ಮಾಡ್ರನ್ ಉಡುಗೆಯಲ್ಲಿ ಕಾಣಿಸಿಕೊಂಡ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರಾ, ಫೋಟೋ ನೋಡಿ ನೆಟ್ಟಿಗರು ಶಾಕ್

ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ನಟಿಯರ ಸಾಲಿಗೆ ನಟಿ ಸಿತಾರಾ (Sitaara) ಕೂಡ ಸೇರಿಕೊಳ್ಳುತ್ತಾರೆ. ಕಿರುತೆರೆಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್ ನಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಇವರು ಇದೀಗ ಸಿತಾರಾ ಇದೀಗ ‘ಪಾರು’ (Paaru) ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾಗಿದ್ದು, ನೀನಾಸಂ (Ninaasam) ನಲ್ಲಿ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದು ಇದೀಗ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ..

ನಟಿ ಸಿತಾರಾ, ನೇರಳೆ ಬಣ್ಣದ ವೆಸ್ಟರ್ನ್ ಡ್ರೆಸ್‌ (Western Dress) ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಧಾರಾವಾಹಿಗಳಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಇದೀಗ ಮೈ ಕಾಣುವ ತುಂಡುಗೆಯಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಯ ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಸಿತಾರ ಫೋಟೋಗಳಿಗೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.ಈ ಫೋಟೊ ನೋಡಿದ ನೆಟ್ಟಿಗರು ಕೆಡಿ ದಾಮಿನಿನಾ, ಅಬ್ಬಬ್ಬಾ ಎಷ್ಟು ಹಾಟ್ ಎಂದರೆ, ಫೋಟೋಗಳನ್ನು ನೋಡಿದ ಅಭಿಮಾನಿಗಳು ಇವರು ನಮ್ಮ ದಾಮಿನಿನಾ ಎಂದು ಕೇಳುತ್ತಿದ್ದಾರೆ.

ಸೂಪರ್, ಚೆನ್ನಾಗಿ ಕಾಣ್ತಾ ಇದ್ದೀರಿ, ಆದ್ರೂ ನಿಮಗೆ ಸೀರೆಯಲ್ಲಿ ಚೆನ್ನಾಗಿ ಕಾಣ್ತಾ ಇದ್ರಿ. ನಿಮ್ಮ ಪಾತ್ರ ಚೆಂದ ಎನ್ನುತ್ತಿದ್ದಾರೆ. ನಟಿ ಸಿತಾರಾರವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹರಿದಾಡುತ್ತಿದೆ.ಸೂಪರ್‌ ಕ್ವೀನ್‌ ಶೋ (Super Queen Show) ನಲ್ಲಿ ಸ್ಪರ್ಧಿಯಾಗಿದ್ದ ನಟಿ ಸಿತಾರಾ ಅವರು ತನ್ನ ಜೀವನದ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದರು. ಈ ವೇದಿಕೆಯ ಮೇಲೆ ಮಾತನಾಡಿದ್ದ ಸಿತಾರ, “ನನ್ನ ಜೀವನ ತುಂಬಾ ಕಷ್ಟದ್ದಾಗಿತ್ತು. ಈ ಹಂತಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ.

ಸಿತಾರ ತಾರಾ 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡೆ. ಆಗ ಅಜ್ಜಿ ಅವರನ್ನು ಸಾಕಿದ್ದರು. ಆದರೆ ವಿಧ್ಯಾಭ್ಯಾಸ ಕೊಡಿಸುವಷ್ಟು ಅಜ್ಜಿ ಶಕ್ತಳಾಗಿರಲಿಲ್ಲ. ಸಾಣಿ ಹಳ್ಳಿ ಸ್ವಾಮೀಜಿ ನನ್ನ ದತ್ತು ತೆಗೆದುಕೊಂಡಿದ್ದರು. ಪ್ರತಿಸಲ ಅನ್ನ ತಿನ್ನುವಾಗಲೂ ನಾನು ಅವರನ್ನು ನೆನಪಿಸಿಕೊಳ್ಳಬೇಕು. ಸಾಣಿ ಹಳ್ಳಿ ಶ್ರೀಗಳನ್ನು ನನ್ನನ್ನು ಸಾಕಿದ್ದು” ಎಂದಿದ್ದರು.

“ಪಿಯುಸಿ ಮುಗಿಸಿ ಡಿಗ್ರಿ ಮಾಡುವಾಗ ನೀನಾಸಂ ಸಿಕ್ತು. ರಜೆ ಬಿಟ್ರೆ ಮಕ್ಕಳೆಲ್ಲಾ ಊರಿಗೆ ಹೋಗ್ತಾರೆ. ನಾನು ಮಾತ್ರ ಒಬ್ಬಳೇ ಹಾಸ್ಟೆಲ್ ನಲ್ಲಿ ಇರ್ತಿದ್ದೆ. ನನಗೆ ಅಪ್ಪ ಅಮ್ಮ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ ಎಂದು ಹೇಳಿದ್ದರು. ನಾನು ಒಳ್ಳೆ ಪ್ರತಿಭೆ ಅಂತ ಗುರುತಿಸಿಕೊಳ್ಳಲು ಸಾಣಿಹಳ್ಳಿ ಸ್ವಾಮೀಜಿ ಕಾರಣ. ಜೀ ಕನ್ನಡದವರು ನನ್ನ ಪ್ರತಿಭೆ ಗುರುತಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದರು ಸಿತಾರ. ಈ ಹಿಂದೆಯಷ್ಟೇ ಸಿತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು , ಸದ್ಯಕ್ಕೆ ಸೀರಿಯಲ್- ವೈಯಕ್ತಿಕ ಜೀವನ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಸಿತಾರರವರ ವೃತ್ತಿ ಜೀವನಕ್ಕೆ ಪತಿ ಸಾಥ್ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *