಟ್ ತಾಲೂಕು ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ದೂರಿನ ಮೇರೆಗೆ ಪೊಲೀಸರು ನಾಪತ್ತೆಯಾದ ವ್ಯಕ್ತಿ ಮತ್ತು ಆತನ ಮಗನಿಗಾಗಿ ಹುಡುಕಾಟ ನಡೆಸಿದ್ದರು. ವಿಚಾರಣೆ ವೇಳೆ ದೀಪಿಕಾ ವ್ಯತಿರಿಕ್ತ ಉತ್ತರ ನೀಡಿದ್ದು, ರಾಜಾ ಮತ್ತು ಪ್ರಾಣೇಶ್ ನಾಪತ್ತೆಯಲ್ಲಿ ಆಕೆಯ ಪಾತ್ರವಿರಬಹುದೆಂಬ ಶಂಕೆ ತನಿಖಾಧಿಕಾರಿಗಳಲ್ಲಿ ಮೂಡಿತ್ತು.
ಪತಿ ಮತ್ತು ಮಗ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದರು. ತದನಂತರದಲ್ಲಿ ತಮ್ಮ ವಿಚಾರಣೆಯನ್ನು ತೀವ್ರಗೊಳಿಸಿದಾಗ, ದೀಪಿಕಾ ಅವರು ಇಬ್ಬರನ್ನು ಕೊ-ಲೆ ಮಾಡಿ ಅವರ ಶ-ವಗಳನ್ನು ತನ್ನ ಮನೆಯ ಸಮೀಪವಿರುವ ಸ್ಥಳದಲ್ಲಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದು ಎಲ್ಲರಿಗೂ ಶಾಕ್ ಆಗುವಂತಿತ್ತು.
ವೆಲ್ಲೂರು ಜಿಎಂಸಿಹೆಚ್ ಫೋರೆನ್ಸಿಕ್ ತಜ್ಞರು ಮತ್ತು ವೈದ್ಯರ ತಂಡದೊಂದಿಗೆ ಪೊಲೀಸರು ದೀಪಿಕಾ ತೋರಿಸಿದ ಸ್ಥಳವನ್ನು ಪರಿಶೀಲಿಸಿದಾಗ, ಎರಡೂ ಮೃ-ತ ದೇಹವು ಪತ್ತೆಯಾಯಿತು. ಶ-ವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಶ-ವಪರೀಕ್ಷೆ ವರದಿಯಲ್ಲಿ ದೀಪಿಕಾ ರಾಜನ ತಲೆಗೆ ಹೊ’ಡೆದು ಪ್ರಾಣೇಶ್ ಕತ್ತು ಹಿಸುಕಿ ಕೊ-ಲೆ ಮಾಡಿದ್ದಾಳೆ ಎಂದು ತಿಳಿದುಬಂದಿತ್ತು.
ರಾಜಾ ಅವರ ಸ್ನೇಹಿತನೊಂದಿಗೆ ದೀಪಿಕಾ ಸಂಬಂಧ ಬೆಳೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ರಾಜಾ ಮತ್ತು ತನ್ನ ಮಗ ತನ್ನ ಸಂಬಂಧಕ್ಕೆ ಅಡ್ಡಿಯಾಗಿರುವುದನ್ನು ಕಂಡ ದೀಪಿಕಾ, ತನ್ನ ಪ್ರಿಯಕರನ ಸಹಾಯದಿಂದ ಇಬ್ಬರನ್ನೂ ಕೊ-ಲೆ ಮಾಡಿದ್ದಾಳೆ, ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಒಂದು ಘಟನೆ ಕೇಳಿ ವೆಲ್ಲೂರು ಜಿಲ್ಲೆ ಗಡ ಗಡನೆ ನಡುಗಿದೆ