Uttar pradesh teacher love letter : ವಯಸ್ಸಿನ ಅಂತರವಿದ್ದು ಪ್ರೇಮ, ಮದುವೆ ಎಂದು ಮುಂದೆಸಾಗುವ ಎಷ್ಟೋ ಮಂದಿಯನ್ನು ನೋಡಿದ್ದೇವೆ. ಕಾಲೇಜಿನ ಮಕ್ಕಳೊಂದಿಗೆ ಶಿಕ್ಷಕರ ಪ್ರೇಮ ಪ್ರಸಂಗಗಳು ನಡೆದಿರುವ ಉದಾಹರಣೆಗಳಿವೆ. ಆದರೆ ಇಲ್ಲಿ 47 ವರ್ಷದ ಶಿಕ್ಷಕನಿಗೆ ಪ್ರೀತಿಯಾಗಿರುವುದು 13 ವರ್ಷದ ವಿದ್ಯಾರ್ಥಿನಿಯ ಮೇಲೆ. ತನ್ನ ಮನದಾಸೆಯನ್ನು ಹಾಳೆಯಲ್ಲಿ ಬರೆದು ವಿದ್ಯಾರ್ಥಿನಿಗೆ ನೀಡಿರುವ ಶಿಕ್ಷಕನ ಪತ್ರದ ಫೋಟೋ ಇದೀಗ ವೈರಲ್ ಆಗಿದ್ದು,
ಪತ್ರದಲ್ಲಿ ಏನೇನೆಲ್ಲಾ ಬರೆದಿದ್ದಾರೆ ಎಂದು ತಿಳಿಯಲು ಪೂರ್ಣ ಬರಹವನ್ನು ಓದಿ.ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರೇಮ ಕಥೆಯಲ್ಲಿ ಶಿಕ್ಷಕ ಎಂಟನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಗೆ ಮನ ನೀಡಿದ್ದಾನೆ. ಶಾಲೆಗೆ ರಜೆಯಿರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಬಿಟ್ಟಿರಲಾರದೆ ಹರಿ ಓಂ ಸಿಂಗ್ ಎಂಬ ಹೆಸರಿನ ಶಿಕ್ಷಕ ಬಾಲಕಿಗೆ ಪ್ರೇಮ ಪತ್ರ ಬರೆದು ನೀಡಿದ್ದಾನೆ.
ಬಾಲಕಿಯು ಪತ್ರ ಪಡೆದ ಬಳಿಕ ಪೋಷಕರ ಬಳಿ ಬಂದು ಓದಿದ್ದಾಳೆ. ಮಗಳಿಗೆ ದೊರೆತ ಪತ್ರವನ್ನು ಕಂಡ ತಂದೆ ತಾಯಿ ನೇರವಾಗಿ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಪತ್ರವನ್ನು ಓದಿದ ಮೇಲೆ ಪೋಲೀಸರು ದೌರ್ಜನ್ಯದ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪತ್ರದಲ್ಲಿ ಹರಿ ಓಂ ಸಿಂಗ್ 13 ವರ್ಷದ ಬಾಲಕಿಯನ್ನು ವಿವಾಹವಾಗುವ ಹಂಬಲವನ್ನು ಕೂಡ ವ್ಯಕ್ತಪಡಿಸಿದ್ದಾನೆ. ‘ವಿಪರೀತ ಚಳಿಯಿಂದಾಗಿ ಶಾಲೆಗೆ ರಜೆ ನೀಡಿರುವ ಕಾರಣ ನಿನ್ನನ್ನು ದಿನವು ನೋಡಲು ಸಾಧ್ಯವಾಗುತ್ತಿಲ್ಲ.ನಿನ್ನನ್ನು miss ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಬಿಟ್ಟಿರಲು ಕಷ್ಟವಾಗುತ್ತಿದೆ. ನಿನಗೆ ಸಾಧ್ಯವಾದಾಗಲೆಲ್ಲಾ call ಮಾಡು;

ಮಾತಾಡೋಣ…’ ಎಂದು ಬರೆದಿದ್ದಾನೆ.ಅಷ್ಟೇ ಅಲ್ಲದೇ ‘ರಜೆಯಿರುವ ಕಾರಣ ನೋಡದೆ ಬೇಸರವಾಗಿದೆ. ಒಮ್ಮೆ ನನ್ನನ್ನು ಭೇಟಿಯಾಗು. ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನೀನು ಪ್ರೀತಿಸುವುದು ನಿಜವಾದರೆ ನೀನು ನನ್ನನ್ನು ನೋಡಲು ಬರುವುದು ಖಂಡಿತ..
ಈ ಪತ್ರವನ್ನು ನೀ ಒಬ್ಬಳೇ ಓದಿ ಹರಿದು ಬಿಡು. ಯಾರಿಗೂ ತೋರಿಸಬೇಡ’ ಎಂದು ಕೂಡ ಬರೆದಿದ್ದ.ಪೋಷಕರು ನೀಡಿರುವ ದೂರಿನಲ್ಲಿ, ‘ನಾವು ಪತ್ರವನ್ನು ಹಿಡಿದು ಶಿಕ್ಷಕರ ಬಳಿ ನಡೆದು ಕೇಳಿದಾಗ ಸರಿಯಾಗಿ ಉತ್ತರಿಸಲಿಲ್ಲ. ಕ್ಷಮೆಯಾಚಿಸುವಂತೆ ಹೇಳಿದಾಗ ಅಸಭ್ಯವಾಗಿ ವರ್ತಿಸಿದ. ತಾನು ಕ್ಷಮೆ ಕೇಳುವುದಿಲ್ಲವೆಂದ.
ನೀವು ಪದೇಪದೇ ಹೀಗೆ ಹೇಳಿ ತೊಂದರೆ ನೀಡಿದರೆ ಎಂಟನೇ ತರಗತಿಯಲ್ಲಿ ಓದುತ್ತಿರುವ ನಿಮ್ಮ ಮಗಳನ್ನೇ ನಾಪತ್ತೆ ಮಾಡುತ್ತೇನೆಂದು ಬೆದರಿಕೆ ನೀಡಿದ’ ಎಂಬ ಸಾಲುಗಳಿವೆಯಂತೆ. ತನಿಖೆ ನಡೆಸುತ್ತಿರುವ ಪೋಲೀಸರು ಆರೋಪವು ದೃಢವಾದರೆ, ಅಪರಾಧಿಗೆ ಕಠಿಣ ಶಿಕ್ಷೆ ನೀಡುವುದಾಗಿ ತಿಳಿಸಿದ್ದಾರೆ.