ಹೆತ್ತ ತಂದೆ ತಾಯಿಯರು ಮದುವೆ (Marriage) ಮಾಡಿಕೊಟ್ಟ ಮೇಲೆ ತಮ್ಮ ಮನೆಯ ಹೆಣ್ಣು ನಗುನಗುತ್ತಾ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಕೈಯಲ್ಲಿ ಕಾಸಿಲ್ಲದಿದ್ದರೂ ಕೂಡ ಅದ್ದೂರಿಯಾಗಿ ಮಗಳ ಮದುವೆ ಮಾಡಿಕೊಡುತ್ತಾರೆ. ಆದರೆ ಮಗಳು ಗಂಡನ ಮನೆಯಲ್ಲಿ ಖುಷಿಯಾಗಿಲ್ಲ ಎಂದರೆ ಯಾವ ತಂದೆ ತಾಯಿಯಾದರೂ ಕೂಡ ಕಣ್ಣೀರು ಹಾಕುತ್ತಿರುತ್ತಾರೆ.
ಇಂತಹದೊಂದು ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಕಣ್ಣೀರು ಹಾಕಿದ್ದರೆ ಇತ್ತ ತಂದೆ ತಾಯಿಯು ಮಗಳ ಭವಿಷ್ಯ ಹಾಳಾಯಿತು ಎಂದು ಕೊರಗುವಂತಾಗಿದೆ. ಅಷ್ಟಕ್ಕೂ ಈ ಹೆಣ್ಣು ಮಗಳ ಬದುಕಿನಲ್ಲಿ ಏನಾಯಿತು ಎನ್ನುವುದಕ್ಕೆ ಉತ್ತರ ಇಲ್ಲಿದೆ. ರಾಮನಗರ (Ramanagara) ದ ರೇಷ್ಮೆ ಉದ್ಯಮಿ ಫೈರೋಜ್ ಖಾನ್ (Fairoj Khan) ತಮ್ಮ ಪುತ್ರಿ ಮುಸ್ಕಾನ್ ಖಾನ್ (Muskhan Khan) ಳನ್ನು ಯಾವುದೇ ಕುಂದು ಕೊರತೆ ಬಾರದಂತೆ ಮದುವೆ ಮಾಡಿಕೊಟ್ಟಿದ್ದರು.
ತುರುವೇಕೆರೆ (Turuvekere) ಮೂಲದ ಜಿಲಾನ್ ಬೇಗ್ (Jilaan Beg) ಗೆ 2 ಕೋಟಿ ಖರ್ಚು ಮಾಡಿ ಬೆಂಗಳೂರಿನ (Bangaluru) ಪ್ಯಾಲೇಸ್ ಗ್ರಾಂಡ್ ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿದರು. ಈ ಜಿಲಾನ್ ಬೇಗ್ ಗೆ ಒಂದೂವರೆ ಕೆಜಿ ಚಿನ್ನಾಭರಣ ಹಾಗೂ 18 ಲಕ್ಷ ಹಣವನ್ನೂ ವ-ರದಕ್ಷಿಣೆ ನೀಡಿದ್ದರು. ಹೀಗೆ ಅದ್ದೂರಿಯಾಗಿ ಮದುವೆಯಾದ ಈ ಜೋಡಿಯು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.
ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಚಿನ್ನದಂತಹ ಪತ್ನಿ(Wife) ಹಾಗೂ ಮುತ್ತಿನಂತಹ ಇಬ್ಬರೂ ಮಕ್ಕಳ ( Two Childrens) ಜೊತೆಗೆ ಸುಖವಾಗಿ ಸಂಸಾರ ಮಾಡುವ ಬದಲು ಈ ಜಿಲಾನ್ ಬೇಗ್ ಬೇರೆಯದ್ದೇ ಹಾದಿ ಹಿಡಿದಿದ್ದಾನೆ. ಪ್ರಾರಂಭದಲ್ಲಿ ಚೆನ್ನಾಗಿಯೇ ಇದ್ದ ಈ ಜೆಲಾನ್ ಬೇಗ್ ಪತ್ನಿ ಜೊತೆ ಜಗಳ ಶುರು ಮಾಡಿದ್ದಾನೆ. ಇತ್ತ ಪತ್ನಿ ಮುಸ್ಕಾನ್ ಖಾನ್ ಗೆ ಯಾಕೋ ಅ-ನುಮಾನವೊಂದು ಶುರುವಾಗಿದೆ.
ಹೀಗಾಗಿ ಪತಿಗೆ ಗೊತ್ತಿಲ್ಲದ್ದಂತೆ ಆಕೆಯು, ಪತಿ ಮೊಬೈಲ್ ಚೆಕ್ ಮಾಡಿದ್ದಾಳೆ. ಈ ವೇಳೆಯಲ್ಲಿ ಬೇರೆ ಹೆಂಗಸಿನ ಜೊತೆಗೆ ಚೆ-ಲ್ಲಾಟವಾಡುತ್ತಿರುವುದು ಪತ್ನಿ ಮುಸ್ಕಾನ್ ಖಾನ್ ಗೆ ಗೊತ್ತಾಗಿದೆ.ಪತ್ನಿಯ ಈ ಚೆಲ್ಲಾಟವಂತೂ ತಿಳಿದ ಬಳಿಕ ಈ ವಿಚಾರವನ್ನು ತನ್ನ ಅತ್ತೆ-ಮಾವ ಹಾಗೂ ಪೋಷಕರಿಗೆ ಹೇಳಿದ್ದಾರೆ. ಇತ್ತ ಜಿಲಾನ್ ಬೇಗ್ ಗೆ ತನ್ನ ಅಸಲಿ ಮುಖ ಪತ್ನಿಗೆ ತಿಳಿದಿದ್ದು ಮಾತ್ರವಲ್ಲದೇ ಮನೆಯವರಿಗೆ ವಿಷಯ ತಿಳಿಸಿದ್ದಾಳೆ ಎಂದು ಸಿ-ಟ್ಟುಗೊಂಡಿದ್ದಾನೆ.
ಕೊನೆಗೆ ಈ ಪತ್ನಿ, ಮಕ್ಕಳನ್ನು ತವರಿಗೆ ಕಳುಹಿಸಿದ್ದಾನೆ. ಅಷ್ಟೇ ಆಗಿದ್ದಾರೆ ಏನು ಆಗುತ್ತಿರಲಿಲ್ಲ. ಆದರೆ ಬೇರೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಆಕೆಯ ಜೊತೆಗೆ ಸುಖವಾಗಿ ಸಂಸಾರ ಮಾಡಲು ಶುರು ಮಾಡಿದ್ದಾನೆ.ಅಳಿಯ ಮಾಡುತ್ತಿರುವ ಕೆಲಸ ಗೊತ್ತಾಗುತ್ತಿದ್ದಂತೆ ಮುಸ್ಕಾನ್ ಖಾನ್ ಪೋಷಕರು (Muskhan Khan Parents) ಆತನ ಮನೆಗೆ ಹೋಗಿ ಈ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದಾರೆ.
ಆದರೆ ಜಿಲಾನ್ ಪೋಷಕರು, ಮುಸ್ಕಾನ್ ಖಾನ್ ಫೋಷಕರ ಮುಂದೆ ತನ್ನ ಮಗನು ತಪ್ಪು ಮಾಡಿಲ್ಲ ಎನ್ನುವ ರೀತಿ ಮಾತನಾಡಿದ್ದಾರೆ. ನಮ್ಮ ಮಗ ಗಂಡಸು ಅವನು ಏನು ಬೇಕಾದ್ರು ಮಾಡ್ತಾನೆ ಎಂದಿದ್ದಾರೆ. ಸದ್ಯಕ್ಕೆ ಮುಸ್ಕಾನ್ ಖಾನ್ ಪೋಷಕರ ಜೊತೆಗೆ ತುರುವೇಕೆರೆ ಪೊಲೀಸ್ ಠಾಣೆ (Turuvekere Police Station) ಮೆಟ್ಟಿಲೇರಿದ್ದು, ಪತಿ ಹಾಗೂ ಕುಟುಂಬದ ವಿರುದ್ಧ ದೂರು ನೀಡಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ಇತ್ತ ಮಗಳ ಬದುಕು ಹಾಳಾಯಿತು ಎಂದು ಹೆತ್ತವರು ಮಾತ್ರ ಕ-ಣ್ಣೀರು ಸುರಿಸುತ್ತಿದ್ದಾರೆ.