ಚಾಲೆಂಜಿಂಗ್ ಸ್ಟಾರ್​ ನಟ ದರ್ಶನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರಾ ಟಾಲಿವುಡ್ ಸ್ಟಾರ್ ನಟ? ಇಲ್ಲಿದೆ ನೋಡಿ ಅಸಲಿ ವಿಚಾರ

ಸ್ಯಾಂಡಲ್​ವುಡ್​ನ ಚಾಲೆಂಜಿಂಗ್ ಸ್ಟಾರ್​ ನಟ ದರ್ಶನ್ (Challenging Star Darshan) ಅವರು ಕನ್ನಡ ಸಿನಿಮಾರಂಗದಲ್ಲಿ ಭಾರಿ ಬೇಡಿಕೆ ಯನ್ನು ಹೊಂದಿರುವ ನಟರಲ್ಲಿ ಒಬ್ಬರು. ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ಅವರ ಅಭಿನಯದ ಕಾಟೇರ ಸಿನಿಮಾವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಬಹುನಿರೀಕ್ಷಿತ ‘ಕಾಟೇರ’ (Katera) ಚಿತ್ರವು ಇದೇ ಡಿ.29ರಂದು ತೆರೆಗೆ ಬರಲು ಸಜ್ಜಾಗಿವೆ.

ನಟ ದರ್ಶನ್ – ತರುಣ್ ಸುದೀರ್(Tarun Sudhir) ರಾಕ್‌ಲೈನ್‌ ಕಾಂಭಿನೇಷನ್‌ನಲ್ಲಿ ಸಿನಿಮಾವು ಮೂಡಿ ಬರುತ್ತಿದೆ. ‘ಬಹುತೇಕ ಚಿತ್ರಮಂದಿಗರಳಲ್ಲಿ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ (Ticket Sold Out) ಆಗಿವೆ. ಈ ಎಲ್ಲವನ್ನು ನೋಡಿದರೆ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಲು ಸಜ್ಜಾಗಿರುವುದು ಪಕ್ಕಾ.ಹೀಗಿರುವಾಗ ನಟ ದರ್ಶನ್ ಅವರು ಮುಂದಿನ ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಕನ್ನಡ ಚಿತ್ರರಂಗದ ನಿರ್ದೇಶಕ ಪ್ರೇಮ್​ (Prem) ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ಸಿನಿಮಾದಲ್ಲಿ ದರ್ಶನ್​ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಪರಭಾಷೆಯ ಸ್ಟಾರ್ ನಟರೊಬ್ಬರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಹೌದು ದರ್ಶನ್ ನಟನೆಯ ಸಿನಿಮಾದಲ್ಲಿ ಟಾಲಿವುಡ್​ನ ಮೆಗಾಸ್ಟಾರ್​ ನಟ ಚಿರಂಜೀವಿ (Chiranjeevi) ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದಲ್ಲದೇ ಇತ್ತೀಚೆಗಷ್ಟೇ ​ ಹೈದರಾಬಾದ್​ಗೆ ತೆರಳಿದ್ದರು. ಈ ವೇಳೆಯಲ್ಲಿ ಚಿರಂಜೀವಿ ಅವರಿಗೆ ಕಥೆ ವಿವರಿಸಿದ್ದು, ಹೀಗಾಗಿ ಮೆಗಾ ಸ್ಟಾರ್ ಚಿರಂಜೀವಿಯವರು ಅಭಿನಯಿಸುವುದು ಪಕ್ಕಾ ಎನ್ನಲಾಗಿದೆ. ನಟ ದರ್ಶನ್​ ಹಾಗೂ ಪ್ರೇಮ್ ಅವರ ಜೊತೆ ಸೇರಿ ‘ಕರಿಯ’ (Kariya) ಸಿನಿಮಾವು ಮಾಡಿ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದರು.

ಆದರೆ ಇದೀಗ ನಟ ದರ್ಶನ್ ಹಾಗೂ ಪ್ರೇಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾವೊಂದು ಮೂಡಿ ಬರಲಿದೆಯಂತೆ. ಪ್ರೇಮ್ ಅವರು ಅಂದುಕೊಂಡಂತೆ ಚಿರಂಜೀವಿಯವರು ಸಿನಿಮಾಕ್ಕೆ ಒಪ್ಪಿಕೊಂಡಿದ್ದು, ಮುಂದಿನ ವರ್ಷ ಜೂನ್​ 2024ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಈ ಮೂವರ ಕಾಂಬಿನೇಶನ್ ನಲ್ಲಿ ಮೂಡಿ ಬರುವ ಈ ಸಿನಿಮಾದ ಬಗ್ಗೆ ಫ್ಯಾನ್ಸ್ ಗಳಲ್ಲಿ ಭಾರಿ ನಿರೀಕ್ಷೆಯು ಮೂಡಿದೆ.

Leave a Reply

Your email address will not be published. Required fields are marked *