ಮಾಸ್ಟರ್ ಆನಂದ್ ಮಗಳು ವಂಶಿಕಾ ಅಂಜನಿ ಕಶ್ಯಪ್ ಹೆಸರಿಗೆ ಕುತ್ತು.. 40 ಲಕ್ಷ ರೂಪಾಯಿ ಮೋಸ ಮಾಡಿ ಗುಳುಂ ಮಾಡಿ ಇದೀಗ ಪೊಲೀಸರ ಅತಿಥಿ

ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ಮಾಸ್ಟರ್ ಆನಂದ್ (Master Anand) ಮಗಳು ವಂಶಿಕಾ ಅಂಜನಿ ಕಶ್ಯಪ (Vamshika Anjani Kashyapa) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತನ್ನ ಮಾತಿನಿಂದಲೇ ಎಲ್ಲರನ್ನು ಒಂದು ಕ್ಷಣ ಮೋಡಿ ಮಾಡುವ ತಾಕತ್ತು ಈಕೆಗಿದೆ. ಆದರೆ ಇದೀಗ ಕಿರುತೆರೆ ನಟ ಕಮ್ ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕ ಅಂಜನಿ ಕಶ್ಯಪ ಹೆಸರನ್ನು ಹೇಳಿ ವಂ-ಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂ-ರು ದಾಖಲಿಸಲಾಗಿದೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ (Event Management Firm Head Nisha Narasappa) ಎಂಬ ಹೆಸರಿನ ಮಹಿಳೆಯೂ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಆಕ್ಟಿಂಗ್ ಹಾಗೂ ಮಕ್ಕಳ ಪೋಟೋಶೂಟ್ ಮಾಡಿಸುವುದಾಗಿ ವಂ-ಚಿಸಿದ್ದಾಳೆ. ಆಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡಿದ್ದಾಳೆ.

ನಿಮ್ಮ ಮಕ್ಕಳಿಗೂ ಚ್ಯಾನ್ಸ್​ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದಿದ್ದಾಳೆ. ಕೊನೆಗೆ ಹಣ ಕಳೆದುಕೊಂಡ ಈ ಮಕ್ಕಳ ಪೋಷಕರು ದೂರು ನೀಡಿದ್ದು, ಪೊಲೀಸರು ನಿಶಾಳನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಸ್ಟರ್​ ಆನಂದ್​ ಪತ್ನಿ ಯಶಸ್ವಿನಿ (Yashaswini) ಕೂಡ ಸದಾಶಿವನಗರ ಪೊಲೀಸ್​ ಠಾಣೆ (Sadashivanagara Police Station) ಯಲ್ಲಿ ದೂರು ದಾಖಲಿಸಿದ್ದಾರೆ.

ವಂಶಿಕ ತಾಯಿ ಯಶಸ್ವಿನಿಯವರು ಆಕೆಯ ವಿರುದ್ಧ ಕ-ಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇತ್ತ ಈ ಪ್ರಕರಣ ದಾಖಲಿಸಿಕೊಂಡು ಸದಾಶಿವನಗರ ಪೊಲೀಸರು ನಿಶಾಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಯ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, “ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ನಿಶಾ ಹಾಗೂ ಯಶಸ್ವಿನಿ ಪರಿಚಿತರಾಗಿದ್ದು, ಈ ಗೆಳೆತನದಲ್ಲಿ ಕೆಲ ಕಾರ್ಯಕ್ರಮಗಳನ್ನು ಮಾಡಿದ್ದರು. ಬಳಿಕ ಮನಸ್ತಾಪ ಬಂದು ಇಬ್ಬರು ದೂರವಾಗಿದ್ದರು. ವಂಶಿಕಾಳ ಹೆಸರು ದುರ್ಬಳಕೆ ಮಾಡಿಕೊಂಡು ಕೆಲ ಪೋಷಕರಿಗೆ ನಿಮ್ಮ ಮಕ್ಕಳಿಗೆ ಸಹ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿದ್ದಳು”.

“ಆದರೆ ಇತ್ತೀಚೆಗೆ ನಿಶಾ ಹಣ ಪಡೆದಿದ್ದಳು. ಬಳಿಕ ಅವಕಾಶವನ್ನೂ ಕೊಡಿಸದೆ, ಹಣವನ್ನೂ ವಾಪಸ್‌ ನೀಡದೆ ವಂಚಿಸಿದ್ದಳು ಎನ್ನಲಾಗಿದೆ. ಕೆಫೆಯಲ್ಲಿ ಕೆಲ ಮಕ್ಕಳ ಪೋಷಕರ ಜತೆ ಮಾತುಕತೆ ಮಾಡುವಾಗ ಹಣ ಕಳೆದುಕೊಂಡ ಪೋಷಕರು ನಿಶಾಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಗಲಾಟೆ ವಿಚಾರ ಗೊತ್ತಾಗಿ ಯಶಸ್ವಿನಿ ದೂರು ನೀಡಿದ್ದರು” ಎಂದಿದ್ದಾರೆ.

Leave a Reply

Your email address will not be published. Required fields are marked *