ಹುಡುಗ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಹುಡುಗನ ಮನೆ ಮುಂದೆ ಧರಣಿ ಕೂತು ಹುಡುಗಿ ಮಾಡಿದ ಹರಸಾಹಸಗಳೇನು ನೋಡಿ!!! ಹುಡುಗರ ಹಿಂದೆ ಬೀಳೋ ಇಂತಹ ಹುಡುಗಿಯರು ಇದ್ದಾರಾ!!!

Uttam and nisha love : ಪ್ರೀತಿಸುವ ಜೋಡಿಗಳು ತಮ್ಮ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರುತ್ತದೆ. ಆದರೆ ಈ ಪ್ರೇಮ ವಿವಾಹಕ್ಕೆ ಮನೆಯವರಿಂದ ವಿರೋಧಗಳು ಸರ್ವೇ ಸಾಮಾನ್ಯ. ಹೀಗಿರುವಾಗ ಗಂಡು ಹೆಣ್ಣು ಇಬ್ಬರೂ ಕೂಡ ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕಾಗುತ್ತದೆ. ಕೆಲವೊಮ್ಮೆ ಹುಡುಗ ಅಥವಾ ಹುಡುಗಿಯೂ ಕೈಕೊಡುವುದಿದೆ. ಆದರೆ ಇಲ್ಲೊಬ್ಬಳು ಯುವತಿಯೂ ಕೊರೆಯುವ ಚಳಿಯಲ್ಲೂ ರಸ್ತೆಯಲ್ಲೇ ಸುಮಾರು 80 ಗಂಟೆಗಳ ಕಾಲ ಧರಣಿ ಮಾಡಿದ್ದಾಳೆ.

ಈಕೆಯ ಬೇಡಿಕೆಯೂ ಕೊನೆಗೂ ಈಡೇರಿದೆ. ಈ ಯುವತಿಯ ಗೆಳೆಯ ಮತ್ತು ಆತನ ಕುಟುಂಬ ಸದಸ್ಯರು ಮದುವೆಗೆ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಘಟನೆಯೂ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಕೊನೆ ಕ್ಷಣದಲ್ಲಿ ಮದುವೆಯಾಗಲು ಗೆಳೆಯನು ನಿರಾಕರಿಸಿದ್ದನು. ಈ ಯುವತಿಯ ನಂಬರ್ ಕೂಡ ಬ್ಲಾಕ್ ಮಾಡಿದ್ದನು. ಆತನ ಗೆಳೆತಿಯೂ ಮನೆಯ ಹೊರಗೆ ಧರಣಿ ನಡೆಸಿದ್ದಾಳೆ.

ಈ ಧರಣಿ ಕುಳಿತಿರುವ ಹುಡುಗಿಯ ಹೆಸರು ನಿಶಾ. ವಯಸ್ಸು ಕೇವಲ 20 ವರ್ಷವಷ್ಟೇ. ಈ ಹುಡುಗಿಯು ಪೂರ್ವ ವಸುರಿಯಾ ನಿವಾಸಿಯಾಗಿದ್ದು, ನಾಲ್ಕು ವರ್ಷಗಳ ಹಿಂದೆ ಮಹೇಶಪುರದ ನಿವಾಸಿ ಉತ್ತಮ್ ಪಟೇಲ್ ಅವರನ್ನು ಭೇಟಿಯಾಗಿದ್ದರು. ಆಗ ನಿಶಾ ಕಾಲೇಜಿನಲ್ಲಿ ಓದುತ್ತಿದ್ದಳು. ಇಬ್ಬರೂ ಕಾಲೇಜು ಬಳಿ ಭೇಟಿಯಾಗಿ ನಿಧಾನವಾಗಿ ಪ್ರೀತಿಸತೊಡಗಿದರು.

ಜೀವನ ಪರ್ಯಂತ ಒಟ್ಟಿಗೆ ಬಾಳುತ್ತೇನೆ, ಮದುವೆಯಾಗುತ್ತೇನೆ ಎಂಬ ಭರವಸೆಯೂ ಇತ್ತು. ಈ ಸಂಬಂಧ ಇಬ್ಬರ ಕುಟುಂಬದ ಸದಸ್ಯರಿಗೂ ತಿಳಿದಿತ್ತು. ಇಬ್ಬರೂ ಪರಸ್ಪರ ಮನೆಗೆ ಭೇಟಿ ನೀಡುತ್ತಿದ್ದರು. ಮದುವೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಒಪ್ಪಂದವೂ ನಡೆದಿದ್ದು, ಮದುವೆ ದಿನಾಂಕ ಕೂಡ ನಿಗದಿಯಾಗಿದೆ. ಆದರೆ ಮದುವೆಗೆ 20 ದಿನ ಬಾಕಿ ಇರುವಾಗಲೇ ಉತ್ತಮ್ ಹಿಂದೆ ಸರಿದಿದ್ದಾರೆ ಎಂದು ಧರಣಿ ಮಾಡುತ್ತಿರುವ ಯುವತಿಯ ನಿಶಾ ಹೇಳಿಕೊಂಡಿದ್ದಾಳೆ.

ಅಷ್ಟೇ ಅಲ್ಲದೇ ಈ ಉತ್ತಮ್ ನಿಶಾಳ ನಂಬರ್ ಅನ್ನು ಬ್ಲಾಕ್ ಮಾಡಿದ್ದಾನೆ. ಬೇರೆ ದಾರಿ ಕಾಣದಿದ್ದಾಗ ನಿಶಾ ತನ್ನ ಅಜ್ಜಿ ಮತ್ತು ಇತರ ಸಂಬಂಧಿಕರೊಂದಿಗೆ ಉತ್ತಮ್ ಅವರ ಮನೆ ಮುಂದೆ ಧರಣಿ ಕುಳಿತಿದ್ದಾರೆ. ಈ ನಡುವೆ ಉತ್ತಮ್ ಹಾಗೂ ಅವರ ಕುಟುಂಬದವರು ಮನೆಯಿಂದ ಓಡಿ ಹೋಗಿದ್ದಾರೆ. ಕೊನೆಗೆ ನಿಶಾ ತಂದೆ ರಾಜಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಂತರ ಹುಡುಗನ ಮನೆಯವರು ಮಾತನಾಡಿ ಮತ್ತೆ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಮದುವೆಯಿಂದ ತುಂಬಾ ಖುಷಿಯಾಗಿದ್ದೇನೆ. ಪೊಲೀಸ್ ಠಾಣೆಯಿಂದ ಬಾಲಕನ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವುದಾಗಿ ನಿಶಾ ಹೇಳಿದ್ದಾರೆ.

Leave a Reply

Your email address will not be published. Required fields are marked *