ಬದುಕಿನಲ್ಲಿ ಸುಖ ದುಃಖ, ನೋವು ನಲಿವುಗಳಿದ್ದರೆ ಈ ಬದುಕು ಸುಂದರ. ಆದರೆ ಸಣ್ಣ ಪುಟ್ಟ ಸಮಸ್ಯೆ (Problem) ಗಳಿಗೆ ಬದುಕಿಗೆ ಅಂತ್ಯ ಹಾಡುವುದು ಸರಿಯಲ್ಲ. ಅದರಲ್ಲಿ ಬದುಕಿನ ಬಗ್ಗೆ ಸಾಕಷ್ಟು ಕನಸು ಕಾಣುವ, ಜೀವನದಲ್ಲಿ ಏನೇನು ನೋಡದ ವಿದ್ಯಾರ್ಥಿಗಳು ಕೆ-ಟ್ಟ ನಿರ್ಧಾರದಿಂದ ಬದುಕನ್ನು ಅಂತ್ಯಗೊಳಿಸಿಕೊಳ್ಳುವುದನ್ನು ನೋಡಿದರೆ ಅ-ಚ್ಚರಿ ಕೂಡ ಆಗುತ್ತದೆ.
ಶಿಕ್ಷಣ ಪೂರ್ಣಗೊಳಿಸಿ, ಉದ್ಯೋಗ ಪಡೆದುಕೊಂಡು ತನ್ನ ಕನಸು ಈಡೇರಿಸಿಕೊಳ್ಳಬೇಕಾದ ವಿದ್ಯಾರ್ಥಿನಿಯೊಬ್ಬಳು ಆ-ತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ತುಮಕೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿ (Tumukur Siddharth Engineering College) ನಲ್ಲಿ ನಡೆದಿದೆ.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಯಾಗಿದ್ದ ಇಪ್ಪತ್ತು ವರ್ಷದ ಬನಸಿರಿ (Banasiri) ಯು ಜೀ-ವಕಳೆದುಕೊಂಡ ದು-ರ್ದೈವಿ. ಗೃಹಸಚಿವ ಡಾ.ಜಿ ಪರಮೇಶ್ವರ್ (Dr.G Parameshwar) ಒಡೆತನದ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ (Hostel) ನಲ್ಲಿ ಘಟನೆಯು ನಡೆದಿದ್ದು ವಿದ್ಯಾರ್ಥಿನಿಯರನ್ನು ಬೆ-ಚ್ಚಿ ಬೀಳಿಸಿದೆ.
ಮೃ-ತ ವಿದ್ಯಾರ್ಥಿನಿ ಬನಸಿರಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ (Chitradurga District Holalkere) ಮೂಲದವರಾಗಿದ್ದು, ಬಿಇ ಮೂರನೇ ಸೆಮಿಸ್ಟರ್ ನ ಐಎಸ್ ವಿಭಾಗದಲ್ಲಿ ಓದುತ್ತಿದ್ದಳು ಈ ಬನಸಿರಿ. ಸದ್ಯಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಬನಸಿರಿಯ ಮೃ-ತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಘಟನೆ ನಡೆದಿರುವ ಸ್ಥಳಕ್ಕೆ ಡಿವೈಎಸ್ ಪಿ ಚಂದ್ರಶೇಖರ್ (DYSP P Chandrashekhar), ತಿಲಕ್ ಪಾರ್ಕ್ ಸರ್ಕಲ್ ಇನ್ಸ್ ಪೆಕ್ಟರ್ (Tilak Park Inspector) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನಿಯರಿಂಗ್ ಓದುತ್ತಿದ್ದ ಈಕೆಯು ಪರೀಕ್ಷೆಯಲ್ಲಿ ಕೆಲ ಸಬ್ಜೆಕ್ಟ್ಗಳು ಬ್ಯಾಕ್ ಉಳಿದಿತ್ತು. ಹೀಗಾಗಿ ಮ-ನನೊಂದು ವಿದ್ಯಾರ್ಥಿನಿ ಆ-ತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.