ಮಕ್ಕಳು ಮಾತು ಕೇಳುವುದಿಲ್ಲ ಎಂದು ಟೆನ್ಶನ್ ಬೇಡ, ಈ ದೇವಸ್ಥಾನಕ್ಕೆ ಬಂದರೆ ಎಲ್ಲಾ ಸಮಸ್ಯೆಗಳು ದೂರ, ಇಲ್ಲಿದೆ ನೋಡಿ ಮಾಹಿತಿ

ಭಾರತದಲ್ಲಿ ಹಲವು ವಿಶೇಷ ಪ್ರಸಿದ್ಧ ದೇವಾಲಯಗಳಿವೆ, ಒಂದೊಂದು ದೇವಾಲಯದ ಹಿಂದೆಯೂ ಒಂದೊಂದು ಪುರಾಣದ ಕಥೆ (Histroical Story) ಯಿರುತ್ತದೆ. ಭಾರತದಲ್ಲಿ ಇಲ್ಲೊಂದು ದೇವಾಲಯವಿದೆ. ಈ ದೇವಾಲಯಕ್ಕೆ ಮಾತು ಕೇಳದ ಮಕ್ಕಳನ್ನು ಕರೆದುಕೊಂಡು ಬಂದರೆ ಅಂತಹವರನ್ನು ಸರಿ ದಾರಿಗೆ ತರಬಹುದು. ಹಾಗಾದ್ರೆ ಆ ದೇವಾಲಯ ಯಾವುದು, ಅದು ಇರುವುದು ಎಲ್ಲಿ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಈ ದೇವಾಲಯಕ್ಕೆ ಮಾತು ಕೇಳದ ಮಕ್ಕಳನ್ನು ಕರೆದುಕೊಂಡು ಬಂದರೆ ಅಂತಹವರನ್ನು ಸರಿ ದಾರಿಗೆ ತರಬಹುದು. ಹಾಗಾದ್ರೆ ಆ ದೇವಾಲಯ ಯಾವುದು, ಅದು ಇರುವುದು ಎಲ್ಲಿ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಮಕ್ಕಳನ್ನು ಸರಿ ದಾರಿಗೆ ತರುವ ದೇವಾಲಯವು ಇರುವುದು ತಿರುಚ್ಚಿ (Tirucchi) ಯಿಂದ 6 ಕಿಮೀ ದೂರದಲ್ಲಿ. ಈ ದೇವಸ್ಥಾನದ ಹೆಸರು ವರಯೂರ್ ವೆಕ್ಕಲಿಯಮ್ಮನ್ ದೇವಸ್ಥಾನ (Varayur Vekkaliyamman Temple).

ತಮ್ಮ ಮಕ್ಕಳು ತಮ್ಮ ಮಾತು ಕೇಳುತ್ತಿಲ್ಲ, ಇಷ್ಟ ಬಂದಂತೆ ನಡೆದುಕೊಳ್ಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವ ತಂದೆ ತಾಯಿಯರು ಮಕ್ಕಳನ್ನು ಈ ದೇವಸ್ಥಾನಕ್ಕೆ ಕರೆತಂದರೆ ಅವರ ನಡವಳಿಕೆಯಲ್ಲಿ ಬದಲಾವಣೆಗಳಾಗುತ್ತವೆ. ಶುಕ್ರವಾರ ಅಥವಾ ಮಂಗಳವಾರ (Friday and Tuesday) ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ತುಂಬಾ ಒಳ್ಳೆಯದು.

ಆದರೆ ಈ ದೇವಸ್ಥಾನಕ್ಕೆ ಕರೆತರುವ ಮಕ್ಕಳು ವೆಕ್ಕಲಿ ದೇವಿಗೆ ಕೈಯಿಂದ ಎರಡು ಹಂತಗಳಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಆ ಬಳಿಕ 1 ಗಂಟೆ ಅಥವಾ 45 ನಿಮಿಷಗಳ ಕಾಲ ಈ ದೇವಸ್ಥಾನದಲ್ಲಿ ಮಕ್ಕಳು ಸಮಯ ಕಳೆಯಬೇಕು. ಈ ದೇವಸ್ಥಾನದಿಂದ ಮನೆಗೆ ಹಿಂದಿರುವ ಮುನ್ನ ಆಹಾರವನ್ನು ಖರೀದಿ ಮಾಡಿ ಕೈ ಇಲ್ಲದ ವ್ಯಕ್ತಿಗಳಿಗೆ ದಾನ ಮಾಡಿಸಿದರೆ ಒಳ್ಳೆಯದು. ಈ ಮೇಲೆ ಹೇಳಿದಂತೆ ಮಾಡಿದರೆ ಮಕ್ಕಳ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.

ಮಾತು ಕೇಳದ ಮಕ್ಕಳು ತಂದೆ ತಾಯಿಯ ಮಾತನ್ನು ಕೇಳುತ್ತಾರೆ. ಮಾತು ಕೇಳದ ಮಕ್ಕಳು ಮಾತ್ರವಲ್ಲದೇ ದೇವಾಲಯವು ಇದಕ್ಕೆ ಮಾತ್ರ ಮಹೋನ್ನತವಾಗಿಲ್ಲ. ದುಷ್ಟ ವಾಮಾಚಾರ, ಶತ್ರುಗಳ ಕಿರುಕುಳ, ಕೋರ್ಟಿನ ಕೇಸುಗಳಿಂದ ಚಿಂತೆಯಲ್ಲಿ ಮುಳುಗಿದವರು ಈ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಮಾಡಿ ಪರಿಹಾರವನ್ನು ಕಂಡು ಕೊಳ್ಳಬಹುದು.

ಮದುವೆಯಾಗದ ಯುವಕ ಯುವತಿಯರನ್ನು ಇಲ್ಲಿಗೆ ಕರೆದುಕೊಂಡು ಹೋದರೆ ಶೀಘ್ರದಲ್ಲಿಯೇ ಕಂಕಣ ಭಾಗ್ಯ ಕೂಡಿ ಬರುತ್ತವೆ. ಅದಲ್ಲದೇ, ಒಂದು ಕಾಗದದ ಮೇಲೆ ನಿಮ್ಮ ಮನಸ್ಸಿನ ಈಡೇರದ ಬಯಕೆಗಳನ್ನು ಬರೆದು ಅದನ್ನು ಹಳದಿ ದಾರದಿಂದ ಕಟ್ಟಿ ದೇವಸ್ಥಾನದಲ್ಲಿ ಕಟ್ಟಬೇಕು. ಹೀಗೆ ಮಾಡಿದರೆ ಮನಸ್ಸಿನ ಆಸೆಗಳು ಈಡೇರುತ್ತವೆ ಎನ್ನಲಾಗಿದ್ದು, ಈ ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.

Leave a Reply

Your email address will not be published. Required fields are marked *