ಮದುವೆಯ ಕುರಿತು ನಾನಾ ರೀತಿಯ ಆ-ರೋಪ ಮಾಡಿದ್ದಕ್ಕೆ ಖಡಕ್ ಆಗಿ ಉತ್ತರ ಕೊಟ್ಟ ವರ್ತೂರ್ ಸಂತೋಷ್!

ಬಿಗ್ ಬಾಸ್​ ಕನ್ನಡ ಸೀಸನ್ 10 (Bigg Boss Sian 10) ರ ವಿನ್ನರ್ ​ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಯೊಂದು ಕಾಡುತ್ತಿತ್ತು. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಮೂಲಕ ವಿನ್ನರ್ ಯಾರೆಂದು ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ.

ಮೊದಲ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ (Drone Prathap) ಅವರು ಹೊರಹೊಮ್ಮಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಯೇಗಿಯೇ ವರ್ತೂರ್ ಸಂತೋಷ್‌ (Varthur Santhosh) ಫಿನಾಲೆ ವಾರ ಮುಟ್ಟಿದ್ದರು. ಆದರೆ ಕೊನೆಗೆ ವರ್ತೂರ್ ಸಂತೋಷ್‌ 5ನೇ ಸ್ಥಾನ ಪಡೆದುಕೊಂಡು ಹೊರ ಬಂದಿದ್ದಾರೆ.

ಇದೀಗ ವರ್ತೂರ್ ಸಂತೋಷ್‌ ಅವರು ಖಾಸಗಿ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದು, ತಮಗಾದ ಅನುಭವ ಹಾಗೂ ಸಹ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ವೈಯುಕ್ತಿಕ ಜೀವನದ ಘಟನೆಯ ಬಗ್ಗೆ ಮಾತನಾಡಿದ್ದಾರೆ.ಜೈ-ಲಿನಿಂದ ಹೋಗಿ ಬಂದ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.

ಈ ನಡುವೆ ಅವರು ಮದುವೆ ಆಗಿದ್ದಾರೆ (Marriage Video) ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜಯಶ್ರೀ ಎಂಬುವರ ಜೊತೆ ಸಂತೋಷ್ ಈ ಹಿಂದೆ ಮದುವೆ ಆಗಿದ್ದಾರೆ ಎನ್ನಲಾಗಿತ್ತು. ಕೊರೊನಾ ಸಮಯದಲ್ಲಿ ಜಯಶ್ರೀ ಎಂಬುವವರನ್ನು ಮದುವೆಯಾಗಿದ್ದ ವರ್ತೂರ್​ ಸಂತೋಷ್​ ಕೆಲ ವರ್ಷಗಳ ಬಳಿಕ ಪತ್ನಿಯಿಂದ ದೂರವಾಗಿದ್ದಾರೆ.

ಇಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ಈ ಜೋಡಿ ಬೇರೆಯಾಗಿದ್ದರು. ಆದರೆ ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್ ಅವರು ಮಾತನಾಡಿರಲಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರ್ ಸಂತೋಷ್ ಅವರ ಹೆಸರಿಗೆ ಈ ಘಟನೆಯ ತಿರುಚುವ ಮೂಲಕ ಮಸಿ ಬಳಿಯುವ ಕೆಲಸಗಳು ನಡೆದಿದ್ದವು.

ಮುಂದೊಂದು ದಿನ ತನ್ನ ಮದುವೆಯ ಬಗ್ಗೆ ಮುಕ್ತವಾಗಿ ವರ್ತೂರ್ ಸಂತೋಷ್ ಅವರು ಮಾತನಾಡಿದ್ದರು.ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ವರ್ತೂರ್ ಸಂತೋಷ್ ಅವರ ಬಳಿ ಅವರ ವೈಯುಕ್ತಿಕ ಜೀವನದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಈ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿದ ವರ್ತೂರ್ ಸಂತೋಷ್, “ಬಿಗ್ ಬಾಸ್ ಗೆ ಹೋದಾಗಲೇನಾ ವರ್ತೂರ್ ಸಂತೋಷ್ ಅವರದ್ದು ಈ ವಿಷ್ಯ ಗೊತ್ತಾಗಿದ್ದಾ.

ಅದಕ್ಕಿಂತ ಮುಂಚೆ ಈ ವಿಚಾರದ ಚರ್ಚೆ ಮಾಡಿ ಪರಿಹಾರ ಮಾಡುವುದು ಗೊತ್ತಿರಲಿಲ್ವಾ, ಇದನ್ನು ನೋಡುವಾಗ ಅದ್ರಲ್ಲಿ ಏನು ಇಲ್ಲ ಎನ್ನುವುದು ಅರ್ಥವಾಯಿತು. ನನ್ನ ತಾಯಿ ನೋವು ತಿಂದಿರುವುದಕ್ಕೆ ಹೇಗೆಲ್ಲಾ ಉತ್ತರ ನೀಡಬೇಕು ಹಾಗೆಯೇ ನೀಡ್ತೇನೆ ಬಿಡಲ್ಲ. ವೈಯುಕ್ತಿಕ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ’ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *