26 ವರ್ಷದ ಟೀಚರ್ ಮತ್ತು 17 ವರ್ಷದ ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು!! ಕೊನೆಗೆ ಟೀಚರ್ ಮತ್ತು ವಿದ್ಯಾರ್ಥಿ ಸಿಕ್ಕಿಬಿದ್ದ ಮೇಲೆ ಹೊರ ಬಿದ್ದ ಸ್ಪೋ ಟಕ ಸತ್ಯ ಏನು ನೋಡಿ!!

Turaiur teacher and student found missing : ಶಿಕ್ಷಕಿ ಹಾಗೂ ವಿದ್ಯಾರ್ಥಿ ಏಕಾಏಕಿ ನಾ-ಪತ್ತೆ, ಪೊಲೀಸರ ತನಿಖೆಯ ವೇಳೆ ಶಿಕ್ಷಕಿ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ಮಾಡಿದ ಕೃತ್ಯ ಬಯಲಾಯಿತು ನಿಜಕ್ಕೂ ನಡೆದಿದ್ದೇನು?..ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆದಣ್ಣ ಮುಕುತಿ ಎನ್ನುವ ಮಾತು ಕೂಡ ಇದೆ.

ಶಿಕ್ಷಕರಾದವರು ಮಕ್ಕಳ ಸರಿ ತಪ್ಪನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆ ತಾಯಿಯರು ಶಿಕ್ಷಕರ ಮೇಲೆ ಅಪಾರವಾದ ನಂಬಿಕೆ ಗೌರವವನ್ನಿಟ್ಟು, ಮಕ್ಕಳ ಭವಿಷ್ಯ ಹೊಣೆಯನ್ನು ಅವರ ಮೇಲೆ ಹಾಕಿರುತ್ತಾರೆ. ಹೀಗಾಗಿ ಮಕ್ಕಳ ಬದುಕಿಗೆ ದಾರಿ ತೋರಿಸುವವರೇ ಈ ಶಿಕ್ಷಕರು. ಅದಲ್ಲದೇ ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಕರು ಮಕ್ಕಳನ್ನು ಸ್ನೇಹಿತರಂತೆಯೇ ಕಾಣುತ್ತಾರೆ.

ಅದಲ್ಲದೇ ಮಕ್ಕಳ ಭವಿಷ್ಯವನ್ನು ಸುಂದರವಾಗಿ ಕಟ್ಟಿಕೊಡಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿಯೂ ಮಾಡಿದ ಕೆಲಸಕ್ಕೆ ಶಿ-ಕ್ಷೆ ಅನುಭವಿಸಿದ್ದಾಳೆ. ಅಂದಹಾಗೆ, ಈ ಹಿಂದೆಯಷ್ಟೇ ಶಾಲಾ ಶಿಕ್ಷಕಿಯನ್ನು ಬಂಧಿಸಿದ್ದ ಘಟನೆಯೊಂದು ನಡೆದಿತ್ತು. ತನ್ನ 17 ವರ್ಷದ ವಿದ್ಯಾರ್ಥಿಯನ್ನು ‘ವಿವಾಹ’ ಮಾಡಿದ ಆರೋಪದ ಮೇಲೆ 26 ವರ್ಷದ ಶಾಲಾ ಶಿಕ್ಷಕನನ್ನು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ತುರೈಯೂರ್ ಪೊಲೀಸರು ಬಂಧಿಸಿದ್ದರು.

ಶಾಲೆಯ ಶಿಕ್ಷಕಿ ಮತ್ತು ವಿದ್ಯಾರ್ಥಿಯೂ ನಾಪತ್ತೆಯಾಗಿದ್ದರು. ಬಾಲಕನ ಪೋಷಕರ ದೂರಿನ ಆಧಾರದ ಮೇಲೆ, ಆರಂಭಿಕವಾಗಿ ನಾ-ಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು.ಹನ್ನೊಂದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ನಾ-ಪತ್ತೆಯಾಗಿದ್ದು, ಆತನ ಪೋಷಕರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಶಾಲೆಯಲ್ಲಿ ವಿಚಾರಣೆ ನಡೆಸಿದಾಗ ಶಿಕ್ಷಕಿ ಶರ್ಮಿಳಾ ಕೂಡ ಅದೇ ದಿನ ನಾ-ಪತ್ತೆಯಾಗಿರುವುದು ಪತ್ತೆಯಾಗಿತ್ತು.

ಪೊಲೀಸರು ಅವರ ಮೊಬೈಲ್ ನಂಬರ್ ಟ್ರೇಸ್ ಮಾಡಿದ್ದು, ಎರಡೂ ನಂಬರ್ ಗಳು ಏಕಕಾಲಕ್ಕೆ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ ಇಬ್ಬರ ನಡುವೆ ಸಂಬಂಧವಿರುವುದು ಪೊಲೀಸರಿಗೆ ತಿಳಿದಿತ್ತು. ಅದಲ್ಲದೇ ಕೆಲ ದಿನಗಳ ಹಿಂದೆ ಹೊಸ ಸಿಮ್ ಕಾರ್ಡ್ ಮೂಲಕ ಮೊಬೈಲ್ ಫೋನ್ ಆಪರೇಟ್ ಮಾಡುತ್ತಿರುವುದು ಪತ್ತೆಯಾಗಿತ್ತು.

ನಂಬರ್ ಟ್ರೇಸ್ ಮಾಡಿದಾಗ ಪೊಲೀಸರಿಗೆ ಅವರಾ ವಾಸ ಸ್ಥಳ ತಿರುಚ್ಚಿಯಲ್ಲಿರುವುದು ಕಂಡು ಬಂದಿತ್ತು. ಅವರನ್ನು ಪತ್ತೆ ಹಚ್ಚಿ ತನಿಖೆ ನಡೆಸಿದಾಗ, ಅವರು ತಂಜಾವೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದು ಮನೆಯಲ್ಲಿ ವಾಸಿಸುತ್ತಿದ್ದರು ಎನ್ನುವುದು ಬಯಲಾಗಿತ್ತು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವಿವಾಹವನ್ನು ಕಾನೂನಿನ ಪ್ರಕಾರ ಗಣನೆಗೆ ಪರಿಗಣಿಸುವುದಿಲ್ಲ. ಶಿಕ್ಷಕಿಯ ವಿರುದ್ಧ ಪೋಕ್ಸೊದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಶಿಕ್ಷಕಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಇತ್ತ ಹುಡುಗನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿತ್ತು.

Leave a Reply

Your email address will not be published. Required fields are marked *