ಶರೀರದ ಗೂಡಲ್ಲಿ, ಯಾರಿಗೂ ಕಾಣದಂತೆ ಅವಿತುಕೊಂಡಿರುವ ಆತ್ಮ, ಶರೀರವು ತನ್ನ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಿದಾಗ ತನ್ನ ಕೆಲಸಗಳನ್ನು ಬಿಡುವುದಿಲ್ಲ. ಸ-ತ್ತ ಮೇಲೆ ಆತ್ಮವು ಎಲ್ಲಿ ಹೋಗುತ್ತದೆ? ಏನು ಮಾಡುತ್ತದೆ? ಎಷ್ಟು ದಿನಗಳ ಕಾಲ ಭೂಮಿಯ ಮೇಲೆ ಅಲೆದಾಡುತ್ತಿರುತ್ತದೆ?? ಎಂಬೆಲ್ಲ ಪ್ರಶ್ನೆಗಳ ಉತ್ತರವು ತಿಳಿದರೆ ನೀವು ಅಚ್ಚರಿಗೊಳ್ಳುವುದೆಂತು ಖಂಡಿತವಾಗಿಯೂ ನಿಜ.
ಸಾ-ವು ಎಂಬುದು ಪ್ರತಿಯೊಂದು ಜೀವಿಗೂ ನೋವಿನ ಕ್ಷಣ. ಬದುಕಬೇಕೆಂಬ ಆಸೆಯಿಂದ ಮನಸ್ಸು ದುಃಖಿಸುತ್ತದೆ. ಒಂದಕೊಂದು ತಬ್ಬಿ ಕೊಂಡಿರುವ ದೇಹ ಮತ್ತು ಆತ್ಮವು ಬೇರ್ಪಡುವ ಸಮಯ. ಜೀವಿಯ ಶರೀರದಲ್ಲಿರುವಾಗ ಜೀವಿಸಬೇಕೆಂಬುದು ಕೇವಲ ದೇಹದ ಆಸೆಯಲ್ಲ; ಆತ್ಮದ್ದು ಹೌದು. ಸ-ತ್ತ ನಂತರ ಹೆಬ್ಬೆಟ್ಟಿನ ಗಾತ್ರದ ಆತ್ಮವು ದೇಹವನ್ನು ತೊರೆದು ಮೂಲಾಧಾರ ಚಕ್ರದ ಮುಖಾಂತರ ಹೊರಬರುತ್ತದೆ.
ಸಾ-ವಿನ ನಂತರ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಆತ್ಮವು ತಾನು ಹೊರ ಬಂದಿರುವ ದೇಹದೊಳಕ್ಕೆ ಒಳಹೊಕ್ಕಲು ಪ್ರಯತ್ನಿಸುತ್ತಿರುತ್ತದೆ. ಕೆಲವೊಮ್ಮೆ ರಸ್ತೆಯ ಅಪಘಾ-ತಗಳಲ್ಲಿ, ನೀರು ಬೆಂಕಿಗಳ ದುರಂತ ಘಟನೆಗಳಲ್ಲಿ ಸ-ತ್ತಿದ್ದಾರೆ ಎಂದುಕೊಂಡು ಆಸ್ಪತ್ರೆಗೆ ಕರೆದೊಯ್ದಾಗ ಜೀವ ಮರುಕಳಿಸುವ ಸಾಧ್ಯತೆಗಳು ಇರುತ್ತವೆ. ಇನ್ನು ಚಿತೆಯ ಮೇಲೆ ದಹನಕ್ಕಾಗಿ ಇರಿಸಿದ ದೇಹವು ಸಣ್ಣ ಪುಟ್ಟ ಚಲನೆಗಳೊಂದಿಗೆ ಅಥವಾ ಉಸಿರಾಟದ ಮರು ಪ್ರಾರಂಭದೊಂದಿಗೆ ಜೀವವಿರುವುದನ್ನು ತೋರ್ಪಡಿಸುವ ಘಟನೆಗಳು ವಿರಳವಾಗಿ ನಡೆದಿವೆ.
ಆತ್ಮವು ದೇಹದ ಒಳಹೊಕ್ಕಲು ಪ್ರಯತ್ನಿಸಿದಾಗ ಸಾಧ್ಯವಾಗದಿದ್ದಲ್ಲಿ, ದೇಹದ ಮೇಲಿನ ಮೋಹವನ್ನು ಸಂಪೂರ್ಣವಾಗಿ ತೊರೆದು ದೇಹದಿಂದ ದೂರ ನಡೆಯುತ್ತದೆ. ಶರೀರವನ್ನು ತ್ಯಜಿಸಿದ ಮೊದಲ ಮೂರು ದಿನಗಳ ಕಾಲ ದೇಹವನ್ನು ದಹನ ಮಾಡಿದ ಸ್ಥಳದಲ್ಲಿ ಅಥವಾ ಕುಟುಂಬಸ್ಥರ ಸಮೀಪದಲ್ಲಿ ಅಥವಾ ತನ್ನ ವಾಸಸ್ಥಳದಲ್ಲಿ ಆತ್ಮವು ಓಡಾಡುತ್ತಿರುತ್ತದೆ. ನಂತರ ತಾನು, ತನ್ನವರು ಎಂಬ ಮೋಹವನ್ನು ತೊರೆಯುತ್ತದೆ.
ನಂತರದ ಸುಮಾರು 9 ದಿನಗಳ ಕಾಲ ಆತ್ಮವು ತಾನು ಭೂಮಿಯ ಮೇಲೆ ನೋಡಬೇಕೆಂದಿರುವ ಸ್ಥಳಗಳು, ತನಗೆ ಸಹಾಯ ಮಾಡಿದ ವ್ಯಕ್ತಿಗಳು, ತನಗೆ ಮೋಸ ಮಾಡಿರುವ ವ್ಯಕ್ತಿಗಳು, ತಾನು ವ್ಯವಹಾರ ನಡೆಸಿರುವ ಸ್ಥಳಗಳು ಹೀಗೆ ಹಲವಾರು ಕಡೆಗಳಲ್ಲಿ ಅಲೆದಾಡಿ, ಮಂದಿಯನ್ನು ವೀಕ್ಷಿಸುತ್ತಾ ಇರುತ್ತದೆ. ತನ್ನ ಇಲ್ಲದಿರುವಿಕಗಾಗಿ ಶೋಕಿಸುವವರನ್ನು ಕಂಡು ತಾನು ಮರುಗುತ್ತದೆ.
ಸಂಸ್ಕಾರ ಶಾಸ್ತ್ರಗಳು ನೆರವೇರಿದ ನಂತರ 11ನೇಯ ದಿನ ಎಲ್ಲಾ ಘಟನೆಗಳಿಗೂ, ಬದುಕಿನಲ್ಲಿ ಬಂದ ಎಲ್ಲಾ ವ್ಯಕ್ತಿಗಳಿಗೂ, ಭೂಮಿಗೂ ಋಣವು ತೀರಿ ಹೋಯಿತೆಂದು ತಿಳಿದು ದೂರ ನಡೆಯುತ್ತದೆ. ನಂತರ ಆತ್ಮವು ಕರ್ಮಗಳ ಅನುಸಾರವಾಗಿ ಇನ್ನೊಂದು ದೇಹದ ಮುಖಾಂತರ ಮರು ಹುಟ್ಟು ಪಡೆಯುತ್ತದೆ ಅಥವಾ ಮುಕ್ತಿ ಹೊಂದುತ್ತದೆ.