ಹೆಂಗಳೆಯರಿಗೆ ಆಭರಣ (Gold) ವೆಂದರೆ ಹೆಚ್ಚು ವ್ಯಾಮೋಹ. ಹೀಗಾಗಿ ಚಿನ್ನ ಖರೀದಿಯತ್ತ ಒಲವು ತೋರಿಸುವವರೇ ಈ ಮಹಿಳೆಯರು. ಆದರೆ ಎಲ್ಲಾ ಮಹಿಳೆಯರಿಗೂ ಚಿನ್ನ ಖರೀದಿ ಮಾಡುವುದು ದೂರದ ಮಾತಾಗಿರುತ್ತದೆ. ಅದಲ್ಲದೇ, ಈ ಮಹಿಳೆಯರ ಬಳಿ ಚಿನ್ನವಿಲ್ಲ ಎಂದರೂ ಕೂಡ ನಂಬುವುದು ಸ್ವಲ್ಪ ಕಷ್ಟವೇ. ಹೌದು ಮಹಿಳೆಯರು ಅಲ್ಪವಾದರೂ ಕೂಡ ಚಿನ್ನವನ್ನು ಹೊಂದಿರುತ್ತಾರೆ.
ಪುರುಷರಿಗಿಂತ ಮಹಿಳೆಯರು ಈ ಚಿನ್ನದ ಮೇಲೆ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ.ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆ (Market)ಯಲ್ಲಿ ಚಿನ್ನದ ಬೆಲೆ (Gold Rate) ಯಲ್ಲಿ ಏರುಪೇರು ಆಗುತ್ತಲೇ ಇದೆ. ಏರಿಕೆ ಹಾಗೂ ಇಳಿಕೆಯೆಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರವುದನ್ನು ಕಾಣಬಹುದು. ಇತ್ತೀಚೆಗಿನ ದಿನಗಳಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡು ಬರುತ್ತಿದ್ದು, ಮಹಿಳೆಯರು ಚಿನ್ನ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ.
ಅದರಲ್ಲಿ ಗಣೇಶನ ಹಬ್ಬ (Ganesh Chaturthi Festival) ಹತ್ತಿರ ಬರುತ್ತಿದ್ದಂತೆ ಬಂಗಾರದ ಬೆಲೆಯಲ್ಲಿ ಕುಸಿತ ಕಂಡಿರುವುದು ಮಹಿಳೆಯರ ಸಂತಸಕ್ಕೆ ಕಾರಣವಾಗಿದೆ. ಹಾಗಾದ್ರೆ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ (Gold and Silver Rate) ದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,830 ರೂಪಾಯಿಯಾಗಿದೆ. ಬೆಳ್ಳಿಯು 100 ಗ್ರಾಂಗೆ 7,400 ರೂಪಾಯಿಯಿದ್ದು, ಬೆಂಗಳೂರಿನಲ್ಲಿ (Banglore) ಚಿನ್ನದ ಬೆಲೆ 10 ಗ್ರಾಂಗೆ 54,840 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಂಗೆ 7,325 ರೂ, ಇದೆ.
ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಬೆಂಗಳೂರಿ (Banglore) ನಲ್ಲಿ 54,840 ರೂ, ಚೆನ್ನೈ (Chennai)ನಲ್ಲಿ 55,150 ರೂ, ಮುಂಬೈ (Mumbai)ನಲ್ಲಿ 54,840 ರೂ, ದೆಹಲಿ(Dehali) ಯಲ್ಲಿ 54,990 ರೂ, ಕೋಲ್ಕತಾ (Culcutta) ದಲ್ಲಿ 54,840 ರೂ, ಕೇರಳ (Kerala) ದಲ್ಲಿ 54,840 ರೂ, ಅಹ್ಮದಾಬಾದ್ (Ahamadabad)ನಲ್ಲಿ 54,890 ರೂ, ಜೈಪುರ್ (Jaipur) ನಲ್ಲಿ 54,990 ರೂ, ಲಕ್ನೋ (Lacno)ದಲ್ಲಿ 54,990 ರೂ ಹಾಗೂ ಭುವನೇಶ್ವರ್ (Bhuveshwar) ನಲ್ಲಿ 54,840 ರೂಪಾಯಿದ್ದು ದೇಶದ ಎಲ್ಲೆಡೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದನ್ನು ಕಾಣಬಹುದು.