ಇದೀಗ ಬಂದ ಸುದ್ದಿ. ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ. ಜೈಲಿನಿಂದ ಸಂತೋಷ್ ಹೊರ ಬಂದಿದ್ದು ಹೇಗೆ ನೋಡಿ !!!

ಕರ್ನಾಟಕದಲ್ಲಿ ಎಲ್ಲಿ ನೋಡಿದರು ಹುಲಿಯುಗುರಿನದ್ದೇ ಸುದ್ದಿ, ಇಷ್ಟು ದಿನ ಕಾಣದು ಈಗ ಬೆಳಕಿಗೆ ಬಂದಿದೆ. ಹೌದು, ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ಅವರನ್ನ ಬಿಗ್ ಬಾಸ್ ಮನೆಯಿಂದ ಕರೆದುಕೊಂಡು ಹೋಗಿ ಅರೆಸ್ಟ್ ಮಾಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರವೇ ಆಗಿದೆ. ಈಗ ಅದೇ ಕೋರ್ಟ್ ಸಂತೋಷ್ ಅವರಿಗೆ ಜಾಮೀನು ನೀಡಿದೆ. ಇವತ್ತು ಸಂಜೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಂಭವವಿದೆ.

ಬಿಗ್ ಬಾಸ್ ನ ಮನೆಯಿಂದ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಕರೆದುಕೊಂಡು ಹೋಗಿ ವಿಚಾರಣೆಯನ್ನು ನಡೆಸಲಾಗಿತ್ತು. ಈಗ ಅದೇ ಕೋರ್ಟ್ ಅವರಿಗೆ ಜಾಮೀನು ನೀಡಿದೆ. ಸಂತೋಷ್ ಅವರ ಹತ್ತಿರ ಭದ್ರತೆಯ ಸಲುವಾಗಿ 4000 ರೂಪಾಯಿಯ ಮೊತ್ತವನ್ನ ಸಂತೋಷ್ ಅವರಿಂದ ಇರಿಸಿಕೊಂಡಿದೆ.

ಜೈಲಿನಿಂದ ಬಿಡುಗಡೆಯಾದ ಮೇಲೆ ಸಂತೋಷ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರ ಎನ್ನುವುದು ಹಲವರ ಕುತೂಹಲಕಾರಿ ಪ್ರಶ್ನೆಯಾಗಿದೆ. ವರ್ತುರ್ ಸಂತೋಷ್ ಎಂದೇ ಪ್ರಸಿದ್ಧರಾಗಿರುವ ಇವರು ಹಳ್ಳಿಕಾರ್ ತಳಿಯ ಹಸುಗಳನ್ನು ಸಾಕುತ್ತಾರೆ. ಬಿಗ್ ಬಾಸ್ 10 ನಲ್ಲಿ ಇವರನ್ನು ಆಮಂತ್ರಿಸಲಾಗಿತ್ತು. ಬಿಗ್ ಬಾಸ್ ಮನೆಯ ಒಳಗಡೆ ಪ್ರವೇಶ ಪಡೆದ ಕೆಲವೇ ದಿನಗಳಲ್ಲಿ ಹುಲಿಯು ಗುರು ಲಾಕೆಟ್ ಧರಿಸಿರುವ ಕಾರಣದಿಂದ ವಿಚಾರಣೆ ನಡೆಸಿ ಇವರನ್ನು ಅರೆಸ್ಟ್ ಮಾಡಲಾಗಿತ್ತು.

ಇವರು ಧರಿಸಿರುವ ಹುಲಿ ಉಗುರಿನ ಪೆಂಡೆಂಟ್ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಿತ್ತು. ಇದರಿಂದ ಅವರು ಬಿಗ್ ಬಾಸ್ ಮನೆಗೆ ಬಂದು ಅಕ್ಟೋಬರ್ 22ರಂದು ಸಂತೋಷ್ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಆದರೆ ವರ್ತೂರು ಸಂತೋಷ್ ಅವರು ಜಾಮಿನಿಗಾಗಿ ಅರ್ಜಿಯನ್ನು ಸಲ್ಲಿಸಿದರು. ಕೋರ್ಟ್ ಅದನ್ನು ಸ್ವೀಕರಿಸಿ ಇವರಿಗೆ ಜಾಮೀನು ನೀಡಿದೆ.

ಇವರಷ್ಟೇ ಅಲ್ಲದೆ ಇನ್ನೂ ಕೆಲವು ಸೆಲೆಬ್ರಿಟಿಗಳ ಮೇಲೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣದಿಂದ ಕೇಸ್ ದಾಖಲಾಗಿದ್ದು, ಇದರ ಬಗ್ಗೆ ವಿಚಾರಣೆಯನ್ನು ಸಹ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಸಂತೋಷ ಅವರಿಗೆ ಜಾಮೀನು ಸಿಕ್ಕಿದ್ದು, ಶುಕ್ರವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬರುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೊರಗಡೆ ಬಂದ ನಂತರ ಮತ್ತೆ ಬಿಗ್ ಬಾಸ್ ಗೆ ಹೋಗುತ್ತಾರಾ ಎನ್ನುವುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಮುಂದೆ ಏನಾಗುತ್ತೆ ಎಂದು ಕಾದುನೋಡಬೇಕಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *