ಗಂಡ ತನ್ನ ಜೊತೆಗೆ ಊಟ ಮಾಡಿಲ್ಲ ಎಂದು ಈ ಮಹಿಳೆ ತೆಗೆದುಕೊಂಡ ನಿರ್ಧಾರ ಎಂತಹದ್ದು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

Uttar pradesh jhalak and shivam saxena : ಪ್ರೀತಿ ಎನ್ನುವುದೇ ಸುಂದರವಾದ ಭಾವನೆ. ಈ ಭಾವನೆಯು ಹುಟ್ಟಲು ವಯಸ್ಸು ಬೇಕಿಲ್ಲ. ಎರಡು ಮನಸ್ಸುಗಳು ಒಪ್ಪಿದರೆ ಸಾಕು. ಬದುಕಿಗೆ ಪ್ರೀತಿ ಎನ್ನುವುದು ಬಹುಮಖ್ಯವಾಗಿದ್ದು ಮನುಷ್ಯನಿಗೆ ಎಲ್ಲವೂ ಇದ್ದು ಪ್ರೀತಿಯೇ ಇಲ್ಲವಾದರೆ ಆ ಮನುಷ್ಯನು ಹುಚ್ಚನಾಗುತ್ತಾನೆ. ಪ್ರೀತಿ ಎಂದರೆ ಅದು ಕೇವಲ ಗಂಡು ಹೆಣ್ಣಿನ ಪ್ರೀತಿ ಮಾತ್ರವಲ್ಲ, ಅಪ್ಪ ಅಮ್ಮ, ಅಣ್ಣ ತಮ್ಮ, ಅಕ್ಕ ತಂಗಿ, ಎಲ್ಲಾ ಸಂಬಂಧದಲ್ಲಿಯೂ ಪ್ರೀತಿ ಎನ್ನುವುದು ಇರುತ್ತದೆ.

ಈ ಗಂಡು ಹೆಣ್ಣಿನ ಪ್ರೀತಿಯೇ ಭಿನ್ನ. ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು ಅಲ್ಲಿ ಪ್ರೀತಿ ಚಿಗುರೊಡೆದಿರುತ್ತದೆ. ಈ ಪ್ರೀತಿಯ ಸಂಬಂಧಗಳು ಮದುವೆಯವರೆಗೂ ಬಂದು ನಿಲ್ಲುತ್ತದೆ. ಮದುವೆಯಾದ ಬಳಿಕ ಗಂಡು ಹೆಣ್ಣು ಹೊಂದಾಣಿಕೆಯಿಂದರಬೇಕು. ಹೀಗಿದ್ದಾಗ ಮಾತ್ರ ಸಂಸಾರ ಎನ್ನುವ ನೌಕೆಯು ಸರಾಗವಾಗಿ ಸಾಗಲು ಸಾಧ್ಯ.

ಆದರೆ ಇದೀಗ ಮಹಿಳೆಯೊಂದು ಪತಿಯ ನಡವಳಿಕೆಯಿಂದ ಪತ್ನಿ ಆ-ತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಹೌದು ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ. ಪತಿ ತನ್ನೊಂದಿಗೆ ಊಟ ಮಾಡದ ಹಿನ್ನೆಲೆಯಲ್ಲಿ ಮಹಿಳೆ ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು. ಶಿವಂ ಸಕ್ಸೇನಾ ಮತ್ತು ಅವರ ಪತ್ನಿ ಝಲಕ್ ಅವರು ಅಪಾರ್ಟ್‌ಮೆಂಟ್ ಬ್ಲಾಕ್‌ನ ನಾಲ್ಕನೇ ಮಹಡಿಯಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

22ರ ಹರೆಯದ ಪತ್ನಿಯು ತನ್ನ ಜೊತೆಗೆ ಊಟ ಮಾಡಿಲ್ಲ ಎನ್ನುವ ವಿಚಾರವಾಗಿ ಪತಿ ಶಿವಂ ಜೊತೆಗೆ ಜಗಳ ಮಾಡಿಕೊಂಡಿದ್ದಳು. ಹೌದು, ಝಲಕ್ ತನ್ನ ಪತಿಯೊಂದಿಗೆ ರಾತ್ರಿ ಊಟ ಮಾಡಲು ಬಯಸಿದ್ದರು, ಆದರೆ ಶಿವಂ ನಿರಾಕರಿಸಿದ್ದು, ಸ್ವಲ್ಪ ಸಮಯ ಕುಳಿತು ವಿಶ್ರಾಂತಿ ಪಡೆಯಬೇಕೆಂದು ಹೇಳಿದ್ದು, ಇದರಿಂದ ಜಗಳ ಮತ್ತಷ್ಟು ಜೋರಾಗಿತ್ತು. ಬಳಿಕ ಶಿವಂ ಬಾತ್ ರೂಂಗೆ ಹೋಗಲೆಂದು ರೂಮಿನಿಂದ ಆಕೆಯನ್ನು ತಳ್ಳಿ ಹೊರಗೆ ಹೋಗಿದ್ದನು.

ಇದರಿಂದ ಮ-ನನೊಂದ ಝಲಕ್ ಪತಿ ಬಾತ್ ರೂಮ್ ನಲ್ಲಿದ್ದಾಗ, ಜೀವವನ್ನು ಕೊ’ನೆಗೊಳಿಸುವ ನಿರ್ಧಾರ ಮಾಡಿ ಬಿಟ್ಟಿದ್ದಳು. ಈ ವೇಳೆ ದೊಡ್ಡ ಕಿರುಚಾಟ ಕೇಳಿದ ನಂತರ ಶಿವಂಗೆ ಏನಾಯಿತು ಎಂದು ಅರಿವಿಗೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದನು.ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಝಲಕ್ ಸ್ಥಳದಲ್ಲೇ ಸಾ-ವನ್ನಪ್ಪಿರುವುದನ್ನು ನೋಡಿದ್ದು,

ತದನಂತರ ಮೃ-ತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆ-ತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಯಾವುದೇ ಆ-ರೋಪಗಳಿಲ್ಲವಾದರೂ, ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಈ ಘಟನೆಯ ಬಳಿಕ ಅಪಾರ್ಟ್‌ಮೆಂಟ್‌ ಬ್ಲಾಕ್‌ನಲ್ಲಿ ವಾಸವಾಗಿದ್ದ ಝಲಕ್‌ನ ಚಿಕ್ಕಮ್ಮ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಅಧಿಕಾರಿಗಳು ಮಾತನಾಡಿದ್ದಾರೆ. ದಾಂಪತ್ಯ ಜೀವನದಲ್ಲಿ ಇಂತಹ ಸಣ್ಣ ವಿಚಾರಕ್ಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *