ಮದುವೆಯಾಗಿ ನಂತರ ಹೆಂಡತಿಯನ್ನು ಅರ್ಧಕ್ಕೆ ಕೈ ಬಿಟ್ಟ ವರ್ತೂರ್ ಸಂತೋಷ್!! ಕೊನೆಗೂ ಮದುವೆಯಾದ ಆ ಹುಡುಗಿಯ ಅಸಲಿ ಮುಖವನ್ನು ಬಿಚ್ಚಿಟ್ಟ ಸಂತೋಷ್ ಹೇಳಿದ್ದೇನು ನೋಡಿ!!!

ಬಿಗ್ ಬಾಸ್ ಸೀಸನ್ 10 (Bigg Boss Sisan 10) ಭಾರಿ ಕುತೂಹಲಗಳೊಂದಿಗೆ ಸಾಗುತ್ತಿದ್ದೂ ಈಗಾಗಲೇ 59 ದಿನಗಳನ್ನು ಪೂರೈಸಿದೆ. ಐವತ್ತು ದಿನಗಳಾದ ಬಳಿಕ ಬಿಗ್ ಬಾಸ್ ಮನೆಗೆ ಇಬ್ಬರೂ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಆಟವು ಪ್ರೇಕ್ಷಕರ ಕುತೂಹಲವನ್ನು ಕೆ-ರಳಿಸಿದೆ. ಈ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ (Varthur Santhosh) ಮದುವೆಯಾಗಿರುವ ಬಗ್ಗೆ ಮಾತನಾಡಿದ್ದು ಉಳಿದ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.

ಕಳೆದ ಕೆಲವು ವಾರಗಳಿಂದ ಸುದ್ದಿಯಲ್ಲಿರುವ ವರ್ತೂರು ಸಂತೋಷ್ ಸದ್ಯಕ್ಕೆ ಬಿಗ್ ಬಾಸ್ ಮನೆಯೊಳಗೂ ಹಾಗೂ ಹೊರಗೂ ಕೂಡ ಸದ್ದಿಲ್ಲದೇ ಸುದ್ದಿಯಾಗುತ್ತಿದ್ದಾರೆ. ಹೌದು, ವರ್ತೂರು ಸಂತೋಷ್ ಅವರನ್ನು ಹುಲಿ ಉರುಗು ಧರಿಸಿದ್ದ ಆ-ರೋಪದ ಮೇಲೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ಆ ಬಳಿಕ ಜಾಮೀನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದು ತಮ್ಮ ಮೇಲೆ ಪರಿಣಾಮ ಬೀರಿದ್ದು, ಮನೆಯೊಳಗೆ ಇರಲು ಆಗುತ್ತಿಲ್ಲ ಎಂದಿದ್ದರು. ಆ ಬಳಿಕ ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ಅವರ ತಾಯಿ ಬಂದು ಅವರಿಗೆ ಸಮಾಧಾನ ಹೇಳಿದ್ದರು.

ಹೀಗಿರುವಾಗ ಬಿಗ್ ಬಾಸ್ ಮನೆಯ ಹೊರಗೆ ವರ್ತೂರು ಸಂತೋಷ್ ಅವರ ಬಗ್ಗೆ ಮತ್ತೊಂದು ವಿಚಾರವು ಕೇಳಿ ಬಂದಿತ್ತು. ಅದುವೇ ಸಂತೋಷ್ ಅವರಿಗೆ ಈಗಾಗಲೇ ಮದುವೆಯಾಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಅವರು ತಮ್ಮ ಮಗಳಿಗೆ ಮೋ-ಸ ಮಾಡಿದ್ದಾನೆ ಎಂದು ಸಂತೋಷ್ ಅವರಿಗೆ ಹೆಣ್ಣು ಕೊಟ್ಟ ಮಾವ ಆರೋಪಿಸಿದ್ದರು. ಆದರೆ ಈವರೆಗೆ ಬಿಗ್ ಬಾಸ್ ಮನೆಯಲ್ಲಿ ತಮಗೆ ಮದುವೆಯಾಗಿದೆ ಎನ್ನುವ ಬಗ್ಗೆ ಮಾತು ಕೂಡ ಆಡಿರಲಿಲ್ಲ.

ಆದರೆ ಇದೀಗ ವರ್ತೂರು ಸಂತೋಷ್ ಮದುವೆ ವಿವಾದಕ್ಕೆ ಸಂಬಂಧಪಟ್ಟಂತೆ ಬಿಗ್ ಬಾಸ್ ಮನೆಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. “ವರ್ತೂರು ಸಂತೋಷ್ ಒಳಗಡೆ ಏನಿದೆ ಎಂದು ಕೇಳಿದ್ದಕ್ಕೆ ಇವತ್ತು ಹೇಳ್ತಾ ಇದ್ದೇನೆ. ನನ್ನ ದೊಡ್ಡಪ್ಪನಿಗೆ ಹೇಳಿದ್ದೆ ನೀವು ಯಾರಿಗೆ ತಾಳಿ ಕಟ್ಟು ಅಂತೀರೋ ಅವರಿಗೆ ಕಟ್ಟುತ್ತೇನೆ ಎಂದಿದ್ದೆ. ನಾನು ಮಾತು ಕೊಟ್ಟುಬಿಟ್ಟು ಒಪ್ಪಿಕೊಂಡೆ. ಹಂಗೇ ಆಗ್ತಾ ಆಗ್ತಾ ನನ್ನ ತಾಯಿನ ಇಗ್ನೋರ್ ಮಾಡಕ್ಕೆ ಶುರುವಾಯ್ತು.

ನಾನು ಸಂಪಾದನೆ ಮಾಡಿರೋ ಜನ ಇವರನ್ನೆಲ್ಲಾ ಬಿಟ್ಟು ಇವರ ಹಿಂದೆ ಹೋಗ್ಬೇಕು ಅಂದರೆ ಅದು ಸಾಧ‍್ಯ ಇಲ್ಲ. ನಾನು ಹೋಗ್ತೀನಿ ಅವರ ಮನೆ ಹತ್ರ. ನಾನು ಮಾತು ಪ್ರಕಾರ ಬಂದರೆ ನೀನು ರಾಣಿನೇ ಈವತ್ತಿಗೂ. ಬಾ ಅಂತ ಕರೀತಿನಿ. ಫಸ್ಟ್ ಗೇಟಿಂದ ಆಚೆ ಹೋಗು ಅಂತಾರೆ ನನ್ನ. ಆವತ್ತೇ ಮಾತು ಕೊಟ್ಟು ಬಂದಿದ್ದೀನಿ. ಈವತ್ತಿಗೂ ಆ ಮಾತಿಗೆ ನಿಂತಿದ್ದೀನಿ” ಎಂದಿದ್ದಾರೆ. ಸದ್ಯಕ್ಕೆ ವರ್ತೂರು ಸಂತೋಷ್ ಅವರ ಈ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Leave a Reply

Your email address will not be published. Required fields are marked *