ಪತಿಯ ವರ್ತನೆಗೆ ಬೇಸೆತ್ತ ಪತ್ನಿ, ತನ್ನ ಸಂಬಂಧಿ ಜೊತೆ ಸೇರಿ ಪತಿಯನ್ನೇ ಮು-ಗಿಸಿದ ಮಡದಿ, ಮುಂದೇನಾಯಿತು ಗೊತ್ತಾ?

ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇತ್ತೀಚೆಗಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಇತ್ತೀಚೆಗಷ್ಟೇ ತಿರುಚ್ಚಿ (Tirucchi) ಈರುಳ್ಳಿ ವ್ಯಾಪಾರಿ ಕೊ-ಲೆ ಪ್ರ-ಕರಣವು ಬಾರಿ ಸಂಚಲನ ಮೂಡಿಸಿದೆ. ಹಾಗಾದ್ರೆ ಈ ಘಟನೆ ನಡೆಯಲು ಕಾರಣವೇನು ಎನ್ನುವುದನ್ನು ನೀವಿಲ್ಲಿ ನೋಡಬಹುದು. ತಿರುಚ್ಚಿ ಜಿಲ್ಲೆಯ ಸೋಮರಸಂಪೇಟೆ (Somavara Pete) ಸಮೀಪದ ವಾಸನ್ವೇಲಿ ನಿವಾಸಿ 44 ವರ್ಷದ ಶಿವಲಿಂಗಂ( Shivalingam) ಈರುಳ್ಳಿ ವ್ಯಾಪಾರಿ.

4 ವರ್ಷಗಳ ಹಿಂದೆ ಮಧುರೈ (Madhurai) ನ ಮೇಲೂರಿನ ಧನಲಕ್ಷ್ಮಿ (Meluru Dhanalakshmi) ಅವರನ್ನು ವಿವಾಹವಾಗಿದ್ದರು. ವಾಸನವೇಲಿ 10ನೇ ಅಡ್ಡರಸ್ತೆಯಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಶಿವಲಿಂಗಕ್ಕೆ ಕು-ಡಿತದ ಚಟವಿತ್ತು. ಹೀಗಾಗಿ, ಪ್ರತಿದಿನ ಕುಡಿದು ಬಂದು ಧನಲಕ್ಷ್ಮಿಯೊಂದಿಗೆ ಜಗಳವಾಡುತ್ತಿದ್ದನು. ಇದರಿಂದ ಕೋಪಗೊಂಡ ಧನಲಕ್ಷ್ಮಿ ತನ್ನ ಸಂಬಂಧಿ 40 ವರ್ಷದ ಸೆಂಥಿಲ್‌ಕುಮಾರ್ (Sentil Kumar) ನನ್ನು ಮನೆಗೆ ಕರೆಸಿ ಶಿವಲಿಂಗನಾ ಕಥೆ ಮುಗಿಸಿದ್ದಾಳೆ.

ತದನಂತರದಲ್ಲಿ ಧನಲಕ್ಷ್ಮಿ ಅವರ ಸಂಬಂಧಿ ಆರುಮುಗಂ (Arumugam) ಮತ್ತು ಅವರ ಪತ್ನಿ ಸುಮತಿ (Sumathi) ಅವರ ಸಹಾಯದಿಂದ ಶಿವಲಿಂಗನ ದೇಹಕ್ಕೆ ಪೆ-ಟ್ರೋಲ್ ಹಾಕಿ ಸು-ಡಲು ನಿರ್ಧರಿಸಿದ್ದಾರೆ. ಈ ವೇಳೆಯಲ್ಲಿ ಶಿವಲಿಂಗಂ ಅವರ ಮೃತದೇಹವನ್ನು ವ್ಯಾನ್‌ನಲ್ಲಿ ಮನಪಾರೈ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ. ಹೀಗಿರುವಾಗ ನವಲೂರು ಪ್ರದೇಶಕ್ಕೆ ಆಗಮಿಸಿದಾಗ ರಾಮ್‌ಜಿನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆಗ ಸೆಂಥಿಲ್‌ಕುಮಾರ್ ಓಡಿ ಹೋಗಿದ್ದು, ನಂತರ ಪೊಲೀಸರು ಧನಲಕ್ಷ್ಮಿ, ಆರುಮುಗಂ ಮತ್ತು ಸುಮತಿ ಎಂಬ ಮೂವರನ್ನು ವಶ ಪಡಿಸಿಕೊಂಡಿದ್ದಾರೆ. ಈ ಮೂವರನ್ನೂ ಸೋಮರಸಂಪೇಟೆ ಪೊಲೀಸರ ವ-ಶಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಧನಲಕ್ಷ್ಮೀಯನ್ನು ವಿಚಾರಿಸಿದಾಗ ಅಸಲಿ ಸತ್ಯವು ಬೆಳಕಿಗೆ ಬಂದಿದೆ. ಧನಲಕ್ಷ್ಮಿ ಅವರು ತಮ್ಮ ಹೇಳಿಕೆಯಲ್ಲಿ ಹೇಳಿರುವ ಕೆಲವು ಮಾಹಿತಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

“ಮಧುರೈನ ಮೇಲೂರಿನ ಪ್ರಭು ಮತ್ತು ನಾನು (ಧನಲಕ್ಷ್ಮಿ) ಮದುವೆಯಾಗಿದ್ದು, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗೆ 14 ವರ್ಷದ ಮಗಳಿದ್ದಾಳೆ. ಪ್ರಭು ಮತ್ತು ನನ್ನ ನಡುವೆ ಸಣ್ಣ ಪುಟ್ಟ ಜಗಳಗಳು ಆಗುತ್ತಿತ್ತು. ಇದರಿಂದ ನನ್ನ ಮಗಳನ್ನು ಮಧುರೈನ ಮೇಲೂರಿನ ಹಾಸ್ಟೆಲ್‌ನಲ್ಲಿ ಓದುತ್ತಿದ್ದೇನೆ. ಈ ಮಧ್ಯೆ, ನಾನು ನನ್ನ ಪತಿಯಿಂದ ಬೇರ್ಪಟ್ಟು, ತಿರುಚ್ಚಿಯ ಕರುಮಂಡಪಂನಲ್ಲಿ ವಾಸಿಸುವ ನನ್ನ ಸೋದರಸಂಬಂಧಿ ಆರುಮುಗಂ ಅವರ ಈರುಳ್ಳಿ ಅಂಗಡಿಗೆ ಸೇರಿಕೊಂಡೆನು.

ಈ ವೇಳೆಯಲ್ಲಿ ನನಗೆ ತಿರುಚ್ಚಿ ಕರುಮಂಡಪದಲ್ಲಿ ಈರುಳ್ಳಿ ಮಾರುತ್ತಿದ್ದ ಶಿವಲಿಂಗದ ಪರಿಚಯವಾಯಿತು. ಇಬ್ಬರೂ ಕೂಡ ಇಷ್ಟ ಪಟ್ಟು ಮದುವೆ ಮಾಡಿಕೊಂಡೆವು. ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸವಾಗಿದ್ದೆವು. ನಮಗೆ 2½ ವರ್ಷದ ಮಗನಿದ್ದಾನೆ. ಈ ವೇಳೆ ನನ್ನ 2ನೇ ಪತಿ ಶಿವಲಿಂಗಂ ಪ್ರತಿ ದಿನ ಕುಡಿದು ಬಂದು ಜಗಳ ಮಾಡುತ್ತಿದ್ದದ್ದು ನನಗೆ ಕಿರಿಕಿರಿಯಾಗಿತ್ತು. ಈ ವಿಚಾರವನ್ನು ನನ್ನ ಸಂಬಂಧಿ ಸೆಂಥಿಲ್‌ಕುಮಾರ್‌ಗೆ ತಿಳಿಸಿದಾಗ ಅವರು ನನಗೆ ಸಾಂತ್ವನ ಹೇಳಿದ್ದಾನೆ.

ನಮ್ಮಿಬ್ಬರ ನಡುವಿನ ಸಾಂತ್ವನದ ಮಾತುಗಳು ನಮ್ಮ ನಡುವೆ ಸ್ನೇಹ ಬೆಳೆಯಲು ಕಾರಣವಾಯಿತು. ನಾವಿಬ್ಬರೂ ಖಾಸಗಿಯಾಗಿ ಭೇಟಿಯಾಗುತ್ತಿದ್ದೆವು. ಇದೇ ವೇಳೆ ಹಾಸ್ಟೆಲ್ ನಿಂದ ಮಗಳನ್ನು ಕರೆತಂದು ತನಗೆ ಮದುವೆ ಮಾಡಿಸುವಂತೆ ಶಿವಲಿಂಗಂ ಒತ್ತಾಯಿಸುತ್ತಿದ್ದನು. ಅಲ್ಲದೆ ನನ್ನನ್ನು ವೇ-ಶ್ಯಾವಾಟಿಕೆ ನಡೆಸುವಂತೆ ಒತ್ತಾಯಿಸಿದ್ದನು. ಅವನೂ ದಿನಾಲೂ ಕುಡಿದು ಬಂದು ಥ-ಳಿಸುತ್ತಿರುವ ವಿಚಾರವನ್ನು ಸೆಂಥಿಲ್‌ಕುಮಾರ್‌ಗೆ ತಿಳಿಸಿದ್ದೆ.

ನಾನು ಮತ್ತು ಸೆಂಥಿಲ್‌ಕುಮಾರ್ ಶಿವಲಿಂಗನ ಜೊತೆ ನಿನ್ನೆ ಮೊನ್ನೆ ಮಾತನಾಡಿದ್ದೆವು. ಈ ವೇಳೆಯಲ್ಲಿ ವಾಗ್ವಾದ ನಡೆಯಿತು. ಆಗ ಸೆಂಥಿಲ್‌ಕುಮಾರ್ ಶಿವಲಿಂಗವನ್ನು ಹಿಡಿಯುವಂತೆ ಹೇಳಿ, ನಾನು ಕೋಪದಲ್ಲಿ ಕಬ್ಬಿಣದ ರಾ-ಡ್‌ನಿಂದ ಥ-ಳಿಸಿದೆ. ನಂತರ ನಾವಿಬ್ಬರು ಸೇರಿ ಶಿವಲಿಂಗದ ಕೊರಳಿಗೆ ಹಗ್ಗದಿಂದ ಬಿ-ಗಿದು ಕೊ-ಲೆ ಮಾಡಿದೆವು.ಈ ಕೊ-ಲೆಯನ್ನು ಮುಚ್ಚಿಹಾಕಲು ಶಿವಲಿಂಗದ ಶ-ವವನ್ನು ಗೋಣಿಚೀಲದಿಂದ ಮುಚ್ಚಿ ಕಬ್ಬಿಣದ ತಂತಿಯಿಂದ ಸುತ್ತಿದ್ದೇವೆ.

ಈ ಕೊ-ಲೆಯ ಬಗ್ಗೆ ನನ್ನ ಸಂಬಂಧಿ ಆರುಮುಗಂ ಮತ್ತು ಆತನ ಪತ್ನಿ ಸುಮತಿಗೆ ತಿಳಿಸಿದ್ದೆ. ಅವರ ಸಹಾಯದಿಂದ ಮೃ-ತದೇಹವನ್ನು ವ್ಯಾನ್‌ನಲ್ಲಿ ತುಂಬಿಕೊಂಡು ಹತ್ತಿರದ ಪೆಟ್ರೋಲ್ ಬಂಕ್‌ಗೆ ಹೋದೆವು. ಅಲ್ಲಿ ಪೆಟ್ರೋಲ್ ಕ್ಯಾನ್ ಖರೀದಿಸಿ ಮನಪಾರೈ ಕಡೆಗೆ ಹೊರಟೆವು. ನಂತರ ನವಲೂರು ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ಬಳಿ ಹೋದಾಗ ಅಲ್ಲಿಗೆ ಬಂದ ಪೊಲೀಸರು ನಮ್ಮನ್ನು ಹಿಡಿದರು ಎಂದು ಹೇಳಿಕೊಂಡಿದ್ದಾಳೆ. ಈಗಾಗಲೇ ಪ-ರಾರಿಯಾಗಿರುವ ಸೆಂಥಿಲ್‌ಕುಮಾರ್‌ಗಾಗಿ ಪೊಲೀಸರು ತೀ-ವ್ರ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *